ಜೂನ್ 12ರ ಶೃಂಗಸಭೆಯಲ್ಲಿ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಮುಖಾಮುಖಿ

0
43

ವಾಷಿಂಗ್ಟನ್,:

  ಇಡೀ ಜಗತ್ತೇ ಅಚ್ಚರಿಯಿಂದ ಕಾಯುತ್ತಿರುವ ವಿಚಾರವೇನೆಂದರೆ   ಜೂನ್ 12ರಂದು ಸಿಂಗಾಪುರದ ಭವ್ಯ ಸೆಂಟೋಸಾ ದ್ವೀಪದಲ್ಲಿ ಅಮೆರಿಕಾ ಮತ್ತು ಉತ್ತರ ಕೊರಿಯಾದ ಶೃಂಗ ಸಭೆ. ಇದೇ ಶೃಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

 ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ಬಹು ನಿರೀಕ್ಷಿತ ಭೇಟಿ. ಒಂದೊಮ್ಮೆ ಈ ಶೃಂಗಸಭೆ ಯಶಸ್ವಿಯಾಗಿದ್ದೇ ಆದಲ್ಲಿ ಶ್ವೇತ ಭವನಕ್ಕೆ ಕಿಮ್ ಜಾಂಗ್ ಉನ್ ರನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಜೂನ್ 12ರ ಶೃಂಗಸಭೆಗೆ ಪೂರ್ವಭಾವಿಯಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here