ತುಮಕೂರು ಮಹಾನಗರ ಪಾಲಿಕೆ ಚುನಾವಣೆ: ಟಿಕೆಟ್ ಗಾಗಿ ಗಿರಕಿ ಹೊಡೆಯುತ್ತಿರುವ ಆಕಾಂಕ್ಷಿಗಳು

0
78

  ತುಮಕೂರು:

Image result for tumkur municipal corporation

      ತುಮಕೂರು ಮಹಾನಗರ ಪಾಲಿಕೆಯ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ವ್ಯಕ್ತಿಗಳು ಟಿಕೆಟ್ಗಾಗಿ ತಮ್ಮ ಪಕ್ಷಗಳ ನೇತಾರರ ಸುತ್ತ ಗಿರಕಿ ಹೊಡೆಯುತ್ತಿರುವ ದೃಶ್ಯ ಈಗ ತುಮಕೂರು ನಗರದಲ್ಲಿ ಸಾಮಾನ್ಯವಾಗಿದೆ.

      ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂಲಕ ಸ್ಪರ್ಧಿಸಲು ಉತ್ಸುಕರಾಗಿರುವವರು ಪಕ್ಷದ ಟಿಕೆಟ್ ಖಾತ್ರಿಗಾಗಿ ನೇತಾರರ ಹಿಂದೆ ಬಿದ್ದಿದ್ದು, ‘‘ಅಣ್ಣ.. ಅಣ್ಣ..’’ ಎನ್ನುತ್ತ ಸುತ್ತಾಡುತ್ತಿರುವುದು ಇತರರ ಪಾಲಿಗೆ ತಮಾಷೆಯಾಗಿ ಕಾಣುತ್ತಿದೆ.

30-40 ಲಕ್ಷ ವೆಚ್ಚಕ್ಕೆ ರೆಡೀನಾ?

      ಈ ರೀತಿ ಎಡಬಿಡದೆ ಗಿರಕಿ ಹೊಡೆಯುತ್ತಿರುವವರಿಗೆ ‘‘ಏನ್ರಪ್ಪ… ಎಲೆಕ್ಷನ್ ಅಂದ್ರೆ ಸುಮ್ನೆ ಅಲ್ಲ.. 30 ರಿಂದ 40 ಲಕ್ಷ ರೂಪಾಯಿ ಖರ್ಚು ಮಾಡಲು ರೆಡೀನಾ?’’ ಎಂದು ನೇತಾರರು ಹೇಳುತ್ತಿದ್ದಾರೆಂಬುದನ್ನೂ ಈ ಸ್ಪರ್ಧಾಕಾಂಕ್ಷಿಗಳೇ ಸಿಕ್ಕಸಿಕ್ಕವರ ಬಳಿ ಹೇಳಿಕೊಳ್ಳುತ್ತಿದ್ದು, ಇದು ಪ್ರಜ್ಞಾವಂತರ ವಲಯದಲ್ಲಿ ಆತಂಕದ ಚರ್ಚೆಗೆ ಎಡೆಮಾಡಿಕೊಟ್ಟಿದೆ

ಬಗೆ ಬಗೆಯ ಮಾತುಗಳು:

