ತುಮಕೂರು ನಗರದಲ್ಲಿ : ಫಲಿತಾಂಶದ ಚರ್ಚೆ

 -  - 


ತುಮಕೂರು
ತುಮಕೂರು ನಗರ ವಿ‘ಧಾನ ಸಬಾ ಕ್ಷೇತ್ರದಿಂದ ಬಿಜೆಪಿ ಅ‘ಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಅವರು ಶಾಸಕರಾಗಿ ವಿಜೇತರಾಗುತ್ತಿದ್ದಂತೆ, ಇತ್ತ ನಗರಾದ್ಯಂತ ಲಿತಾಂಶ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯಾಸಕ್ತರಲ್ಲಿ ‘‘ಚುನಾವಣೋತ್ತರ ಚರ್ಚೆ’’ಗಳು ನಡೆಯುತ್ತಿವೆ.

‘‘ಚುನಾವಣಾ ಪೂರ್ವ’’ದಲ್ಲಿ ಸಂ‘ವನೀಯ ಲಿತಾಂಶದ ಬಗ್ಗೆ ಸವಾಲಿನೋಪಾದಿಯಲ್ಲಿ ಚರ್ಚೆಗಳು ನಡೆದಿದ್ದರೆ, ಇದೀಗ ಅಧಿಕೃತ ಲಿತಾಂಶ ಬಂದ ಬಳಿಕ ಅಭ್ಯರ್ಥಿ  ಪಡೆದುಕೊಂಡಿರುವ ಓಟುಗಳ ಸಂಖ್ಯೆಯ ಬಗ್ಗೆ, ಗೆಲುವು-ಸೋಲಿನ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳು ಸಾರ್ವಜನಿಕ ಚರ್ಚೆಯಲ್ಲಿ ವ್ಯಕ್ತಗೊಳ್ಳುತ್ತಿವೆ. ಬೂತ್‌ವಾರು ಅಭ್ಯರ್ಥುಗಳು  ಪಡೆದಿರುವ ಮತಗಳ ಸಂಖ್ಯೆಗಳೂ ಇದೀಗ ನಗರಾದ್ಯಂತ ಬಹುಮುಖ ಚರ್ಚೆಗೆ ಒಳಗಾಗುತ್ತಿದ್ದು, ಯಾವ ಬಡಾವಣೆಯ ಯಾವ ಬೂತ್‌ನಲ್ಲಿ ಅಲ್ಲಿನ ಜನರು ಯಾರ ಕೈಹಿಡಿದಿದ್ದಾರೆಂಬುದು ವ್ಯಾಪಕ ವಿಶ್ಲೇಷಣೆಗೊಳಗಾಗುತ್ತಿದೆ.

 

‘‘ಬಿಜೆಪಿಗೆ ಲಿಂಗಾಯಿತ/ವೀರಶೈವ ಸಮುದಾಯದ ಓಟುಗಳ ಜೊತೆಗೆ ಎಲ್ಲ ಮೇಲ್ವರ್ಗದ ಓಟುಗಳು, ಕೊನೆಯ ಕ್ಷಣದ ಪ್ರಯತ್ನದಿಂದ ಹಿಂದುಳಿದ ವರ್ಗಗಳು, ದಲಿತರು, ಒಕ್ಕಲಿಗರ ಓಟುಗಳು ಬಿಜೆಪಿಯ ಪಾಲಾಗಿ ಬಿಜೆಪಿ ಗೆಲ್ಲುವಂತಾಗಿದೆ. ಜೆಡಿಎಸ್‌ಗೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಕ್ರೈಸ್ತರ ಓಟುಗಳು ಬಂದಿವೆ. ಜೊತೆಗೆ ಒಂದಿಷ್ಟು ಮುಸ್ಲಿಮರ ಓಟುಗಳು ಬಿದ್ದಿವೆ. ಹೀಗಾಗಿ ಅದು ಎರಡನೇ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ಓಟಿನ ವಿನಃ ದಲಿತರು, ಹಿಂದುಳಿದ ವರ್ಗಗಳ ಓಟುಗಳು ಬೀಳದೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ನಗರದೊಳಗೆ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ಸ್ಪರ್‘ೆ ನಡೆದಿದೆ’’ ಎಂದು ಮತದಾರರು ಬಗೆಬಗೆಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯ ಜ್ಯೋತಿಗಣೇಶ್ ಅವರ ಗೆಲುವು ಬಹುತೇಕ ಜನರಲ್ಲಿ ಅಚ್ಚರಿ ಮೂಡಿಸಿದೆ. ಇದನ್ನು ‘‘ಕೊನೆ ಕ್ಷಣದ ಗೆಲುವು’’ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ‘‘ಕೊನೆ ಘಳಿಗೆಯಲ್ಲಿ ಮತದಾರರನ್ನು ‘ತಲುಪಿದ್ದೇ’ ಗೆಲುವಿಗೆ ಕಾರಣ’’ ಎಂಬ ಮಾತುಗಳು ಮತದಾರರಲ್ಲಿ ಹರಡಿವೆ.

