ತುಮಕೂರು: ಮತ ಎಣಿಕೆ ಕೇಂದ್ರದ ಮುಂದೆ ಕಾರ್ಯಕರ್ತರ ದಂಡು,

0
21

                         ಕ್ಷಣ ಕ್ಷಣದ ಆತಂಕ, ತಲ್ಲಣ, ಗೆದ್ದವರ ಸಂಭ್ರಮಾಚರಣೆ

ತುಮಕೂರು
ಎಲ್ಲೆಲ್ಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಗುಂಪುಗಳು; ಆಯಾ ಪಕ್ಷಗಳವರಿಂದ ತಮ್ಮ ನೇತಾರನಿಗೆ ಹಾಗೂ ಪಕ್ಷಕ್ಕೆ ಜಯಘೋಷ; ಪಕ್ಷದ ಬಾವುಟಗಳ ಪ್ರದರ್ಶನ; ನಡುನಡುವೆ ಮೊಬೈಲ್‌ಗಳಿಗೆ ಬರುತ್ತಿದ್ದ ಲಿತಾಂಶದ ಸಂದೇಶ; ಅದರಿಂದ ಮತ್ತೆ ಕಾರ್ಯಕರ್ತರ ಉತ್ಸಾಹದಲ್ಲಿ ಏರಿಕೆ; ಕ್ಷಣಕ್ಷಣಕ್ಕೂ ಎಲ್ಲರಲ್ಲೂ ‘‘ಮುಂದೇನಾದೀತೋ’’ ಎಂಬಂತೆ ಅದೊಂದು ರೀತಿಯ ಆತಂಕ ಹಾಗೂ ತಲ್ಲಣ; ಅಂತಿಮವಾಗಿ ಲಿತಾಂಶ ತಿಳೊದೊಡನೆ ಗೆದ್ದವರ ಸಂಭ್ರಮಾಚರಣೆ; ಸೋತವರ ಮೌನದ ನಿರ್ಗಮನ- ಇದು ಮಂಗಳವಾರ ಬೆಳಗಿನಿಂದ ಮಧ್ಯಾಹ್ನ ತುಮಕೂರು ನಗರದ ಬಿ.ಎಚ್.ರಸ್ತೆಯ ಮತ ಎಣಿಕೆ ಕೇಂದ್ರಗಳ ಮುಂದೆ ಕಂಡುಬಂದ ವರ್ಣರಂಜಿತ ದೃಶ್ಯಾವಳಿಗಳು.

 

ಮೇ 12 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆದಿತ್ತು. ಮೇ 15 ರಂದು ಮತ ಎಣಿಕೆ ಕಾರ್ಯ ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್, ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಮತ್ತು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕಟ್ಟಡಗಳಲ್ಲಿ ನಡೆಯಿತು.

ತುಮಕೂರು ಜಿಲ್ಲೆಯ ಎಲ್ಲ 11 ವಿಧಾನಸಭೆ‘ (ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮ‘ಧುಗಿರಿ, ಪಾವಗಡ, ಶಿರಾ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಕ್ಷೇತ್ರ) ಮತ ಎಣಿಕೆ ಇಲ್ಲಿ ನಡೆಯಿತು. ಲಿತಾಂಶ ಅರಿಯುವ ಕಾತರದಿಂದ ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಸಾವಿರಾರು ಬೆಂಬಲಿಗರು ಹಾಗೂ ಆಯಾ ಪಕ್ಷದ ಕಾರ್ಯಕರ್ತರು ಜಿಲ್ಲಾದ್ಯಂದದಿಂದ ಆಗಮಿಸಿ, ಮತ ಎಣಿಕೆ ಕೇಂದ್ರದ ಮುಂದಿನ ಸ್ಥಳಗಳಲ್ಲಿ ಜಮಾಯಿಸಿದ್ದರು.

ಸುಡುಬಿಸಿಲನ್ನೂ ಲೆಕ್ಕಿಸದೆ ರಸ್ತೆ ಬದಿ ಕಾದು ನಿಂತಿದ್ದರು. ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಜಗಲಿಗಳನ್ನು ಆಶ್ರಯಿಸಿದ್ದರು. ಅಡ್ಡರಸ್ತೆಗಳಲ್ಲಿರುವ ಮರದ ನೆರಳಲ್ಲಿ ಕುಳಿತಿದ್ದರು. ಎಲ್ಲೆಲ್ಲೂ ಜನವೋ ಜನ ಎಂಬಂತಾಗಿತ್ತು. ಅಲ್ಲೇ ಸನಿಹದ ಕೆ.ಇ.ಬಿ. ರಸ್ತೆಯ ಉದ್ದಕ್ಕೂ ಮರಗಳ ಸಾಲಿನ ಕೆಳಗೆ ದೊಡ್ಡ ಸಂಖ್ಯೆಯಲ್ಲಿ ಜನರು ಕಾತರದಿಂದ ಜಮಾಯಿಸಿದ್ದರು.

