ತಾಜ್ ಮಹಲ್ ದೇಶೀಯ ಪ್ರವಾಸಿಗರಿಗೆ 200ರೂ, ವಿದೇಶಿ ಪ್ರವಾಸಿಗರಿಗೆ 1100ರೂ, ನಿಗಧಿ

0
41

ಸಿರುಗುಪ್ಪ :- 

      ಆಗ್ರಾದ ಪ್ರೇಮ ಸೌಧ ವಿಶ್ವ ಪ್ರಸಿದ್ಧ ತಾಜ್ ಮಹಲಿನ ಮುಖ್ಯ ಭಾಗಕ್ಕೆ ಪ್ರವೇಶ ಮಾಡಬೇಕಿದ್ದರೆ ಇನ್ನೂ ಹೆಚ್ಚುವರಿಯಾಗಿ ಎರಡು ನೂರು ರೂಪಾಯಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎ.ಅಬ್ದುಲ್ ನಬಿ ತಿಳಿಸಿದ್ದಾರೆ.

      ಮಂಗಳವಾರ ನವದೆಹಲಿಯಲ್ಲಿ ತಾಜ್ ಮಹಲಿನ ರಕ್ಷಣೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸಿ.ಐ.ಎಸ್.ಎಫ್. ಆಗ್ರಾ ಜಿಲ್ಲಾಡಳಿತ ಮತ್ತು ಭಾರತೀಯ ಪುರಾತತ್ವ ಇಲಾಖೆ ಎ.ಎಸ್.ಐ. ನಡುವಿನ ಸಭೆಗಳಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಕೇಂದ್ರ ಸಂಸ್ಕೃತಿ ಇಲಾಖೆ ಆಗಸ್ಟ್ 8ರಂದು ಜಾರಿಗೆ ಬರುವಂತೆ ವಿದೇಶಿ ಪ್ರವಾಸಿಗರಿಗೆ ಇರುವ ಪ್ರವೇಶ ದರವನ್ನು ಒಂದು ಸಾವಿರ ರೂ.ಗಳಿಂದ ಹನ್ನೊಂದುನೂರು ರೂ.ಗೆ ಏರಿಸಿತ್ತು ದೇಶಿಯ ಪ್ರವಾಸಿಗರಿಗೆ ನಲವತ್ತು ರೂ,ಗಳಿಂದ ಐವತ್ತು ರೂ,ಗಳಿಗೆ ಪರಿಷ್ಕರಿಸಿ ಆದೇಶಿಸಿತ್ತು .

      ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಇನ್ಸ್ಟ್ಯೂಟ್ ಎನ್.ಇ.ಇ.ಆರ್.ಐ ತಾಜ್ ಮಹಲ್ಗೆ ಪ್ರವಾಸಿಗರ ಭೇಟಿಯಿಂದ ಆಗುತ್ತಿರುವ ಒತ್ತಡದ ಬಗ್ಗೆ ಅಧ್ಯಯನ ನಡೆಸಿತ್ತು. ಈ ಸಂದರ್ಭದಲ್ಲಿ ಅದರ ಮುಖ್ಯ ಭಾಗಕ್ಕೆ ಪ್ರವೇಶ ಮಾಡುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುವಂತೆ ಸೂಚನೆ ನೀಡಿತ್ತು. ಅದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್ ಕೂಡ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯು ಸೂಚಿಸಿತ್ತು ಎಂದು ಅಬ್ದುಲ್ ನಬಿ ತಿಳಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here