ತಿಪಟೂರು ನಗರ ಪೋಲೀಸರ ಕಾರ್ಯಚರಣೆ : ಸರಗಳ್ಳನ ಬಂಧನ

0
26

ತಿಪಟೂರು

    ಜು.27 ರಂದು ಸಂಜೆ 7.30ರ ಸಮಯದಲ್ಲಿ ಗೊರಗೊಂಡನಹಳ್ಳಿ ಬಸ್ ನಿಲ್ದಾಣದ ಬಳಿ ಅಂಗಡಿಗೆ ಬಾಳೆಹಣ್ಣು ತರಲು  ಹೋದಾಗ ಒಬ್ಬ ಅವರಿಚಿತ ವ್ಯಕ್ತಿ ಮಹಿಳೆಯ ಮಾಂಗಲ್ಯದ ದರವನ್ನು ದೋಚಿ ಪರಾರಿಯಾಗಿದ್ದ ಪ್ರಕರಣದ ಬಗ್ಗೆ ಮಂಜುಳಾ ಕೋಂ ಅಶೋಕ್ ಗೊರಗೊಂಡನಹಳ್ಳಿ ವಾಸಿ ಇವರು ನೀಡಿದ ಪಿರ್ಯಾದಿನ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 392 ಐ.ಪಿ.ಸಿ ರೀತ್ಯಾ ಚಿನ್ನದ ಸರ ಅಪಹರಣ ಕೇಸು ದಾಖಲಾಗಿರುತ್ತದೆ.

    ಈ ಸರಗಳ್ಳತನದ ಪ್ರಕರಣ ಪತ್ತೆ ಮಾಡಲು ಆರಕ್ಷಕ ಅಧೀಕ್ಷಕರಾದ ಡಾ. ದಿವ್ಯಾ.ವಿ.ಗೋಪಿನಾಥ್ ಮತ್ತು ಹೆಚ್ಚುವರಿ ಎಸ್ಪಿ ಡಾ. ಶೋಭಾರಾಣಿರವರ ಮಾರ್ಗದರ್ಶನದಲ್ಲಿ ಹಾಗೂ ತಿಪಟೂರು ಉಪವಿಭಾಗದ ಶ್ರೀ ವೇಣುಹೋಪಾಲ ಪೊಲೀಸ್ ಉಪಅಧೀಕ್ಷಕರ ನೇತೃತ್ವದಲ್ಲಿ ತಿಪಟೂರು ನಗರ ಠಾಣೆಯ ಇನ್ಸ್‍ಪೆಕ್ಟರ್ ಎಂ.ಎಸ್.ದೀಪಕ್ ರವರು ತನಿಖೆ ಕೈಗೊಂಡು ಸಾಕ್ಷಿ ಆಧಾರಗಳನ್ನು ಸಂಗ್ರಹಿಸಿ ಅಪರಿಚಿತ ವ್ಯಕ್ತಿಯ ರೇಖಾಚಿತ್ರ ಮತ್ತು ಅಪರಿಚಿತ ವಾಹನದ ಪತ್ತೆ ಬಗ್ಗೆ ತಿಪಟೂರು ನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್.ಸಿ.32 ಉಸ್ಮಾನ್‍ಸಾಬ್, ಪಿ.ಸಿ.157 ಮೋಹನಕುಮಾರ, ಪಿ.ಸಿ. 530 ಓಂಕಾರಮೂರ್ತಿ, ಪಿಸಿ 661 ದಕ್ಷಿಣಮೂರ್ತಿ ಮತ್ತು ಸಿ.ಸಿ 968 ಮಂಜುನಾಥ.ಟಿ.ಎಂ ಇವರುಗಳ ಪ್ರತ್ಯೇಕ ತಂಡವನ್ನು ರಚಿಸಿದ್ದು, ಜು.29 ರಂದು ಅಪರಾಧ ಪತ್ತೆ ತಂಡದ ಪಿ.ಸಿ.157 ಮೋಹನಕುಮಾರ, ಪಿ.ಸಿ. 530 ಓಂಕಾರ ಮೂರ್ತಿ ರವರು ಗಸ್ತಿನಲ್ಲಿದ್ದಾಗ ಹಾಲ್ಕುರಿಕೆ ರಸ್ತೆ ಗೋವಿನಪುರ ಸರ್ಕಲ್ ಬಳಿ ಪೊಲೀಸ್ ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ನಡೆಸುತ್ತಿರುವುದನ್ನು ನೋಡಿ ತಪ್ಪಿಸಿಕೊಂಡು ಹೋಗುತ್ತಿದ್ದ ಸ್ಪ್ಲೆಂಡರ್ ಪ್ಲಸ್ ವಾಹನ್ ನಂಬರ್ ಅಸ್ತವಸ್ತವಾಗಿದ್ದು ಈ ವಾಹನವನ್ನು ಗುರುತಿಸಿ

