ಜಿಲ್ಲೆಯಲ್ಲಿ 27 ಎಂ.ಎಂ. ಮಳೆ: 44.14 ಲಕ್ಷ ಹಾನಿ

0
13

ದಾವಣಗೆರೆ:

 ಜಿಲ್ಲೆಯಲ್ಲಿ ಮೇ.21 ರಂದು 27 ಎಂ ಎಂ ಮಳೆಯಾಗಿದೆ. ತಾಲ್ಲೂಕುವಾರು ಮಳೆ ವಿವರ ಹಾಗೂ ಅಂದಾಜು ಹಾನಿಯ ವಿವರ ಇಂತಿದೆ.ದಾವಣಗೆರೆ ತಾಲ್ಲೂಕಿನಲ್ಲಿ ವಾಸ್ತವ 35.8 ಎಂ.ಎಂ, ಹರಿಹರ ತಾಲ್ಲೂಕಿನಲ್ಲಿ 33.7 ಎಂ.ಎಂ, ಹೊನ್ನಾಳಿ ತಾಲ್ಲೂಕು 28.6 ಎಂ.ಎಂ, ಚನ್ನಗಿರಿ ತಾಲ್ಲೂಕು 18.1 ಎಂ.ಎಂ, ಹರಪನಹಳ್ಳಿ ತಾಲ್ಲೂಕು 23.9 ಎಂ.ಎಂ, ಜಗಳೂರು ತಾಲ್ಲೂಕು 29.4 ಎಂ.ಎಂ ಮಳೆಯಾಗಿದೆ. ಒಟ್ಟು ಸರಾಸರಿ 27 ಎಂ.ಎಂ ಮಳೆಯಾಗಿದೆ.

 

ದಾವಣಗೆರೆ ತಾಲ್ಲೂಕಿನಲ್ಲಿ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 3200 ಅಂದಾಜು ನಷ್ಟ ಸಂಭವಿಸಿದೆ.
ಹರಿಹರ ತಾಲ್ಲೂಕಿನಲ್ಲಿ 1 ಪಕ್ಕಾಮನೆ ಪೂರ್ಣ ಹಾನಿಯಾಗಿದ್ದು, ರೂ. 95,000, 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 10,000, ಮತ್ತು 670 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ. 41,98,000. ಒಟ್ಟು ರೂ 43,03,000 ಅಂದಾಜು ನಷ್ಟ ಸಂಭವಿಸಿರುತ್ತದೆ.

ಹೊನ್ನಾಳಿ ತಾಲ್ಲೂಕಿನಲ್ಲಿ 3 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ರೂ. 30,000 ಮತ್ತು 5 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ರೂ. 36,000 ಒಟ್ಟು ರೂ. 66,000 ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕಿನಲ್ಲಿ 4 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 40,000 ಮತ್ತು 2 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ರೂ. 10,800 ಒಟ್ಟು ರೂ.50,800 ಅಂದಾಜು ನಷ್ಟ ಸಂಭವಿಸಿರುತ್ತದೆ.

ಜಿಲ್ಲೆಯಲ್ಲಿ ಒಟ್ಟು ರೂ. 44.14 ಲಕ್ಷ ಹಾನಿ ಸಂಭವಿಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here