ಡೆಲ್ಲಿ ವಿರುದ್ಧ ಆರ್.ಸಿ.ಬಿ.ಗೆ 5 ವಿಕೆಟ್‍ಗಳ ಗೆಲುವು

0
30

ಡೆಲ್ಲಿ:

ಐಪಿಎಲ್ ಕ್ರಿಕೆಟ್‍ನ 45ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್‍ಸಿಬಿ ತಂಡವು 5 ವಿಕೆಟ್‍ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‍ಸಿಬಿ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ರಿಷಬ್ ಪಂಥ್, ಅಭಿಷೇಕ್ ಶರ್ಮಾರ ಉತ್ತಮ ಬ್ಯಾಟಿಂಗ್‍ನಿಂದಾಗಿ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 181 ರನ್‍ಗಳಿಸಿತು. ಆರ್‍ಸಿಬಿ ಪರ ಚಾಹಲ್ 2, ಮೊಯಿನ್ ಅಲಿ 1, ಸಿರಾಜ್ 1 ವಿಕೆಟ್ ಗಳಿಸಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ಆರ್‍ಸಿಬಿ ತಂಡವು ಆರಂಭದಲ್ಲಿ ವಿಕೆಟ್‍ಗಳನ್ನು ಬೇಗನೆ ಕಳೆದುಕೊಂಡರೂ ಎಬಿಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ 19 ಓವರ್‍ಗಳಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು 187 ರನ್ ಗಳಿಸುವ ಮೂಲಕ 5 ವಿಕೆಟ್‍ಗಳ ಜಯ ಪಡೆಯಿತು. ಎಬಿಡಿ ವಿಲಿಯರ್ಸ್ ಅಜೇಯ 72, ವಿರಾಟ್ ಕೊಹ್ಲಿ 70, ಸಿಂಗ್ 13, ಸರ್ಫರಾಜ್ 11 ರನ್‍ಗಳನ್ನು ಗಳಿಸಿದರು.

ಡೆಲ್ಲಿ ಪರ ಟ್ರೆಂಟ್ 2, ಸಂದೀಪ್ 1, ಪಟೇಲ್ 1, ಅಮಿತ್ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ:

ಡೆಲ್ಲಿ : 181/4 (20)
ಆರ್‍ಸಿಬಿ: 187/5 (19)

LEAVE A REPLY

Please enter your comment!
Please enter your name here