                                  ಬಿಗಿ ಪೊಲೀಸ್ ಪಹರೆ,
                                 ರಸ್ತೆ ಸಂಚಾರ ನಿರ್ಬಂಧ
ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಪಹರೆ ಇತ್ತು. ಸ್ಥಳೀಯ ಪೊಲೀಸರ ಜೊತೆಗೆ ಅರೆಸೇನಾ ಪಡೆಗಳ ಸಶಸ್ತ್ರ ಯೋ‘ರುಗಳನ್ನೂ ಗಣನೀಯ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಶಿವಕುಮಾರ ಸ್ವಾಮೀಜಿ ವೃತ್ತದಿಂದ ಎಸ್.ಐ.ಟಿ. ಕಾಲೇಜುವರೆಗಿನ ಬಿ.ಎಚ್.ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಮತ ಎಣಿಕೆ ಕೇಂದ್ರಗಳಿರುವ ಕಟ್ಟಡಗಳ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜನ ಸಂಚಾರವನ್ನೂ ನಿಯಂತ್ರಿಸಲಾಗಿತ್ತು. ಬೆಳಗಿನಿಂದ ಮಧ್ಯಹ್ನದವರೆಗೂ ಇದೇ ಸ್ಥಿತಿ ಇಲ್ಲಿತ್ತು.

           

  ಮೊಬೈಲ್ ಸಂದೇಶ ಬಂದೊಡನೆ
            ಕಾರ್ಯಕರ್ತರಲ್ಲಿ ರೋಮಾಂಚನ
ಮತ ಎಣಿಕೆ ಕೇಂದ್ರದ ಮತ್ತೊಂದು ಪಾರ್ಶ್ವದ ರಸ್ತೆ ಬದಿಯ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಿದ್ದು ಅದರಲ್ಲಿ ಕಾರ್ಯಕರ್ತರು ತುಂಬಿಕೊಂಡಿದ್ದರು. ಆಯಾ ಪಕ್ಷಗಳವರು ತಮ್ಮ ತಮ್ಮ ನಾಯಕರುಗಳಿಗೆ, ಪಕ್ಷಗಳಿಗೆ ಜಯಘೋಷ ಹಾಕುತ್ತಿದ್ದರು. ಅವರಿವರಿಂದ ಹೇಗೋ ಮಾಹಿತಿ ತಿಳಿದೊಡನೆ ಕಾರ್ಯಕರ್ತರ ಘೋಷಣೆಗಳು ತಾರಕಕ್ಕೇರುತ್ತಿತ್ತು. ಕೆಲವರ ಮೊಬೈಲ್‌ಗೆ ಯಾರು ಲೀಡಿಂಗ್ ಇದ್ದಾರೆಂಬ ಹಾಗೂ ಗೆಲುವು ಸಾಧಿಸುತ್ತಿದ್ದಾರೆಂಬ ಮಾಹಿತಿಗಳು ಬರುತ್ತಿದ್ದಂತೆ, ಈ ಗುಂಪುಗಳಲ್ಲಿ ರೋಮಾಂಚನ ಉಂಟಾಗುತ್ತಿತ್ತು. ಮತ್ತೆ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಪಕ್ಷಗಳ ಬಾವುಟಗಳು ಹಾರಾಡುತ್ತಿದ್ದವು. ತಲೆಯ ಮೇಲೆ ಸುಡು ಬಿಸಿಲಿದ್ದರೂ, ಅದನ್ನು ಲೆಕ್ಕಿಸದೆ ಜನರು ಲಿತಾಂಶದ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದರು.

ಒಂದೊಂದು ಸಮಯಕ್ಕೆ ಒಂದೊಂದು ರೀತಿಯ ಮಾಹಿತಿಗಳು ಹರಿದಾಡುತ್ತಿದ್ದುದರಿಂದ ಅಲ್ಲಿದ್ದವರಲ್ಲಿ ಕ್ಷಣ ಕ್ಷಣಕ್ಕೂ ಆತಂಕ, ದುಗುಡ, ತಲ್ಲಣಗಳು ಉಂಟಾಗುತ್ತಿತ್ತು. ತಮ್ಮ ನೇತಾರ ಮುನ್ನಡೆದಿದ್ದಾನೆ ಅಥವಾ ಗೆಲುವು ಸಾಧಿಸುತ್ತಿದ್ದಾನೆ ಎಂಬ ಮಾಹಿತಿ ದೊರೆತೊಡನೆ ಎಲ್ಲರೂ ಉತ್ಸಾಹದಿಂದ ಜಯಘೋಷ ಮಾಡುತ್ತಿದ್ದರು. ತಮ್ಮ ಪಕ್ಷಗಳ ಬಾವುಟ ಪ್ರದರ್ಶಿಸುತ್ತ ಸಂಬ್ರಮಿಸಿದರು. ಗ್ರಾಮಾಂತರ ಪ್ರದೇಶದ ಜನರೇ ಅಧಿಕ ಸಂಖ್ಯೆಲ್ಲಿದ್ದರು.

