ಟಿಬಿ ಬೋರ್ಡ್ ಹಾಡು ಹಗಲೇ ಲೂಟಿ : ಡಿವೈಎಫ್‍ಐ ಆರೋಪ.

0
47

 ಹೊಸಪೇಟೆ :

      ವಿಶ್ವ ವಿಖ್ಯಾತ ಹಂಪಿ ಮತ್ತು ತುಂಗಭದ್ರಾ ಜಲಾಶಯ ನೋಡಲು ನಿತ್ಯ ಆಗಮಿಸುವ ಸಾವಿರಾರು ಪ್ರವಾಸಿಗರಿಗೆ ತುಂಗಭದ್ರಾ ಆಡಳಿತ ಮಂಡಳಿ ಹಾಗು ಗುತ್ತಿಗೆದಾರರು ಹಾಡು ಹಗಲೇ ಲೂಟಿ ಮಾಡುತ್ತಿರುವುದು ಖಂಡನೀಯ ಎಂದು ಡಿವೈಎಫ್‍ಐನ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ ಆರೋಪಿಸಿದರು.

      ತುಂಗಭದ್ರಾ ಜಲಾಶಯಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ತುಂಗಭದ್ರ ಡ್ಯಾಂ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ರವೇಶ ದ್ವಾರದಲ್ಲಿಯೇ 20 ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ನಿಯಮದ ಪ್ರಕಾರ ಯಾರು ಕೆಲಭಾಗದ ಪಾರ್ಕ್‍ಗೆ ಹೋಗುತ್ತಾರೆ, ಅವರಿಗೆ ಮಾತ್ರ ಹಣವನ್ನು ಸ್ವೀಕರಿಸಬೇಕು.

      ಡ್ಯಾಂನ ಮೇಲ್ಬಾಗಕ್ಕೆ ಹೋಗುವುದಕ್ಕೆ ಯಾವುದೇ ಹಣವಿರುವುದಿಲ್ಲ. ಆದರೆ ಇಲ್ಲಿ ಕೆಲವು ದಿನಗಳಿಂದ ಡ್ಯಾಂನ ಪ್ರವೇಶ ದ್ವಾರದಲ್ಲಿಯೇ ಹಣವನ್ನು ಸ್ವೀಕರಿಸುವ ಮೂಲಕ ಪ್ರವಾಸಿಗರಿಂದ ನಿಯಮಬಾಹೀರವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಡ್ಯಾಂನ ಪಾರ್ಕಿಂಗ್ ಸ್ಥಳದಿಂದ ಡ್ಯಾಂನ ವೀಕ್ಷಣೆಗೆ ಹೋಗಲು ಮಾಡಿರುವ ವಾಹನಕ್ಕೆ ರೂಪಾಯಿ 20ರೂ. ಗಳನ್ನು ನಿಗಧಿ ಮಾಡಿಸಲಾಗಿದೆ ಆದರೆ ಈ 20 ರೂಪಾಯಿಗಳನ್ನು ನಿಗಧಿ ಪಡಿಸಲು ಆರ್.ಟಿ.ಒ.ರವರ ಒಪ್ಪಿಗೆ ಬೇಕು. ಅದನ್ನು ಪಡೆಯದೆಯೇ ತಮಗೆ ಬೇಕಾದ ಪ್ರಕಾರ ಹಣವನ್ನು ನಿಗಧಿ ಪಡಿಸಲಾಗಿದೆ ಎಂದು ಆರೋಪಿಸಿದರು.

      ನೀರಿನಲ್ಲಿ ಆಟವಾಡಲು ಇರುವ ಬೋಟ್‍ಗೆ ನಿಗಧಿ ಪಡಿಸಿದ ಶುಲ್ಕಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗುತ್ತಿದೆ. ವಾಹನಗಳ ಪಾರ್ಕಿಂಗ್‍ಗೆ ಹಣ ಸಂಗ್ರಹಿಸಲಾಗುತ್ತಿದೆ. ಆದರೆ ವಾಹನಗಳಿಗೆ ಯಾವುದೇ ಶಟರ್‍ನ ವ್ಯವಸ್ಥೆ ಮಾಡಿಲ್ಲ, ಡ್ಯಾಂನ ಒಳಗಡೆ ಸಿಗುವ ಆಹಾರ ಪದಾರ್ಥಗಳಿಗೆ, ಇತರೆ ತಿಂಡಿ ಪದಾರ್ಥಗಳಿಗೆ ಎಂ.ಆರ್.ಪಿ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗುತ್ತಿದೆ. ಸಾವಿರಾರು ಪ್ರವಾಸಿಗರು ಡ್ಯಾಂ ವೀಕ್ಷಣೆಗೆ ಬರುತ್ತಿದ್ದಾರೆ. ಆದರೆ ಅದರಲ್ಲಿ ವೃದ್ಥರು, ಅಂಗವಿಕಲರು,ಬುದ್ದಿಮಾಂಧರು ಸಹ ಇರುತ್ತಾರೆ. ಆದರೆ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ವಾಹನದ ಇಲ್ಲವೇ ಅವರಿಗೆ ವೀಲ್‍ಚೇರ್‍ಗಳನ್ನು ವ್ಯವಸ್ಥೆ ಮಾಡಿಲ್ಲ, ಸಾವಿರಾರು ಜನರು ಇಲ್ಲಿಗೆ ಬರುವುದರಿಂದ ಸಣ್ಣ-ಪುಟ್ಟ ಅವಘಢಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು. ಜೊತೆಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಬಂದ ಎಲ್ಲಾರಿಗೂ ಸಹ ಉಚಿತ ಪ್ರವೇಶ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್ ಮನೋಹರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

 

LEAVE A REPLY

Please enter your comment!
Please enter your name here