ಡಿಎನ್‍ಆರ್ ಗುತ್ತಿಗೆ ಸಂಸ್ಥೆಯ ವಾಹನಗಳ ಆತಂಕಕಾರಿ ಚಾಲನೆ

0
16

ಬುಕ್ಕಾಪಟ್ಟಣ

   ರಸ್ತೆ ಕಾಮಗಾರಿ ಗುತ್ತಿಗೆಯ ಡಿ.ಎನ್.ಆರ್ ಸಂಸ್ಥೆಗೆ ಸೇರಿದ ಟಿಪ್ಪರ್ ಲಾರಿ ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಸಾರ್ವಜನಿಕರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಈ ಚಾಲಕರ ಅಜಾಗರೂಕತೆ ಚಾಲನೆಯಿಂದ ಈಗಾಗಲೆ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿರುತ್ತಾರೆ. ರಸ್ತೆಯಲ್ಲಿ ಟಿಪ್ಪರ್ ವಾಹನ ಚಲಾವಣೆ ಮಾಡುವಾಗ ತುಂಬಾ ಸ್ಪೀಡಾಗಿ ಅಡ್ಡಾದಿಡ್ಡಿಯಾಗಿ ಚಲಾವಣೆ ಮಾಡಿ, ಎಷ್ಟೋ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳು ಮಾಡಿರುತ್ತಾರೆ.

   ಇವರುಗಳು ಚಲಾವಣೆ ಮಾಡುವ ರಸ್ತೆಯಲ್ಲಿ ಎಷ್ಟೋ ಶಾಲೆಗಳು, ದೇವಸ್ಥಾನಗಳು ಇದ್ದು, ದಿನಂಪ್ರತಿ ಸಾವಿರಾರು ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಈ ರೀತಿ ಚಲಾವಣೆ ಮಾಡಿ ಆಗುವ ಅನಾಹುತಕ್ಕೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆ. ಭಾನುವಾರ ಸಂಜೆ ಈ ಡಿ.ಎನ್.ಆರ್ ಸಂಸ್ಥೆಗೆ ಸೇರಿದ ಟ್ಯಾಂಕರ್ ವಾಹನವು ಬುಕ್ಕಾಪಟ್ಟಣ ಮಾರುತಿನಗರದ ಹತ್ತಿರ ಚಾಲಕನ ಅಜಾಗರೂಕತೆಯಿಂದ ವಿದ್ಯುತ್ ಕಂಬಕ್ಕೆ ಗುದ್ದಿ, ಟ್ಯಾಂಕರ್ ವಾಹನ ಮಗುಚಿ ಬಿದ್ದು, ಅಲ್ಲಿ ಸುತ್ತ ಮುತ್ತ ಮನೆಗಳು ಇಲ್ಲದೆ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸಂಸ್ಥೆಯ ಮೇಲೆ ಹಾಗೂ ಸಂಸ್ಥೆಯ ಚಾಲಕರ ಮೇಲೆ ಹಿರಿಯ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳದೇ ಹೋದರೆ ಸಾರ್ವಜನಿಕರೆ ಎಲ್ಲಾ ಸೇರಿ ಸಂಸ್ಥೆಯ ಮೇಲೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದಾರೆ.

LEAVE A REPLY

Please enter your comment!
Please enter your name here