ಐ.ಡಿ.ಹಳ್ಳಿ:
ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿ ಸೇರಿದ ರಾಜ್ಯದ ಗಡಿ ಗ್ರಾಮ ತೊಂಡೋಟಿ ಗ್ರಾಮದ ಹೊರವಲಯದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಸುಳುವಿನ ಮೇರೆಗೆ ಮಿಡಿಗೇಶಿ ರಕ್ಷಣಾ ಸಿಬ್ಬಂದಿಯವರು ಜೂ.29 ರಂದು ಮಧ್ಯಾಹ್ನ ಸಮಯ ನಾಲ್ಕರಿಂದ ಐದು ಗಂಟೆಯ ವೇಳೆಯಲ್ಲಿ ಸದರಿ ಜೂಜು ಕೇಂದ್ರದ ಮೇಲೆ ಹಠಾತ್ ದಾಳಿ ನಡೆಸಿದ್ದು ದಾಳಿ ವೇಳೆಯಲ್ಲಿ ಜೂಜಾಟದಲ್ಲಿ ನಿರತ ಆರು ಜನರನ್ನು ಬಂಧಿಸಿದ್ದು 6 ದ್ವಿಚಕ್ರ ವಾಹನಗಳು, ಏಳು ಮೊಬೈಲ್ಗಳನ್ನು ವಶಪಡಿಸಿಕೊಂಡಿರುತ್ತಾರೆ. 5780-00 ರೂ ಹಣವನ್ನು ವಶಪಡಿಸಿಕೊಂಡಿದ್ದು ಪಿ.ಎಸ್.ಐ ಪುರುಷೋತ್ತಮ್ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ದಾಳಿಯ ವೇಳೆಯಲ್ಲಿ ಕೆಲವರು ತಮ್ಮ ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಶ್ರೀಮತಿ ದಿವ್ಯಗೋಪಿನಾಥ್ ರವರ ಆದೇಶದ ಮೇರೆಗೆ ಡಿವೈಎಸ್ಪಿ ಕಲ್ಲೇಶಪ್ಪ ನವರ ಮಾರ್ಗದರ್ಶನ, ಸಿಪಿಐ ಅಂಬರೀಶ್ ರವರ ಸೂಚನೆ ಮೇರೆಗೆ ಮಿಡಿಗೇಶಿ ಪಿಎಸ್ಐ ಮತ್ತು ಮಿಡಿಗೇಶಿ ರಕ್ಷಣಾ ಸಿಬ್ಬಂದಿಗಳವರು ಕಾರ್ಯಚರಣೆಯಲ್ಲಿ ತೊಡಗಿದ್ದರು.