ಜಿಲ್ಲಾ ಮಟ್ಟಕ್ಕೆ ಆಯ್ಕೆ

0
23

ತುಮಕೂರು

            ನಗರದ ಶೇಷಾದ್ರಿಪುರಂ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ತುಮಕೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಭೂತಪೂರ್ವ ಸಾಧನೆಯನ್ನುಮಾಡಿದ್ದಾರೆ.ಕಬಡ್ಡಿ,ಓಟ,ಬ್ಯಾಡ್ಮಿಂಟನ್,ಟೇಬಲ್,ಟೆನ್ನಿಸ್,ಥ್ರೋಬಾಲ್,ಲಾಂಗ್ ಜಂಪ್, ಹೈ ಜಂಪ್,ಟ್ರಿಪಲ್ ಜಂಪ್, ಎಲ್ಲಾ ಕ್ರೀಡೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರ ಈ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳದ ವೊಡೆ.ಪಿ. ಕೃಷ್ಣ ಹಾಗೂ ಗೌರ್ನಿಂಗ್ ಕೌನ್ಸಿಲ್ ಚೇರ್ಮನ್ ಟಿ.ಎಸ್ ಹೆಂಜಾರಪ್ಪರವರು ಅಭಿನಂದಿಸಿದ್ದಾರೆ.

           ಕಾಲೇಜಿನ ವಿಧ್ಯಾರ್ಥಿಗಳಿಗೆ ಪಾಠದ ಜೊತೆಗೆ ಸಹಪಾಠದ ಚಟುವಟಿಕೆಯಾದ ಕ್ರೀಡೆಗೆ ಪ್ರೊತ್ಸಾಹ ನೀಡಿ ಮಕ್ಕಳ ಸಮಗ್ರಬೆಳವಣಿಗೆಗೆ ಸಹಕಾರಿಯಾದ ವಾತಾವರಣವನ್ನು ಸೃಷ್ಟಿಸಿದ ಕಾಲೇಜಿನ ಪ್ರಾಚಾರ್ಯರ ಕಾರ್ಯವನ್ನು ಪ್ರಶಂಸಿದ್ದಾರೆ ಹಾಗೂ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಿ ಕ್ರೀಡಾ ಮನೋಭಾವನನ್ನು ಬೆಳೆಸಿದ ಕಾಲೇಜಿನ ತರಬೇತಿದಾರ ಉಪನ್ಯಾಸಕ ಮನೋಹರ್ ಎ.ಪಿ ಅವರನ್ನು ಅಭಿನಂಧಿಸಿದ್ದಾರೆ ಈ ಫೋಟೋದಲ್ಲಿ ಪ್ರಾಚಾರ್ಯರಾದ ಎಮ್. ವಿರೇಶ್ ಬಾಬು ಮತ್ತು ದೈಹಿಕ ಶಿಕ್ಷಕಾರಾದ ಮನೋಹರ್ ಎ.ಪಿ ಹಾಗೂ ವಿಜೇತ ವಿಧ್ಯಾರ್ಥಿಗಳನ್ನು ಕಾಣಬಹುದು.

LEAVE A REPLY

Please enter your comment!
Please enter your name here