ತಂಬ್ರಹಳ್ಳಿ ಪೋಲಿಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

0
25

ಹಗರಿಬೊಮ್ಮನಹಳ್ಳಿ:

      ತಾಲೂಕಿನ ತಂಬ್ರಹಳ್ಳಿಯ ಕೊಟ್ಟೂರೇಶ್ವರ ವಿದ್ಯಾ ಸಂಸ್ಥೆಯ ನೂತನ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಥಳೀಯ ಪೋಲಿಸ್ ಠಾಣೆಯ ವತಿಯಿಂದ ಗುರುವಾರ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

      ತಂಬ್ರಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳಿಂದ ಮಕ್ಕಳಿಗೆ ಸಮಾಜದಲ್ಲಿ ಪೋಲಿಸ್ ಠಾಣೆಯ ಕಾರ್ಯವ್ಯಾಪ್ತಿ, ಠಾಣೆಗಳ ಮಹತ್ವ, ಕರ್ತವ್ಯ ನಿರ್ವಹಿಸುವ ರೀತಿ, ಠಾಣೆಯ ಮಾಹಿತಿ ಸೇರಿದಂತೆ ಮಕ್ಕಳು ಸಾರ್ವಜನಿಕರು ಹಾಗೂ ಪೋಲಿಸರ ನಡುವೆ ಉತ್ತಮ ಬಾಂಧ್ಯವ್ಯ ಬೆಸೆದುಕೊಳ್ಳುವ ದೃಷ್ಟಿಯಿಂದ ತರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾನ್ಸ್ಟೇಬಲ್ ಟಿ. ರಂಗನಾಥ ತಿಳಿಸಿದರು.

      ಮಕ್ಕಳಲ್ಲಿ ಪೋಲಿಸರ ಬಗ್ಗೆ ಆತಂಕ ಭಯ ಹೋಗಲಾಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಮಕ್ಕಳು ಪೋಲಿಸ್ ವ್ಯವಸ್ಥೆಯ ಬಗ್ಗೆ ಪ್ರಾಥಮಿಕ ಹಂತದಿಂದಲೆ ಮಾಹಿತಿ ಹೊಂದುವುದು ಅವಶ್ಯವಾಗಿದೆ. ಸಮಾಜದ್ರೋಹಿಗಳು, ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಬಾಗಿಯಾಗಿರುವವರ ವಿರುದ್ದ ಮಕ್ಕಳು ಸಾರ್ವಜನಿಕರು ಅಥವಾ ಯಾರೆ ಆಗಲಿ ಠಾಣೆಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

      ಮಕ್ಕಳಿಗೆ ಸಬ್‍ಇನ್ಸಪೆಕ್ಟರ್ ಕಚೇರಿ, ಕಂಪ್ಯೂಟರ್ ರೂಂ, ಬಂದಿಖಾನೆ, ಪಿಸ್ತೂಲ್, ರೆಫಲ್,ಬಂದೂಕು ರೌಂಡ್ಸ ಮತ್ತು ಪೋಲಿಸ್ ಠಾಣೆಯ ಪೇದೆಗಳ ಕಾರ್ಯವ್ಯಾಪ್ತಿ ಹಾಗೂ ಪೋಲಿಸ್ ಇಲಾಖೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ತಿಳಿಸಿದರು.

      ಠಾಣೆಯ ಮುಖ್ಯ ಪೇದೆ ಆನಂದಕುಮಾರ್.ನೂತನ್ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ್ ಪಟ್ಟಣಶೆಟ್ಟಿ, ಮುಖ್ಯೋಪಾಧ್ಯಾಯ ಕಿತ್ನೂರು ಉತ್ತಂಗಿ ವಿರುಪಾಕ್ಷ, ಶಿಕ್ಷಕ ಡೊಳ್ಳಿನ ಹನುಮಂತ, ಶಿಕ್ಷಕಿಯರಾದ ಹನುಮಂತಿ, ಉಮಾ, ಪೇದೆಗಳಾದ ಗುರು ರಾಜ್, ಗೋಪಿನಾಯ್ಕ್, ಮಂಜುನಾಥ್ ಇತರರು ಇದ್ದರು.

LEAVE A REPLY

Please enter your comment!
Please enter your name here