      ಇನ್ನೂ ಚುನಾವಣಾ ದಿನಾಂಕ ನಿಗದಿಯಾಗಿಲ್ಲ. ಟಿಕೆಟ್ ಹಂಚಿಕೆಯೇ ಆಗಿಲ್ಲ. ಆದರೂ ಸಹ ‘‘ನಿಮಗೇ ಟಿಕೆಟ್ ಗ್ಯಾರಂಟಿ… ಚುನಾವಣೆ ಎದುರಿಸಲು ‘ಎಲ್ಲ ರೀತಿಯಲ್ಲೂ ರೆಡಿ ಆಗಿರಿ’…ವಾರ್ಡ್ನಲ್ಲಿ ಓಡಾಡಿಕೊಂಡಿರಿ’’ ಎಂಬ ಗ್ರೀನ್ ಸಿಗ್ನಲ್ ಲಭಿಸಿದೆಯೆಂದು ಕೆಲವರು ಹೇಳಿಕೊಂಡು ಹೊಸ ಗೆಟಪ್ನಲ್ಲಿ ಆಯಾ ವಾರ್ಡ್ಗಳಲ್ಲಿ ಓಡಾಡಲಾರಂಭಿಸಿದ್ದಾರೆ. ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಹಾಗೂ ತಮ್ಮ ನೇತಾರರ ಫೋಟೋಗಳನ್ನು ಹಾಕಿಕೊಂಡು, ಇಂಥ ವಾರ್ಡ್ನಿಂದ ಜನಸೇವೆಗೆ ತೊಡಗಿಸಿಕೊಳ್ಳುವುದಾಗಿ ಪ್ರಚಾರವನ್ನೂ ಹಲವರು ಆರಂಭಿಸಿದ್ದಾರೆ. ‘‘ನಾನೇ ತುಂಬ ಪ್ರಯತ್ನ ಪಟ್ಟು ಈ ವಾರ್ಡ್ನ ಮೀಸಲಾತಿ ಬದಲಾಯಿಸಿಕೊಂಡು ಬಂದೆ’’ ಎಂದೆಲ್ಲ ಕೆಲವರು ಹೇಳುತ್ತಿದ್ದಾರೆ.

      ‘‘ನನಗೆ ಪಕ್ಷದ ಟಿಕೆಟ್ ಕೊಡಲೇಬೇಕು. ಏಕೆಂದರೆ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ವಾರ್ಡ್ನ ಜನರು ನನ್ನ ಪರವಾಗಿದ್ದಾರೆ. ಜನರನ್ನು ಮುಖಂಡರ ಬಳಿಗೆ ಕರೆತರುತ್ತೇನೆ’’ ಎನ್ನುವವರೂ ಇದ್ದಾರೆ.

      ‘‘ಟಿಕೆಟ್ ಕೊಡದಿದ್ದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ’’ ಎಂದು ಕೆಲವರು ಧೈರ್ಯದಿಂದ ನೇರವಾಗಿಯೇ ಹೇಳಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ‘‘ನಮ್ಮ ವಾರ್ಡ್ ಜನರು ಕೈಗೊಳ್ಳುವ ತೀರ್ಮಾನದಂತೆ ನಡೆಯುತ್ತೇನೆ’’ ಎಂದು ಪರೋಕ್ಷವಾಗಿ ಬಂಡಾಯದ ಮುನ್ಸೂಚನೆ ಕೊಡುತ್ತಿದ್ದಾರೆ.

      ಒಂದು ಪಕ್ಷದವರು ಮತ್ತೊಂದು ಪಕ್ಷಕ್ಕೆ ಜಿಗಿಯುವ ಸಂದ‘ರ್ಗಳೂ ಇಲ್ಲದಿಲ್ಲ. ಇದೂ ಸಹ ವರ್ಣರಂಜಿತ ವದಂತಿಯಾಗಿ ಹರಡುತ್ತಿದೆ. ‘‘ಒಂದು ಪಕ್ಷದ ಕಟ್ಟಾಳು ಆಗಿದ್ದವರು ಈ ಚುನಾವಣೆಯಲ್ಲಿ ಕಡು ವಿರೋಧಿಯಾದ ಇನ್ನೊಂದು ಪಕ್ಷದ ಅಭ್ಯರ್ಥಿ ಆಗಲಿದ್ದಾರೆ’’ ಎಂಬ ಮಾತುಗಳಂತೂ ತೀವ್ರ ಕುತೂಹಲ ಕೆರಳಿಸಿದೆ.

      ಹಾಲಿ ಪಾಲಿಕೆ ಸದಸ್ಯರಲ್ಲೂ ಹಲವರಿಗೆ ಈ ಬಾರಿ ಹಾಲಿ ಇರುವ ವಾರ್ಡ್ನಿಂದಲೇ, ತಾವೇ ಸ್ಪರ್ಧಿಸಲು ಮೀಸಲಾತಿ ಕಾರಣದಿಂದ ಸಾ‘್ಯವಾಗುತ್ತಿಲ್ಲ. ಅವರಲ್ಲಿ ಕೆಲವರು ಬೇರೆ ವಾರ್ಡ್ಗೆ ವಲಸೆ ಹೋಗಲು ರೆಡಿ ಆಗಿದ್ದಾರೆ. ‘‘ಇದು ಪ್ರೆಸ್ಟೀಜ್ ವಿಷಯ. ಕೋಟಿ ಖರ್ಚಾದರೂ ಸರಿ, ಗೆಲ್ಲಲೇಬೇಕು’’ ಎಂದು ಖಾಸಗಿಯಾಗಿ ಹೇಳಿಕೊಳ್ಳುತ್ತಿದ್ದಾರೆಂಬುದು ಪಾಲಿಕೆಯ ತುಂಬ ಹರಿದಾಡುತ್ತಿದೆ.

