ನಾಳೆ ತುಮಕೂರು ವಿ.ವಿ.ಸಂಸ್ಥಾಪನಾ ದಿನ

0
37

ತುಮಕೂರು:

Image result for tumkur university

      ತುಮಕೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನವನ್ನು ಜುಲೈ 30ರಂದು ಆಚರಿಸಲಾಗುವುದು. ಸಮಾರಂಭವು ಬೆಳಗ್ಗೆ 11-00 ಗಂಟೆಗೆ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜರುಗಲಿದೆ.

      ಸಂಸ್ಥಾಪನಾ ದಿನಾಚರಣೆಯನ್ನು ತುಮಕೂರು ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಡಾ. ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿಯವರು ನೆರವೇರಿಸಲಿದ್ದಾರೆ.

      ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ನ್ಯಾಕ್ ಸಂಸ್ಥೆಯ ಮಾಜಿ ನಿರ್ದೇಶಕರಾದ ಪ್ರೊ. ಎಚ್. ಎ. ರಂಗನಾಥ ಅವರು ಸಂಸ್ಥಾಪನಾ ವಿಶೇಷೋಪನ್ಯಾಸವನ್ನು ನೀಡಲಿದ್ದಾರೆ.

      ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಪ್ರೊ. ಬಿ. ಎಸ್. ಗುಂಜಾಳ್ ಉಪಸ್ಥಿತರಿರುವರು.

LEAVE A REPLY

Please enter your comment!
Please enter your name here