ತಾಲೂಕಿನೆಲ್ಲಡೆ ಕೋತಿ,ಕಾಡುಹಂದಿಗಳ ಹಾವಳಿ : ಅರಣ್ಯ ಇಲಾಖೆ ಗಪ್ಪು ಚುಪ್. . .!?

0
34

ಹಗರಿಬೊಮ್ಮನಹಳ್ಳಿ:

      ತಾಲೂಕಿನ ಹಲವೆಡೆಗಳಲ್ಲಿ ಕೋತಿಗಳ ಉಪಟಳ ಮಿತಿ ಮೀರಿದ್ದು, ಕೋತಿಗಳ ದಾಳಿಗೆ ಸಾಕಷ್ಟು ಜನ ತೀವ್ರ ನೋವು ಅನುಭವಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯ ವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

      ಈ ಕುರಿತು ಪತ್ರಿಕೆಗಳ ವರದಿಗಳನ್ನ ಆಧರಿಸಿ ಅರಣ್ಯ ಇಲಾಖೆ ಕೋತಿಗಳನ್ನು ಸೆರೆಹಿಡಿಯುವ ಸಾಹಸಕ್ಕೆ ಮುಂದಾಗುವುದು ಸಹಜವಾಗಿದೆ, ಇದು ಕೂಡ್ಲಿಗಿ ತಾಲೂಕು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮಗಳ ಜನತೆಯ ಗೋಳಾಗಿದೆ.

      ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದಲ್ಲಿ ಎಲೆಗಾರು ಗೌರಮ್ಮ ಎಂಬ ವೃಧ್ಧೆ ಯ ಮೇಲೆ ಕೋತಿ ದಾಳಿ ಮಾಡಿ ಗಂಭೀರ ಗಾಯ ಗಳನ್ನು ಮಾಡಿದೆ.,ಗಾಯಾಳು ವೃಧ್ದೆಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ತಿಂಗಳುಗಳಿಂದ ಕೋತಿಯೊಂದು ತನ್ನ ಕುಚೇಷ್ಟೆಯಿಂದ ಗ್ರಾಮದ ಜನತೆಯ ನೆಮ್ಮದಿ ಹಾಳು ಮಾಡಿದೆ. ಅದು ತಿಂಗಳುಗಳಿಂದ ಗ್ರಾಮದ ಜನತೆಗೆ ಕಿರಿಕಿರಿಯುನ್ನುಂಟುಮಾಡುತ್ತಿದ್ದು, ಅರಣ್ಯ ಇಲಾಖೆಯವರು ಗಮನಿಸಿದ್ದೂರ ಕೂಡ ಅದನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವ ಕ್ರಮ ಕೈಗೊಳ್ಳದೇ ಜಾಣ ಕುರುಡುತನದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಕ್ಕಳು,ವೃಧ್ದರು, ಮಹಿಳೆಯ ಮೇಲೆ ಎರಗಿ ಗಾಯಗೊಳಿಸುವ ಈ ಕೋತಿ ತೀವ್ರ ಗಾಯಗೊಳಿಸುತ್ತಿದೆ, ಇಂತಹ ಪ್ರಕರಣಗಳು ವಾರಕ್ಕೆ ಮೂರು ನಾಲ್ಕು ಜರುಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ನಿದ್ರೆಗೆ ಜಾರಿರುವುದು ಖಂಡನೀಯವೆಂದು ವಂದೇ ಮಾತರಂ ಜನಜಾಗೃತಿ ವೇದಿಕೆ ಜಿಲ್ಲಾಧ್ಯ್ಯಕ್ಷ ವಿ.ಜಿ.ವೃಷಭೇಂದ್ರ ಖಂಡಿಸಿದ್ದಾರೆ.

      ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಹಲವೆಡೆಗಳಲ್ಲಿ ಕೋತಿಗಳ ಉಪಟಳ ಮಿತಿ ಮೀರುತ್ತಿದ್ದು ಅವುಗಳನ್ನು ಗಮನಿಸಿ ಅರಣ್ಯ ಇಲಾಖೆ ಅವುಗಳನ್ನು ಶೀಘ್ರವೇ ಸೆರೆಹಿಡಿದು ಅರಣ್ಯಕ್ಕೆ ಬಿಡಬೇಕಿದೆ. ವನ್ಯ ಪ್ರಾಣಿಗಳು, ಮೃಗಗಳು ನಾಡಿಗೆ ಬರುತ್ತಿದ್ದು, ಇದು ಅರಣ್ಯ ನಾಶಗೊಂಡಿರುವ ಸೂಚನೆಯನ್ನು ತೋರಿಸುತ್ತಿದೆ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ಸಾಕಷ್ಟು ಜರುಗುತ್ತಿದ್ದರೂ ಜಿಲ್ಲಾ ಅರಣ್ಯ ಇಲಾಖೆ ಗಪ್ಪು ಚುಪ್ಪಾಗಿರುವುದು ಅವರ ನಿಷ್ಠೆಯನ್ನು ತೋರುತ್ತದೆ, ಅರಣ್ಯದಲ್ಲಿ ನಡೆಯುತ್ತಿರುವ ಮಾನವರ ಅಸಹಜ ಚಟುವಟಿಕೆಗಳು ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲುಗಣಿಗಾರಿಕೆಯೇ ಕಾರಣ ವಿರಬಹುದಾಗಿದೆ, ಬೃಹತ್ ಹೋಟೆಲ್ಲು, ಶಾಮಿಲ್ಲು, ಹಾಗೂ ಖಾಸಗೀ ವಾಣಿಜ್ಯ ವ್ಯಾಪಾರ, ಕಾರ್ಖಾನೆ ಗಳಿಗೆ ಮರಗಳನ್ನು ಕಡಿದು ಅನದಿಕೃತವಾಗಿ ಅರಣ್ಯದಲ್ಲಿಯ ಮರ ಮುಟ್ಟುಗಳನ್ನು ಸಾಗಾಟ ಮಾಡುವಂತಹ ಅಕ್ರಮ ಚಟುವಟಿಕೆಗಳು ಜರಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಅವುಗಳನ್ನು ಸಾಬೀತು ಪಡಿಸುವ ಸಾಕ್ಷಿಗಳನ್ನು ವಂದೇ ಮಾತರಂ ಕಲೆಹಾಕುತ್ತಿದ್ದು ಶೀರ್ಘವೇ ಸಾಕ್ಷಿಗಳ ಸಮೇತ ಜಿಲ್ಲಾಧಿಕಾರಿ ಹಾಗೂ ಸಚಿವರ ಗಮನಕ್ಕೆ ದೂರು ನೀಡಲಾಗುವುದೆಂದು ಅವರು ನುಡಿದರು, ಕೋತಿಗಳ ಹಾವಳಿ ನಿಯಂತ್ರಿಸಬೇಕಿದೆ, ರೈತರು ತಮ್ಮ ಹೊಲಗಳಲ್ಲಿ ಹಾಕಿರುವ ಫಸಲನ್ನು ಕಾಯಲು ರಾತ್ರಿ ಇಡೀ ನಿದ್ದೆಗೆಡಬೇಕಾದ ದುಸ್ಥಿತಿ ಉಂಟಾಗಿದೆ, ನಾಣ್ಯಾಪುರ, ಹೊಸಕೇರಿ,ದಶಮಾಪುರ, ಗ್ರಾಮಗಳ ಹೊಲಗಳಿಗೆ ರಾತ್ರಿ ಕಾಡುಹಂದಿಗಳ ಹಾವಳಿ ಮಿತಿ ಮೀರಿದ್ದು, ರೈತರು ತಮ್ಮ ಹೊಲಗಳಲ್ಲಿ ಹಾಕಿರುವ ಫಸಲನ್ನು ಕಾಯಲು ರಾತ್ರಿ ಇಡೀ ನಿದ್ದೆಗೆಡಬೇಕಾದ ದುಸ್ಥಿತಿ ಉಂಟಾಗಿದೆ ಅವುಗಳನ್ನು ಬೇರೆಡೆಗೆ ಹೋಡಿಸುವ ಕಾರ್ಯವನ್ನು ಅರಣ್ಯ ಇಲಾಖೆ ಶೀಘ್ರವೇ ಮಾಡಬೇಕಿದೆ, ನಿರ್ಲಕ್ಷ್ಯ ವಹಿಸಿದರೆ ಕೆಲವೇ ದಿನಗಳಲ್ಲಿ ಅರಣ್ಯಾಧಿಕಾರಿಗಳ ವಿರುಧ್ದ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ವಂದೇ ಮಾತರಂ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವೃಷಬೇಂದ್ರ ಎಚ್ಚರಿಸಿದ್ದಾರೆ.ಈ ಸಂದರ್ಬದಲ್ಲಿ ಹೊಸಕೇರಿ ಪ್ರಕಾಶ,ಕೊಟೇಶ, ವೀರಭದ್ರಪ್ಪ,ಶೇಕ್ರಪ್ಪ,ಬಸವರಾಜ,ನಾಗರಾಜ,ವೀರಭದ್ರಪ್ಪ.ಕೊಟ್ರೇಶ,ಟಿ.ಇಬ್ರಾಹೀಂ ಖಲೀಲ್,ಜೂಗುಲರ ಸೊಲ್ಲೇಶ,ಸುರೇಶ,ಎಲೆನಾಗರಾಜ,ಬಡಿಗೇರನಾಗರಾಜ,ತಿಪ್ಪೇಸ್ವಾಮಿ,ಮರಿಸ್ವಾಮಿ,ನಾಣ್ಯಾಪುರಗ್ರಾಮದದಿಬ್ಬದಳ್ಳಿಮಲ್ಲಪ್ಪ,ವೀರೇಶ,ದುರುಗಪ್ಪ,ಸೋಮು, ಆನಂದ, ವೀರಣ್ಣ, ರವಿ,ಪಾಪಣ್ನ,ಹನುಮಂತಪ್ಪ,ರಾಮಪ್ಪ,ವಂದೇ ಮಾತರಂ ವೇದಿಕೆಯ ಹಂಪಾಪಟ್ಣ ಕೊಟ್ರೇಶ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here