ಬಾಡೂಟ ಆರಂಭ..!

      ಈ ಮಧ್ಯೆ ಹಾಲಿ ಸದಸ್ಯರುಗಳು ಮತ್ತು ಹೊಸ ಆಕಾಂಕ್ಷಿಗಳು ಪೈಪೋಟಿಯೆಂಬಂತೆ ಈಗಾಗಲೇ ತಮ್ಮ ಬೆಂಬಲಿಗರಿಗಾಗಿ ಅಲ್ಲಲ್ಲಿ ಬಾಡೂಟದ ವ್ಯವಸ್ಥೆಯನ್ನು ಆರಂಭಿಸಿದ್ದಾರೆಂಬ ಮಾತುಗಳೂ ಪಾಲಿಕೆಯ ಒಳಗೆ ಮತ್ತು ಹೊರಗೆ ರಸವತ್ತಾಗಿ ಹರಿದಾಡುತ್ತಿದೆ.

ನೇತಾರರ ವೈಷಮ್ಯ:

      ಇನ್ನು ಪಕ್ಷಗಳ ಕೆಲ ನೇತಾರರ ನಡುವಿನ ವೈಷಮ್ಯಕ್ಕೂ ಈ ಚುನಾವಣೆಯು ಅಖಾಡ ಆಗಲಿದ್ದು, ಇದೇ ಕಾರಣಕ್ಕೆ ಕೆಲವು ಸ್ಪರ್ಧಿಗಳು ಬಲಿಪಶುಗಳಾಗಲಿದ್ದಾರೆಂದೂ ಹೇಳಲಾಗುತ್ತಿದೆ.

 
‘‘ಒಂದು ವಾರ್ಡ್ಗೆ 30 ರಿಂದ 40 ಲಕ್ಷ ರೂಪಾಯಿ ಖರ್ಚಾಗುವುದಾದರೆ, ಇನ್ನು 35 ವಾರ್ಡ್ಗಳಿಂದ ಒಟ್ಟಾರೆ ಖರ್ಚು ಎಷ್ಟಾಗುತ್ತದೆ? ಒಬ್ಬ ಅಭ್ಯರ್ಥಿಗೆ ಇಷ್ಟೊಂದು ಖರ್ಚಾಗುವುದಾದರೆ, ಒಂದು ವಾರ್ಡ್ನಿಂದ ಮೂರ್ನಾದಲ್ಕು ಪ್ರಬಲ ಸ್ಪರ್ಧಿಗಳು ಪಕ್ಷ ಹಾಗೂ ಪಕ್ಷೇತರರಾಗಿ ಇದ್ದೇ ಇರುತ್ತಾರೆ. ಹಾಗಾದರೆ ಒಟ್ಟಾರೆ ಈ ಚುನಾವಣೆಗೆ ಎಷ್ಟು ಹಣ ಟ್ರಾನ್ಸಾಕ್ಷನ್ ಆಗಬಹುದು? ಇನ್ನು ಗೆದ್ದವರು ಇಷ್ಟೊಂದು ಹಣವನ್ನು ಬಡ್ಡಿ ಸಮೇತ ವಸೂಲು ಮಾಡಿಕೊಳ್ಳದೆ ಇರುವರೇ?’’ ಎಂಬಿತ್ಯಾದಿ ವಿಷಯಗಳು ಪ್ರಜ್ಞಾವಂತರಲ್ಲಿ ಗಾಬರಿ ಮೂಡಿಸಿದ್ದು, ‘ಭಾರಿ ಚರ್ಚೆಗೆ ಒಳಗಾಗುತ್ತಿದೆ.

LEAVE A REPLY

Please enter your comment!
Please enter your name here