ಭ‘ರ್ಜರಿ ವ್ಯಾಪಾರ
ಸುಡುಬಿಸಿಲಿನಿಂದ ತತ್ತರಿಸುತ್ತಿದ್ದ ಈ ಜನಸ್ತೋಮವು ದಣಿವಾರಿಸಿಕೊಳ್ಳಲು ಅಲ್ಲೇ ಇದ್ದ ತಂಪುಪಾನೀಯದ ಮಾರಾಟಗಾರರ ಮೊರೆಹೊಕ್ಕಿತು. ಹಣ್ಣಿನ ಜ್ಯೂಸ್, ಕಬ್ಬಿನ ಹಾಲು, ಮಜ್ಜಿಗೆ ಮಾರಾಟಗಾರರಿಗೆ ‘ರ್ಜರಿ ವ್ಯಾಪಾರ ಆಗುತ್ತಿತ್ತು. ಅದೇ ರೀತಿ ಬುಟ್ಟಿಯಲ್ಲಿ ಕೋಸಂಬರಿ ಮಾಡಿಟ್ಟುಕೊಂಡು ಮಾರಾಟಕ್ಕೆ ತಂದಿದ್ದವರ ಬಳಿಗೂ ಜನರು ಮುಗಿಬಿದ್ದು, ಖರೀದಿಸುತ್ತಿದ್ದರು. ಕಡಲೆಕಾಯಿ ಮತ್ತಿತರ ಮಾರಾಟಗಾರರಿಗೂ ವ್ಯಾಪಾರ ಬಲವಾಗಿಯೇ ಇತ್ತು. ಅಕ್ಕಪಕ್ಕದ ಹೋಟೆಲ್‌ಗಳಿಗೂ ಒಳ್ಳೆಯ ವ್ಯಾಪಾರ ಆಗುತ್ತಿತ್ತು.

ವಾಹನ ಸಂಚಾರ ಅಸ್ತವ್ಯಸ್ತ
ವಾಹನ ಸಂಚಾರ ನಿರ್ಬಂಧಿಸಿ ಪೊಲೀಸ್ ಇಲಾಖೆಯು ಕೈಗೊಂಡಿದ್ದ ಕ್ರಮ ಹಾಗೂ ಈ ‘ಾಗದಲ್ಲೆಲ್ಲ ಜಮಾಯಿಸಿದ್ದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಕಾರ್ಯಕರ್ತರ ಗುಂಪುಗಳಿಂದ ನಗರದ ಬಿ.ಎಚ್.ರಸ್ತೆಯಲ್ಲಿ ಹಾಗೂ ಆಸುಪಾಸು ವಾಹನ ಸಂಚಾರ ಅ‘ರ್ದಿನಕ್ಕೂ ಹೆಚ್ಚು ಕಾಲ ಅಸ್ತವ್ಯಸ್ತವಾಯಿತು. ಇದರ ಪರಿಣಾಮ ನಗರದ ಇತರೆ ರಸ್ತೆಗಳಿಗೂ ವ್ಯಾಪಿಸಿತು.

12.20 ರಲ್ಲಿ ರಫೀಕ್ ನಿರ್ಗಮನ
ಮಧ್ಯಾಹ್ನ 12.20 ರಲ್ಲಿ ಮತ ಎಣಿಕೆ ಕೇಂದ್ರದಿಂದ ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅ‘ಭ್ಯರ್ಥಿ ಡಾ.ಎಸ್.ರಫೀಕ್ ಅಹಮದ್ ಹೊರಬಂದಾಗ ಅವರೊಡನೆ ಕಾಂಗ್ರೆಸ್‌ನ ಒಂದಿಬ್ಬರು ಕಾರ್ಪೊರೇಟರ್‌ಗಳು ಹಾಗೂ ಒಂದಿಬ್ಬರು ಮುಖಂಡರು ಇದ್ದರು. ಗಂಭೀರವದನರಾಗಿದ್ದ ಅವರು ನೇರವಾಗಿ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ಆಗಮಿಸಿ ಕಾರು ಹತ್ತಿ ನಿರ್ಗಮಿಸಿದರು. ಅವರ ಹಿಂದೆಯೇ ಬಂದ ಕಾಂಗ್ರೆಸ್‌ನ ಕೆಲ ಕಾರ್ಪೊರೇಟರ್‌ಗಳು ಮತ್ತು ಇತರ ಮುಖಂಡರು ಅಲ್ಲೇ ಇದ್ದ ಟೀ ಅಂಗಡಿಯೊಂದರ ಕಟ್ಟೆಯ ಮುಂದೆ ನಿರಾಶೆಯಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕುಳಿತಿದ್ದು, ನಿರಾಶೆಯಿಂದಲೇ ನಿರ್ಗಮಿಸಿದರು.

