ತಿಪ್ಪಾರೆಡ್ಡಿಗೆ 6ನೇ ಬಾರಿಯೂ ಗೆಲುವು

0
20

ಚಿತ್ರದುರ್ಗ;
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮತ್ತೆ ಗೆಲುವು ಸಾಧಿಸಿದ್ದಾರೆ. ಸತತವಾಗಿ ಈ ಕ್ಷೇತ್ರದಲ್ಲಿ ಅವರು ಐದು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ತಿಪ್ಪಾರೆಡ್ಡಿ ಅವರು ಇದುವರೆಗೂ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಸೋಲು ಕಂಡಿದ್ದರು. ಅದೇ ವೇಳೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಗಿಟ್ಟಸಿಕೊಂಡಿದ್ದರು.

ಕೋಟೆನಾಡಿನ ಚಾಣಾಕ್ಯ ರಾಜಕಾರಣಿ ಎಂದೇ ಖ್ಯಾತಿಗಳಿಸಿರುವ ತಿಪ್ಪಾರೆಡ್ಡಿ ಅವರು, ಈ ಚುನಾವಣೆಯಲ್ಲಿ 81632 ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. 32226 ಅಂತರದಲ್ಲಿ ಅವರು ಜಯಗಳಿಸಿದ್ದಾರೆ.
ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಚುರುಕುಗೊಂಡಿದ್ದರೂ ಚಿತ್ರದುಗ ಕ್ಷೇತ್ರದ ಮತ ಎಣಿಕೆ ಆರಂಭ ವಿಳಂಬವಾಗಿತ್ತು. ಮತ ಎಣಿಕೆಯ ಮೊದಲ ಸುತ್ತಿನಿಂದ ಕೊನೆ ಸುತ್ತಿನ ವರೆಗೂ ತಿಪ್ಪಾರೆಡ್ಡಿ ಅವರು ಮುನ್ನಡೆ ಸಾಧಿಸುತ್ತಲೇ ಬಂದಿದ್ದರು.

ಫಲಿತಾಂಶ ಪೂರ್ಣ ಪ್ರಮಾಣದಲ್ಲಿ ಘೋಷಣೆಯಾಗುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಚಿತ್ರದುರ್ಗದ ವಿವಿಧ ಬಡಾವಣೆಗಳಲ್ಲಿ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಿ ಗೆಲುವಿನ ಸಂಭ್ರಮ ಆಚರಿಸಿದರು. ಗಾಂಧಿ ವೃತ್ತ, ಮದಕರಿನಾಯಕನ ವೃತ್ತ ಮತ್ತು ತಿಪ್ಪಜ್ಜಿ ಸರ್ಕಲ್‍ನಲ್ಲಿ ತಿಪ್ಪಾರೆಡ್ಡಿ ಅವರ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಿದರು.

ಜೋಗಿಮಟ್ಟಿ ರಸ್ತೆಯಲ್ಲಿಯು ಯುವಕರು, ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿಯ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here