ತುಂಬಿ ತುಳುಕುತ್ತಿರುವ ಶಿವಾಜಿ ನಗರದ ಚರಂಡಿಗಳು

0
28

ರಾಣಿಬೆನ್ನೂರ:

               ತುಮ್ಮಿನಕಟ್ಟಿ ಗ್ರಾಮದ ಶಿವಾಜಿ ನಗರದಲ್ಲಿ ಚರಂಡಿಗಳು ತುಂಬಿ ತುಳಿಕಿದರೂ ಗ್ರಾಪಂ ಆಡಳಿತವು ಇತ್ತ ಕಡೆ ಗಮನ ಹರಿಸದೆ ಇಲ್ಲಿನ ನಿವಾಸಿಗಳು ಸೊಳ್ಳೆ ಹಾವಳಿಯಿಂದ ಸಿಲುಕಿದ್ದಿದ್ದಾರೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್.ಶಂಕರ ಹೇಳಿದರು. ಅವರು ತುಮ್ಮಿನಕಟ್ಟಿ ಗ್ರಾಮದಲ್ಲಿ ಶಿವಾಜಿನಗರಕ್ಕೆ ಬೆಟ್ಟಿ ನೀಡಿ ಅಲ್ಲಿಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ನಂತರ ಸ್ಥಳಕ್ಕೆ ಸಿಬ್ಬಂದಿ ಹಾಗೂ ಗ್ರಾಪಂ ಪಿಡಿಒ ಕರೆಯಿಸಿ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡರು.
                ಇಲ್ಲಿಯ ನಿವಾಸಿಯರು ದಿನನಿತ್ಯ ಸೊಳ್ಳೆ ಕಡಿತದಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಅನೇಕ ಜನ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಚಂಡಿಗಳನ್ನು ಸ್ವಚ್ಚಗೊಳಿಸಬೇಕು. ಬಿಳಿಚಿಂಗ್ ಪೌಡರ್ ಹಾಕಬೇಕು. ಫಾಗಿಂಗ್ ಮಸೀನ್‍ನಿಂದ ಚರಂಡಿಗಳಿಗೆ ದಿನನಿತ್ಯ ಸಾಯಂಕಾಲ ಸಿಂಪಡಿಸಬೇಕು ಎಂದು ಹೇಳಿದರು.
                 ಶಿವಾಜಿ ನಗರದಲ್ಲಿ ಬಡ ಕೂಲಿಕಾರ್ಮಿಕರಿದ್ದು, ಅಲ್ಲಿ ಮಾರ್ಕಂಡೇಶ್ವರ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಸ್ಥಾನ ಇದ್ದು, ಈಗಾಗಲೇ ಈಗಾಗಲೇ ಇಲ್ಲಿ ಖಾಸಗಿ ಬಾರ್ ಇದೆ. ಮತ್ತೊಂದು ಎಂಎಸ್‍ಐಎಲ್ ಮಧ್ಯದ ಅಂಗಡಿ ಮಾಡಲು ಹೊರಟಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ. ಇದನ್ನು ತಿಳಿದು ಸಚಿವ ಆರ್.ಶಂಕರ ಎಂಎಸ್‍ಐಎಲ್ ಮಧ್ಯದ ಅಂಗಡಿ ಪರವಾನಿಗೆಯನ್ನು ರದ್ದುಪಡಿಸಲಾಗಿದೆ ಎಂದರು. ಸ್ತ್ರೀಶಕ್ತಿ ಸಂಘಗಳು ಮಹಿಳಾ ಸ್ವಸಹಾಯ ಸಂಘಗಳ ದೂರಿನ ಮೇರೆಗೆ ಹಾವೇರಿ ಜಿಲ್ಲಾಧಿಕಾರಿ ಅಬಕಾರಿ ಆಯುಕ್ತರಿಗೆ ಪತ್ರ ಬರೆದು ರದ್ದುಗೊಳಿಸಲಾಗಿದೆ ಎಂದರು.
ರಾಜು ಅಡಿವೇರ, ಶ್ರೀನಿವಾಸ ಮರಮಂಚಿ, ಸಿದ್ದಪ್ಪ ಜಿಗಳಿ, ಮಂಜಪ್ಪ ಹುಬ್ಬಳ್ಳಿ, ರಾಜು ಪಾಟೀಲ, ಶಿವಾಜಿನಗರದ ನಿವಾಸಿಗಳು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here