ಡೆಲ್ಲಿ ವಿರುದ್ಧ ಸನ್‍ರೈಸರ್ಸ್‍ಗೆ 9 ವಿಕೆಟ್‍ಗಳ ಗೆಲುವು

0
9

 

ಡೆಲ್ಲಿ:

ಐಪಿಎಲ್ ಕ್ರಿಕೆಟ್‍ನ 42ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ 9 ವಿಕೆಟ್‍ಗಳಿಂದ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರಂಭದಲ್ಲಿ ಕುಸಿತ ಕಂಡರೂ ರಿಷಬ್ ಪಂತ್‍ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು 187 ರನ್‍ಗಳನ್ನು ಗಳಿಸಿತು. ರಿಷಬ್ ಪಂತ್ 128 ರನ್‍ಗಳ ಭರ್ಜರಿ ಅಜೇಯ ಶತಕ, ಹರ್ಷಲ್ ಪಟೇಲ್ 24, ರಾಯ್ 11 ರನ್‍ಗಳನ್ನು ಗಳಿಸಿದರು.
ಹೈದರಾಬಾದ್ ಪರ ಹಸನ್ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಆರಂಭಿಸಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಉತ್ತಮ ಬ್ಯಾಟಿಂಗ್‍ನಿಂದಾಗಿ 18.5 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 188 ರನ್‍ಗಳನ್ನು ಗಳಿಸಿ ಗೆಲುವಿನ ಮೆಟ್ಟಿಲು ಏರಿದರು. ಕೇನ್ ವಿಲಿಯಮ್ಸನ್ ಅಜೇಯ 80, ಶಿಖರ್ ಧವನ್ ಅಜೇಯ 92, ಅಲೆಕ್ಸ್ 14 ರನ್‍ಗಳನ್ನು ಗಳಿಸಿದರು.
ಹೈದರಾಬಾದ್ ಪರ ಪಟೇಲ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಡೆಲ್ಲಿ : 187/5 (20)
ಹೈದರಾಬಾದ್: 188/1 (18.5)

LEAVE A REPLY

Please enter your comment!
Please enter your name here