     ಹಿಂಬಾಲಿಸಿ ಹಾಸನ ಸರ್ಕಲ್ ಬಳಿ ಪತ್ತೇಕಾರ್ಯದಲ್ಲಿ ತೊಡಗಿದ್ದ ಇತರೆ ಸಿಬ್ಬಂದಿಗಳಾದ ಹೆಚ್.ಸಿ. 32 ಉಸ್ಮಾನ್‍ಸಾಬ್, ಪಿಸಿ 661 ದಕ್ಷಿಣ ಮೂರ್ತಿ ಮತ್ತು ಸಿ.ಸಿ 968 ಮಂಜುನಾಥ.ಟಿ.ಎಂ ಇವರುಗಳ ಸಹಾಯದಿಂದ ಆರೋಪಿಗಳಾದ 1) ಹಾಸನ ಜಿಲ್ಲೆ ಆನೇಹಳ್ಳಿ ಗ್ರಾಮದ ಗುರುಪ್ರಸಾದ್, 2) ತಿಪಟೂರು ತಾಲ್ಲೂಕು ಗುರುಗದಹಳ್ಳಿ ಗ್ರಾಮದ ಶಶಿ.ಜಿ.ಬಿ ರವರನ್ನು ವಶಕ್ಕೆ ಪಡೆದಿದ್ದು, ಈ ಪ್ರಕರಣದಲ್ಲಿ ದೋಚಿಕೊಂಡು ಹೋಗಿದ್ದ 37 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಹಾಸನ ಜಿಲ್ಲೆ, ಗಂಡಸಿ ಠಾಣೆಯ ಮೊ.ನಂ. 205/2018, ತಿಪಟೂರು ಉಪವಿಭಾಗದ ಚಿಕ್ಕನಾಯಕನಹಳ್ಳಿ ಠಾಣೆಯ ಮೊ.ನಂ 94/2018 ಮತ್ತು ನೊಣವಿನಕೆರೆ ಪೊಲೀಸ್ ಠಾಣೆಯ ಮೊ.ನಂ 76/2018 ರಲ್ಲಿ ಒಟ್ಟು 4 ಸರ ಅಪಹರಣ ಪ್ರಕರಣಗಳನ್ನು ಬೇಧಿಸಿ ಕೃತ್ಯಕ್ಕೆ ಉಪಯೋಗಿಸಿದ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ಬಾಹನ, 3 ಚಿನ್ನದ ಸರ ಮಾಂಗಲ್ಯ, ಒಟ್ಟು 3.50 ಲಕ್ಷ ಬೆಲೆ ಬಾಳುವ ಚಿನ್ನದ ವಡವೆಗಳನ್ನು ಪತ್ತೆಹಚ್ಚಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ತಿಪಟೂರು ನಗರ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯದಕ್ಷತೆಯನ್ನು ಪ್ರಶಂಸಿದ್ದಾರೆ

LEAVE A REPLY

Please enter your comment!
Please enter your name here