ಜಯಘೋಷದೊಡನೆ
ಗೌರಿಶಂಕರ್ ಆಗಮನ
ಮಧ್ಯಾಹ್ನ 12-30 ರ ಹೊತ್ತಿಗೆ ತಮಗೆ ಲಭಿಸಿದ ಗೆಲುವಿನ ಮಾಹಿತಿ ಆ‘ರಿಸಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅ‘ಭ್ಯರ್ಥಿ ಬಿ.ಸಿ.ಗೌರಿಶಂಕರ್ ಅಭಿಮಾನಿಗಳ ದಂಡಿನೊಡನೆ ಆಗಮಿಸಿ, ಮತ ಎಣಿಕೆ ಕೇಂದ್ರದ ಒಳಕ್ಕೆ ತೆರಳಿದರು. ಅಭಿಮಾನಿಗಳು ಪಕ್ಷದ ಧ್ವಜ ಹಿಡಿದು, ಜಯಘೋಷ ಹಾಕುತ್ತಿದ್ದರು.
 ಬಿಜೆಪಿಯ ‘ಭಾರಿ ಗುಂಪು
12-30 ರ ಹೊತ್ತಿಗೆಲ್ಲ ತುಮಕೂರು ನಗರ ಬಿಜೆಪಿ ಅ‘ಭ್ಯರ್ಥಿ ಜ್ಯೋತಿ ಗಣೇಶ್ ಗೆಲ್ಲಲಿದ್ದಾರೆ ಎಂಬ ಮುನ್ಸೂಚನೆ ದೊರೆಯುತ್ತಿದ್ದಂತೆ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ‘ಭಾರಿ ಪ್ರಮಾಣದಲ್ಲಿ ಸೇರಲಾರಂಭಿಸಿದರು.

ಬಳಿಕ ತುರುವೇಕೆರೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೂ ಜಯಘೋಷ ಹಾಕುತ್ತ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ಬಂದು ಬಿಜೆಪಿ ತಂಡದೊಡನೆ ಸೇರಿಕೊಂಡರು. 12-50 ರ ಹೊತ್ತಿಗೆ ಬಿಜೆಪಿಯ ಸಂಭ್ರಮ  ಉಕ್ಕಿ ಹರಿಯತೊಡಗಿತು.. ಅನೇಕ ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಬೈಕ್‌ಗಳಲ್ಲಿ ಸುತ್ತಲಾರಂಭಿಸಿದರು. ವೃತ್ತದಲ್ಲಿ ಪಟಾಕಿ ಸಿಡಿಸಿ ಜಯಘೋಷ ಹಾಕುತ್ತ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ 2 ಗಂಟೆಯಾದರೂ ಆ ಸುಡುಬಿಸಿಲಿನಲ್ಲೂ ಬಿಜೆಪಿಯವರ ಉತ್ಸಾಹ ಏರುತ್ತಲೇ ಹೋಗುತ್ತಿತ್ತು. ಬಳಿಕ ಬಿ.ಎಚ್.ರಸ್ತೆಯಲ್ಲಿ ವಿಜಯೋತ್ಸವ ನಡೆಯಿತು.

ಇದರ ನಡುವೆ ಕೊರಟಗೆರೆಯ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಅವರು ಜಯಗಳಿಸಿದೊಡನೆ ಮ‘ಧ್ಯಾಹ್ನ ಸುಮಾರು 1-30 ರಲ್ಲಿ ಕೊರಟಗೆರೆಯ ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ತಂಡವೊಂದು ಪಕ್ಷದ ‘ಧ್ವಜ ಹಿಡಿದು ಜಯಘೋಷ ಹಾಕುತ್ತ ಮೆರವಣಿಗೆಯಲ್ಲಿ ಶಿವಕುಮಾರ ಸ್ವಾಮೀಜಿ ವೃತ್ತದ ಕಡೆಯಿಂದ ತೆರಳಿತು.

LEAVE A REPLY

Please enter your comment!
Please enter your name here