ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ

0
15

ರಾಣೇಬೆನ್ನೂರು

                 ದಿನಾಂಕ: 04-09-2018 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಏರ್ಪಡಿಸಿದ ರಾಣೇಬೆನ್ನೂರು ತಾಲೂಕಾ ಮಟ್ಟದ ಕ್ರಿಡಾಕೂಟದಲ್ಲಿ ಕೆ. ಎಲ್. ಇ. ಸಂಸ್ಥೆಯ ರಾಜ ರಾಜೇಶ್ವರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ಥ್ರೋಬಾಲ್, ಬಾಲ್‍ಬ್ಯಾಡಮಿಂಟನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರಿಯಾಂಕ ಅಸುಂಡಿ 3000 ಮೀಟರ್, 1500 ಮೀಟರ್ ಮತ್ತು 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಗುರುರಾಜ ಯಡಗೋಡಿ 800 ಮೀಟರ್ ಓಟದಲ್ಲಿ ದ್ವಿತೀಯ ಸಾಥನ ಪಡೆದಿದ್ದಾನೆ. ಇವರಿಗೆ ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವ್ಹಿ. ಪಿ. ಲಿಂಗನಗೌಡರ ಹಾಗೂ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಿ. ಎಸ್. ಪಟ್ಟಣಶೆಟ್ಟಿ, ಶ್ರೀ ವೀರಣ್ಣ. ಬ. ಅಂಗಡಿ, ಪ್ರೌಢಶಾಲೆಯ ಉಪಪ್ರಾಚಾರ್ಯರಾದ ಶ್ರೀ ಪಿ. ಪ್ರಹ್ಲಾದ ಮತ್ತು ದೈಹಿಕ ಶಿಕ್ಷಕರಾದ ಶ್ರೀ ರವಿ. ವಾಯ್. ದೊಡ್ಡಣ್ಣನವರ, ಶ್ರೀಮತಿ ರೂಪಾ. ಎಂ. ಕಡೂರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here