ತುಮಕೂರು : ವಿಜೇತ ಅಭ್ಯರ್ಥಿಗಳ ನುಡಿಗಳು

0
19

ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ

ತುಮಕೂರು:

 ನಾನು ಯಾರನ್ನೂ ದೂಷಿಸುವುದಿಲ್ಲ, ಯಾರನ್ನೂ ದ್ವೇಷಿಸುವುದೂ ಇಲ್ಲ. ನಗರದ ಸಮಗ್ರ ಅಭಿವೃದ್ಧಿಗಾಗಿ ಗಮನ ಹರಿಸುತ್ತೇನೆ. ನನ್ನನ್ನು ಆಯ್ಕೆ ಮಾಡಿರುವ ನಗರದ ಮತದಾರರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುವತ್ತ ಮುನ್ನಡೆಯುತ್ತೇನೆ ಎಂದು ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ನೂತನ ಶಾಸಕ ಆಗಿರುವ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಶಾಸಕರಾಗಿ ಆಯ್ಕೆಯಾದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗ ನನ್ನ ಗೆಲುವು ನನ್ನೊಬ್ಬನ ಗೆಲುವಲ್ಲ. ಸಮಗ್ರ ಮತದಾರರ ಗೆಲುವು. ನನ್ನ ಗೆಲುವಿಗಾಗಿ ಕಾರ್ಯಕರ್ತರು, ಮುಖಂಡರು ಬಹಳಷ್ಟು ಶ್ರಮಿಸಿದ್ದಾರೆ. ಅವರೆಲ್ಲರಿಗೆ ನಾನು ಚಿರಋಣಿ. ಸ್ವ ಇಚ್ಛೆಯಿಂದ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ನನ್ನ ಪರ ಪ್ರಚಾರ ಮಾಡಿದ್ದಾರೆ. ನನ್ನ ಗೆಲುವಿಗೆ ಹೋರಾಡಿದ್ದಾರೆ. ಅವರ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ ಎಂದರು.

ತುಮಕೂರು ಜಿಲ್ಲೆಯಲ್ಲಿ 2013 ರಲ್ಲಿ ಒಂದು ಸ್ಥಾನವನ್ನು ಮಾತ್ರವೇ ಬಿಜೆಪಿ ಗಳಿಸಿತ್ತು. ಈ ಬಾರಿ 4 ಸ್ಥಾನಗಳನ್ನು ಗೆದ್ದುಕೊಂಡಿದ್ದೇವೆ. ತುಮಕೂರು ಗ್ರಾಮಾಂತರದಲ್ಲಿ ಕಡಿಮೆ ಮತಗಳಿಂದ ಸುರೇಶ್‍ಗೌಡ ಸೋನನ್ನನುಭವಿಸಬೇಕಾಯಿತು. ಇವರೂ ಗೆದ್ದಿದ್ದರೆ ಜಿಲ್ಲೆಯಲ್ಲಿ 5 ಸ್ಥಾನಗಳನ್ನು ನಮ್ಮದಾಗಿಸಿಕೊಳ್ಳುತ್ತಿದ್ದೆವು. ಗುಬ್ಬಿ, ಕುಣಿಗಲ್ ಸೇರಿದಂತೆ ಇನ್ನೂ ಹಲವು ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ನೀಡಿದ್ದಾರೆ. ಇದು ಬಿಜೆಪಿಯ ಬೆಳವಣಿಗೆಯನ್ನು ತೋರಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷರಾದ ಅಮಿತ್ ಷಾ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರುಗಳು ಮಾರ್ಗದರ್ಶನದಲ್ಲಿ ನಮ್ಮ ಬಿಜೆಪಿ ಪಕ್ಷ ಮುನ್ನಡೆದಿದೆ. ಗೆಲುವಿಗೆ ಕಾರಣಕರ್ತರಾಗಿರುವ ಎಲ್ಲರ ನಿರೀಕ್ಷೆಯಂತೆ ನಗರದಲ್ಲಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು.

