ಡಾ.ಜಿ.ಪರಮೇಶ್ವರ್ ಅಭಿನಂದನಾ ಸಮಾರಂಭಕ್ಕೆ ವ್ಯಾಪಕ ಪ್ರಚಾರ

0
17

ತುಮಕೂರು.

            ಛಲವಾದಿ ಮಹಾಸಭಾವತಿಯಿಂದ ಸೆಪ್ಟಂಬರ್ 20 ರಂದು ನಗರದ ಅಮಾನಿಕೆರೆಯ ಗಾಜೀನ ಮನೆಯಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್,ಜನಾಂಗದ ಸಚಿವರು, ಶಾಸಕರಿಗೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕರಪತ್ರ ಹಂಚುವ ಮೂಲಕ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಕೈಗೊಂಡಿದ್ದರು. 
             ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು, ಗೂಳೂರು, ಉರ್ಡಿಗೆರೆ,ಬೆಳ್ಳಾವೆ ಹಾಗೂ ಕಸಬಾ ಹೋಬಳಿಗಳಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ,ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ, ಕರ ಪತ್ರ ನೀಡಿ, ಜನರು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
              ಉರ್ಡಿಗೆರೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ತುಮಕೂರು ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಡಾ.ಜಿ.ಪರಮೇಶ್ವರ್ ಅವರು ಈ ರಾಜ್ಯದ ಉಪಮುಖ್ಯಮಂತ್ರಿಯಾಗಿ,ಗೃಹ ಸಚಿವರಾಗಿರುವುದು ಹೆಮ್ಮಪಡುವ ವಿಚಾರ.ಸೆಪ್ಟಂಬರ್ 20 ರಂದು ಏರ್ಪಡಿಸಿರುವ ಅಭಿನಂದನಾ ಸಮಾರಂಭ ಅವರಿಗೆ ಮತ್ತಷ್ಟು ಶಕ್ತಿಯನ್ನು ತುಂಬಲಿದೆ.ಭವಿಷ್ಯದಲ್ಲಿ ಛಲವಾದಿ ಸೇರಿದಂತೆ ದಲಿತ ಸಮುದಾಯದ ಯುವಕರು ರಾಜಕೀಯವಾಗಿ ಬೆಳೆಯಲು ಸಹ ಸಹಕಾರಿಯಾಗಲಿದೆ.ಆದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸುವಂತೆ ಕರೆ ನೀಡಿದರು.
ಹೆಬ್ಬೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ದಲಿತ ಕ್ರಿಯಾಸಮಿತಿ ಜಿಲ್ಲಾಧ್ಯಕ್ಷ ಸೋಮಶೇಖರ್,ಡಾ.ಜಿ.ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆತಿರುವುದು ರಾಜ್ಯದಲ್ಲಿ ದಲಿತ ನಾಯಕರೊಬ್ಬರಿಗೆ ದೊರಕಿರುವ ಅತ್ಯುನ್ನತ ರಾಜಕೀಯ ಅಧಿಕಾರವಾಗಿದೆ.ರಾಜ್ಯದಲ್ಲಿ ದಲಿತರ ಸಂಖ್ಯೆ ಹೆಚ್ಚಿದ್ದರೂ, ಒಗ್ಗಟ್ಟಿನ ಕೊರತೆಯಿಂದ ರಾಜಕೀಯ ಅಧಿಕಾರದಿಂದ ವಂಚಿತರಾಗುತ್ತಿದ್ದು,ಈಗಲಾದರೂ ಎಚ್ಚೆತ್ತುಕೊಂಡು ಒಗ್ಗೂಡಿ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಪಡೆಯಬಹುದು.ಇದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗುವಂತೆ ಜನರು ಆಗಮಿಸಬೇಕೆಂದು ಮನವಿ ಮಾಡಿದರು.
ಪ್ರಚಾರ ಸಭೆಯಲ್ಲಿ ದಲಿತ ಯುವ ಮುಖಂಡರಾದ ಜಿ.ಆರ್.ಸುರೇಶ್,ಮಂಜುನಾಥ್,ಕುಮಾರ್ ಕೊರಟಗೆರೆ, ಸಿದ್ದರಾಜು, ಜಿ.ಆರ್.ಗಿರೀಶ್,ಗೋವಿಂದರಾಜು, ಸಿದ್ದಲಿಂಗಪ್ಪ, ಮಾರುತಿ ಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here