ತುಂಗಾಭದ್ರ ನದಿ ಸೇತುವೆ ಮೇಲೆ ಭಾರಿ ಗಾತ್ರದ ವಾಹನ ಸಂಚಾರ : ಸ್ಥಳೀಯರ ಮತ್ತು ಪೋಲಿಸರ ಮಧ್ಯೆ ವಾಗ್ವಾದ

0
54

ಕಂಪ್ಲಿ:

      ಕಂಪ್ಲಿ-ಗಂಗಾವತಿ ಸಂಪರ್ಕದ ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸುವಂತೆ ಲೋಕೊಪಯೋಗಿ ಇಲಾಖೆ ಮತ್ತು ಬಳ್ಳಾರಿ-ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಕಂಪ್ಲಿಯ ಕೆಲ ಪೋಲಿಸರು ಲಾರಿ ಚಾಲಕರಿಂದ ಹಣ ವಸೂಲಿ ಮಾಡುವ ಮೂಲಕ ಮೇಲಾಧಿಕಾರಿಗಳ ಆದೇಶವನ್ನ ದಿಕ್ಕರಿಸಿ ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳನ್ನು ಬಿಡುತ್ತಾರೆಂದು ಆರೋಪಿಸಿ ಸ್ಥಳೀಯರು ತಹಶೀಲ್ದಾರ್ ಶರಣಮ್ಮ ಕಾರಿ ಅವರ ಕಾರಿಗೆ ಮಂಗಳವಾರ ತಡ ರಾತ್ರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

      ಕಳೆದ ವಾರ ತುಂಗಭದ್ರ ಜಲಾಶಯದಿಂದ ನದಿಗೆ ಬಹಳಷ್ಟು ನೀರು ಹರಿಬಿಡಲಾಗಿತ್ತು. ಸೇತುವೆ ಮೇಲೆ ಬಸ್ಸುಗಳನ್ನು ವರತುಪಡಿಸಿ ಭಾರಿ ಗಾತ್ರದ ವಾಹನಗಳನ್ನು ಬಿಡಬಾರದೆಂದು ಬಳ್ಳಾರಿ ಜಿಲ್ಲಾಧಿಕಾರಿ ರಾಮ್ ಪ್ರಶಾಂತ್ ಮನೊಹರ್‍ರವರು ಕಟ್ಟಪ್ಪಣೆ ಮಾಡಿದ್ದರೂ ಇಲ್ಲಿನ ಪೋಲಿಸರು ಜಗಜ್ಜಾಹಿರವಾಗಿಯೆ ಲಾರಿಗಳನ್ನು ಬಿಡುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಅಂತವರ ವಿಡಿಯೊವನ್ನ ಮಾಡಿ ಸ್ಟೇಷನ್‍ಗೆ ಕರೆಯಿಸಿ ಬಡಿಯೋದು, ಕೇಸ್ ಹಾಕೋದು ಮಾಡಿ ಸಾರ್ವಜನಿಕರಲ್ಲಿ ಭಯದ ವಾತವರುಣವನ್ನ ಸೃಷ್ಟಿ ಮಾಡಿದ್ದಾರೆ. ಪ್ರತಿ ದಿನಾನೂ ರಾತ್ರಿಯಿಡಿ ಲಾರಿಗಳನ್ನು ಸೇತುವೆ ಮೇಲೆ ಬಿಡುವ ಪೋಲಿಸರಿಗೆ ಏನಿಲ್ಲವೆಂದರೂ ಎಪ್ಪತ್ತರಿಂದ ಎಂಬತ್ತು ಸಾವಿರದವರೆಗೆ ಚಾಲಕರಿಂದ ಕಲೆಕ್ಷನ್ ಮಾಡುತ್ತಾರೆ ಎಂದು ಆರೋಪಿಸಿದರು. ತಹಶೀಲ್ದಾರ್‍ರರು ಭಾರಿ ತೂಕದ ಲಾರಿಗಳನ್ನು ಹೊಸಪೇಟೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದ್ದನ್ನೇ ನೆಪ ಮಾಡಿಕೊಂಡು ಪೊಲೀಸ್ ಸಿಬ್ಬಂದಿಗಳು ಸಿಕ್ಕಸಿಕ್ಕಂತೆ ಹಣ ವಸೂಲಿ ಮಾಡಿ ಲಾರಿಗಳನ್ನು ರಾತ್ರಿ ಸಮಯದಲ್ಲಿ ಸೇತುವೆ ಮೇಲೆ ಸಂಚರಿಸಲು ಬಿಡಲಾಗುತ್ತಿದೆ ಎಂಬ ಬಲವಾದ ಆರೋಪಗಳು ವ್ಯಕ್ತವಾದವು. ಸಾರ್ವಜನಿರ ಮನವಿ ಮೇರೆಗೆ ತಹಶೀಲ್ದಾರ್ ಶರಣಮ್ಮ ಕಾರಿ ಅವರು ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕಂಪ್ಲಿಯ ಹೊಸ ಬಸ್‍ನಿಲ್ದಾಣ ಬಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸ್‍ನಿಲ್ದಾಣದಲ್ಲಿ ಸಾಕಷ್ಟು ಲಾರಿಗಳು ನಿಂತಿರುವುದು ಕಂಡು ಬಂತು. ಇಡೀ ಬಸ್ ನಿಲ್ದಾಣವೆ ಲಾರಿ ನಿಲ್ದಾಣವಾಗಿ ಮಾರ್ಪಟ್ಟಿತ್ತು. ಹಣ ಕೊಟ್ಟರೆ ಮಾತ್ರ ಪೊಲೀಸ್ ಸಿಬ್ಬಂದಿಗಳು ಲಾರಿಗಳನ್ನು ಬಿಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರರ ಮುಂದೆಯೆ ಸ್ಥಳೀಯರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಯುವಕರು ಪೋಲಿಸರಿಗೆ ತರಾಟೆ ತೆಗೆದುಕೊಂಡರು. ಇದರಿಂದ ಕೆಲಕಾಲ ಗೊಂದಲದ ವಾತವಾರಣ ಸೃಷ್ಠಿಯಾಯಿತು.

      ಸೇತುವೆ ಶೀಥಿಲಗೊಂಡಿದ್ದು, ಇದು 17 ಟನ್ ಭಾರ ಹೋರುವ ಕೆಪಾಸಿಟಿ ಹೊಂದಿದೆ. ನದಿಯಲ್ಲಿ ಅಧಿಕ ನೀರು ಹರಿಯುವಾಗಲೂ ಪೋಲಿಸರು 25 ರಿಂದ 40 ಟನ್ ಭಾರದ ಗಾಡಿಗಳನ್ನು ಸೇತುವೆ ಮೇಲೆ ಬಿಡುತ್ತಿರುವುದು ಶೋಚನೀಯ. ಹಣದ ಆಸೆಗೆ ಇಲ್ಲಿನ ಪೋಲಿಸ್‍ರು ಸೇತುಗೆ ಕಂಟಕವಾಗಿದ್ದಾರೆ. ಸೂಕ್ತ ಕ್ರಮವಾಗಿಲ್ಲವಾದರೆ ಸೇತುವೆಗೆ ಉಳಿಗಾಲವಿಲ್ಲವೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here