 ಚಿ.ನಾ.ಹಳ್ಳಿ : ನೀರಿನ ಕಾಮಗಾರಿ ತ್ವರಿತಗೊಳಿಸುವೆ

ತುಮಕೂರು:

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಿನ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ನೂತನ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ನೀರನ್ನು ಪೆಮ್ಮಲದೇವನಹಳ್ಳಿ ಕೆರೆಯ ಮೂಲಕ 26 ಕೆರೆಗಳಿಗೆ ಬೋರನಕಣಿವೆವರೆಗೂ ಹರಿಸುವ ಕಾಮಗಾರಿಯನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಇದಲ್ಲದೆ, ಎತ್ತಿನಹೊಳೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದರು.

ಚಿಕ್ಕನಾಯಕನಹಳ್ಳಿಯಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿತ್ತು. ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಇದಕ್ಕೆ ಕಡಿವಾಣ ಹಾಕುತ್ತೇನೆ. ಅಲ್ಲಿನ ಜನತೆ ಭ್ರಷ್ಟಾಚಾರದ ಆಡಳಿತಕ್ಕೆ ಬೇಸತ್ತು ಹೋಗಿದ್ದರು. ಆಡಳಿತದಲ್ಲಿನ ವೈಫಲ್ಯ, ಭ್ರಷ್ಟಾಚಾರದ ಆಡಳಿತ ಇವೆಲ್ಲವೂ ನನ್ನ ಗೆಲುವಿಗೆ ಸಹಕಾರಿ ಯಾಯಿತು. ನಾನು ಕಛೇರಿಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಶ್ರಮ ವಹಿಸುತ್ತೇನೆ ಎಂದರು.

ಹಣದ ಆಟ ನಡೆಯುವುದಿಲ್ಲ ಎಂಬುದನ್ನು ಚಿಕ್ಕನಾಯಕನಹಳ್ಳಿ ಜನತೆ ತೋರಿಸಿಕೊಟ್ಟಿದ್ದಾರೆ. ಅಲ್ಲಿ ಕೆಲವು ಅಭ್ಯರ್ಥಿಗಳು ವಿಪರೀತ ಹಣ ಖರ್ಚು ಮಾಡಿದರೂ ಮತದಾರರು ನನ್ನ ಕೈ ಹಿಡಿದಿದ್ದಾರೆ. ನಾನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುತ್ತೇನೆ. ಮುಖ್ಯವಾಗಿ ದಾವಣಗೆರೆ, ಶ್ರೀರಂಗಪಟ್ಟಣ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನಿಸುತ್ತೇನೆ. ರೈತರ ವಿದ್ಯುತ್ ಪಂಪ್‍ಸೆಟ್‍ಗಳಿಗೆ ಸೋಲಾರ್ ಎನರ್ಜಿ ಅಳವಡಿಸುವ ಮೂಲಕ ವಿದ್ಯುತ್ ಕೊರತೆ ನೀಗಿಸಲು ಪ್ರಯತ್ನಿಸುತ್ತೇನೆ ಎಂದರು.

ಈ ನನ್ನ ಗೆಲುವು ನನ್ನದಲ್ಲ. ನನ್ನ ಕಾರ್ಯಕರ್ತರದ್ದು ಎಂದ ಅವರು, ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತೇನೆ ಎಂದರು.
ನಿಂತಿರುವ ಕಾಮಗಾರಿಗಳನ್ನು ಮುಂದುವರೆಸುವೆ

ತಿಪಟೂರು:

ತಿಪಟೂರು ಪಟ್ಟಣದಲ್ಲಿ ನನ್ನ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇವುಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇನ್ನು ಮುಂದೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ ಎಂದು ತಿಪಟೂರು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

ಚುನಾವಣಾ ಮತ ಎಣಿಕೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನ ಅಭಿವೃದ್ಧಿಯನ್ನು ಬಯಸುತ್ತಾರೆ. ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನತೆ ಗುರುತಿಸಿದ್ದಾರೆ. ಅದು ನನಗೆ ಶ್ರೀರಕ್ಷೆಯಾಗಿದೆ. ಜಾತಿ, ಹಣ ಇವೆಲ್ಲವನ್ನೂ ಮೀರಿ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ ಎಂದು ಅವರು ತಮ್ಮ ಸಂಸತವನ್ನು ಹಂಚಿಕೊಂಡರು.