ಜೆಡಿಎಸ್‌ನ ಎನ್.ಗೋವಿಂದರಾಜು ಅವರಿಗೆ ಈ ಬಾರಿಯೂ ‘‘ಉಚಿತ ಕುಡಿಯುವ ನೀರು ಪೂರೈಕೆ- ಯಾತ್ರೆ-ಕಾಣಿಕೆ-ದೇವರ ೆಟೋ- ಪ್ರಮಾಣ’’ಯಾವುದೂ ಕೈಹಿಡಿಯಲಿಲ್ಲ. ಕ್ಯಾಲೆಂಡರ್, ವಾರ್ಷಿಕ ಡೈರಿ ವಿತರಣೆಗಳು ನೆರವಿಗೆ ಬರಲಿಲ್ಲ. ಕಳೆದ ಹತ್ತು ವರ್ಷಕ್ಕೂ ಅಧಿಕ ಕಾಲದ ಅವರ ಈ ಯಾವ ಪ್ರಯತ್ನಗಳೂ ಅವರಿಗೆ 2013 ಮತ್ತು 2018 ರ ಚುನಾವಣೆಯಲ್ಲಿ ಲ ಕೊಡಲಿಲ್ಲ. ಇದೂ ಈಗ ಜನರ ಬಾಯಲ್ಲಿ ಚರ್ಚೆಗೊಳ್ಳುತ್ತಿದೆ.

‘‘ಈಗ ಆಣೆ ಪ್ರಮಾಣಗಳಿಗೆ ಕಿಂಚಿತ್ತೂ ಕಿಮ್ಮತ್ತಿಲ್ಲವೆಂಬುದನ್ನು ಹಾಗೂ ಆಣೆ ಪ್ರಮಾಣವನ್ನು ನಂಬಬಾರದೆಂಬುದನ್ನು ನಮ್ಮ ಜನರು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಯಾವ ದೇವರ ಪಟ ಇದ್ದರೂ ಅಷ್ಟೇ, ‘ರವಸೆ ಕೊಟ್ಟಂತೆಯೇ ನಡೆಯಬೇಕೆಂದೇನೂ ಇಲ್ಲ ಎಂಬುದನ್ನು ಜನರು ತೋರಿಸಿದ್ದಾರೆ’’ ಎಂದೆಲ್ಲ ಜನರು ಹೇಳುತ್ತಿದ್ದಾರೆ. ‘‘ಜನಸೇವೆ/ ಸಮಾಜಸೇವೆ ಮಾಡುವವರು ಇನ್ನು ಮುಂದೆ ಯೋಚನೆ ಮಾಡಬೇಕು. ಅವರ ಸ್ವಂತ ಹಣ ಖರ್ಚುಮಾಡಿಕೊಂಡು ಸಮಾಜ ಸೇವೆ ಮಾಡಬೇಕಾಗಿಲ್ಲ. ಅಲ್ಲದೆ ಸಮಾಜ ಸೇವೆಗೂ ರಾಜಕೀಯಕ್ಕೂ ಸಂಬಂ‘ವಿಲ್ಲ. ಸಮಾಜಸೇವೆಗೂ ಓಟಿಗೂ ಸಂಬಂ‘ವಿಲ್ಲ. ಏನೇ ಸಾರ್ವಜನಿಕ ಸಮಸ್ಯೆ ಇದ್ದರೂ ಆ ಬಗ್ಗೆ ಜನಪ್ರತಿನಿಧಿ ಮೇಲೆ ಒತ್ತಡ ಹಾಕಿ ಅದನ್ನು ಸರ್ಕಾರದ ಮೂಲಕವೇ ದೊರಕುವಂತೆ ಮಾಡಲು ಹೋರಾಡಬೇಕೇ ವಿನಃ, ಇನ್ನು ಮುಂದೆ ಯಾರೂ ಸಹಾ ತಮ್ಮ ಸ್ವಂತ ಸಮಯ, ಹಣ ಹಾಕುವ ಅಗತ್ಯವಿಲ್ಲ ’’ ಎಂಬ ಸಂದೇಶವನ್ನು ಜನತೆ ಈ ಮೂಲಕ ತೋರಿಸಿಕೊಟ್ಟಿದ್ದಾರೆ’’ ಎಂಬ ಮಾತುಗಳೂ ಕೇಳಿಬರುತ್ತಿವೆ.

‘‘ಕಾಂಗ್ರೆಸ್ ಅಭ್ಯರ್ಥಿ ಡಾ.ಎಸ್.ರಫೀಕ್ ಅಹಮದ್ ಅವರು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರಾದರೂ, ಅದೇನೂ ಅವರ ನೆರವಿಗೆ ಬರಲಿಲ್ಲ. ಅಂದರೆ ಅಭಿವೃದ್ಧಿ ಕಾಮಗಾರಿಗಳೂ ಗೆಲುವಿಗೆ ಮಾನದಂಡವಾಗುವುದಿಲ್ಲವೇನೋ’’ ಎಂದು ಮತ್ತೆ ಕೆಲವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ‘‘ರಫೀಕ್ ಅಹಮದ್ ಅವರು ಎಲ್ಲ ವರ್ಗದವರನ್ನೂ ಜೊತೆಯಲ್ಲಿ ಕರೆದೊಯ್ಯಲಿಲ್ಲ. ಅದೇ ಅವರ ಹಿನ್ನಡೆಗೆ ಕಾರಣ’’ ಎಂದೂ ಕೆಲವರು ಹೇಳುತ್ತಿದ್ದಾರೆ.

 

 

comments icon 0 comments
0 notes
4 views
bookmark icon

Write a comment...

Your email address will not be published. Required fields are marked *