ಮುಂದಿನ ದಿನಗಳಲ್ಲಿ ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ. ಜಾತಿಯೊಂದೇ ಗೆಲುವಿಗೆ ಕಾರಣ ಅಲ್ಲ ಎಂಬುದನ್ನು ಮತದಾರರು ತೋರಿಸಿಕೊಟ್ಟಿರುವುದರಿಂದ ಅವರ ಅಭಿಪ್ರಾಯಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆ. ನಾನು ಪಕ್ಷದ ಕಾರ್ಯಕರ್ತರ ಅಪೇಕ್ಷೆಗಳಿಗೆ ಸ್ಪಂದಿಸಿ ಇಡೀ ಕ್ಷೇತ್ರದಾದ್ಯಂತ ಸಂಚರಿಸಿ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಅದನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಶ್ರಮಿಸುವೆ

ತುರುವೇಕೆರೆ:

ಗ್ರಾಮೀಣಾಭಿವೃದ್ಧಿಗಾಗಿ ಹೆಚ್ಚು ಶ್ರಮಿಸುವುದಾಗಿ ತುರುವೇಕೆರೆ ನೂತನ ಶಾಸಕ ಮಸಾಲ ಜಯರಾಂ ತಿಳಿಸಿದರು.

ತಮ್ಮ ಆಯ್ಕೆ ಘೋಷಣೆಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಾನು ಸೋತಾಗಿನಿಂದ ಕ್ಷೇತ್ರದಲ್ಲಿ ನಿರಂತರ ಸಂಪರ್ಕ ಇರಿಸಿಕೊಂಡು ಜನರ ಒಲವನ್ನು ಗಳಿಸಿದ್ದೆ. ಕ್ಷೇತ್ರದ ಎಲ್ಲ ಕಡೆ ಸಂಚರಿಸಿ ಜನರ ಕಷ್ಟ ಸುಖಗಳಲ್ಲಿ ಭಾಗವಹಿಸುತ್ತಿದ್ದೆ. ಹೀಗಾಗಿ ಜನತೆ ನನ್ನನ್ನು ಕೈಹಿಡಿದಿದ್ದಾರೆ ಎಂದರು.
ಈ ಕ್ಷೇತ್ರದಲ್ಲಿ ಮತದಾರರು ಎಂ.ಟಿ.ಕೃಷ್ಣಪ್ಪ ಅವರ ಕೆಟ್ಟ ಆಡಳಿತದಿಂದ ಬೇಸತ್ತು ಹೋಗಿದ್ದರು. ಅವರು ಯಾವತ್ತೂ ಕ್ಷೇತ್ರದಾದ್ಯಂತ ಸಂಚರಿಸಿ ಎಲ್ಲ ಭಾಗಗಳ, ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ಹೀಗಾಗಿ ಅವರ ವೈಫಲ್ಯವೂ ನನ್ನ ಗೆಲುವಿಗೆ ಕಾರಣವಾಯಿತು. ಎಂ.ಟಿ.ಕೃಷ್ಣಪ್ಪ ಅವರದ್ದು ಕೆಟ್ಟ ನಾಲಿಗೆ. ಅವರ ಬಾಯಿಂದ ಬರುತ್ತಿದ್ದ ಕೆಟ್ಟ ಮಾತುಗಳಿಂದ ಜನ ರೋಸಿ ಹೋಗಿದ್ದರು. ಕೃಷ್ಣಪ್ಪ ಅವರದ್ದು ಎಡೆಮಟ್ಟೆ ಸಂಸ್ಕøತಿಯಾದರೆ, ನಮ್ಮದು ಮಲ್ಲಿಗೆ ಸಂಸ್ಕøತಿ ಎಂದರು.

ಚಿ.ನಾ.ಹಳ್ಳಿ : ನೀರಿನ ಕಾಮಗಾರಿ ತ್ವರಿತಗೊಳಿಸುವೆ

ಚಿಕ್ಕನಾಯಕನಹಳ್ಳಿ

LEAVE A REPLY

Please enter your comment!
Please enter your name here