ಥ್ರಿಲ್ಲರ್‍ನ ತ್ರೀಕೋನ ಪ್ರೇಮಕಥೆ ಆರೋಹಣ

0
11

ತುಮಕೂರು:

            ಸಾಂಸಾರಿಕ ಕಥಾ ಹಂದರವುಳ್ಳ ನಿಗೂಡ,ಕುತೂಹಲಕಾರಿ,ತ್ರಿಕೋನ ಪ್ರೇಮ ಕಥೆಯಾದ “ಆರೋಹಣ” ಚಲನಚಿತ್ರ ಬಿಡುಗಡೆಯಾದ 40 ಕೇಂದ್ರಗಳಲ್ಲಿ 2ನೇ ವಾರದತ್ತ ಮುನ್ನೆಡೆಯುತ್ತಿದ್ದು,ಪೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಶುಕ್ರವಾರದಿಂದ ಹೆಚ್ಚುವರಿಯಾಗಿ 25 ಕೇಂದ್ರಗಳಲ್ಲಿ ತೆರೆಕಾಣಲಿದೆ ಎಂದು ಆರೋಹಣ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಪುರುಷೋತ್ತಮ ತಿಳಿಸಿದ್ದಾರೆ.
            ಆರೋಹಣ ಚಲನಚಿತ್ರದ ತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಆರೋಹಣ ಸಿನಿಮಾ ಜನರಿಗೆ ಗತಕಾಲವನ್ನು ನೆನಪಿಸುತ್ತಿದೆ.ಅವಿಭಕ್ತ ಕುಟುಂಬದಲ್ಲಿ ಅಣ್ಣ,ತಮ್ಮ,ಅಕ್ಕ,ತಂಗಿ,ಅವರ ಮಕ್ಕಳು ಹೀಗೆ ಕೌಟುಂಬಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ.ಪ್ರೇಮಕವಿ ಎಂದೇ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಕಲ್ಯಾಣ ಗೀತರಚನೆ ಮಾಡಿದ್ದು, ಪಾಪ ಪಾಂಡುವಿನ ರವಿಶಂಕರ್‍ಗೌಡ,ಅನುರಾಧ ಭಟ್,ಹೇಮಂತ್, ಸಂತೋಷ ಹಿನ್ನೆಲೆ ಗಾಯಕರಾಗಿದ್ದು,ಚಲನಚಿತ್ರದ ಹಾಡುಗಳು ಜನರ ಮನಸ್ಸಿನಲ್ಲಿ ಉಳಿದಿವೆ.ಪ್ರಸ್ತುತ ರಾಜ್ಯದ 40 ಕೇಂದ್ರಗಳಲ್ಲಿ 2ನೇ ವಾರ ಪೂರೈಸುತ್ತಿದ್ದು,ಹೆಚ್ಚುವರಿಯಾಗಿ ತುಮಕೂರು ನಗರದ ಪ್ರಶಾಂತ್ ಅಥವಾ ಕೃಷ್ಣಾ ಟಾಕೀಸ್‍ನಲ್ಲಿ ಮುಂದಿನ ಶುಕ್ರವಾರದಿಂದ ತೆರೆಕಾಣಲಿದೆ.ಬಿಡುಗಡೆಯಾದ 40 ಕೇಂದ್ರಗಳಲ್ಲಿ ಬಿ ಮತ್ತು ಸಿ ಕೇಂದ್ರಗಳ ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪುರುಷೋತ್ತಮ ತಿಳಿಸಿದರು.
           ಆರೋಹಣ ಚಲನಚಿತ್ರದ ನಾಯಕರಲ್ಲಿ ಒಬ್ಬರಾದ ರೋಹಿತ್‍ಶೆಟ್ಟಿ ಮಾತನಾಡಿ,ನಾನು ಮೂಲತಃ ಡಾ.ರಾಜಕುಮಾರ್ ಅವರು ಹುಟ್ಟಿದ ಗಾಜನೂರಿನವ.ಕಳೆದ 10 ವರ್ಷಗಳಿಂದ ಸಿನಿಮಾ ರಂಗದಲ್ಲಿ ಪ್ಯಾಷನ್ ಡಿಸೈನರ್ ಆಗಿ,ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ.ಇದು ನನ್ನ ಎರಡನೇ ಸಿನಿಮಾ, ಇದಕ್ಕಿಂತಲೂ ಮೊದಲು ಗಾಯಿತ್ರಿ ಎಂಬ ಚಲನಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದು, 50 ದಿನಗಳ ಪ್ರದರ್ಶನ ಕಂಡಿತ್ತು. ಆರೋಹಣ ಸಿನಿಮಾ ಸಹ 50 ದಿನ ಪೂರೈಸುವ ನಿರೀಕ್ಷೆಯಿದೆ ಎಂದರು.
ಚಲನಚಿತ್ರ ಸೆನ್ಸಾರ್ ಮಂಡಳಿ ಇಡೀ ಕುಟುಂಬವೇ ಒಟ್ಟಿಗೆ ಕುಳಿತು ನೋಡಬಹುದಾಗಿದ್ದರೂ ನಮ್ಮ ಸಿನಿಮಾಕ್ಕೆ ಎ ಸರ್ಟಿಪಿಕೇಟ್ ನೀಡಿದೆ.ಇದನ್ನು ಖಂಡಿಸಿ ಮತ್ತೊಮ್ಮೆ ಸೆನ್ಸಾರ್ ಮಾಡಿಸಿದಾಗಲು ಎ.ಸರ್ಟಿಪಿಕೇಟ್ ನೀಡಿದ್ದು ಬೇಸರ ತರಿಸಿದೆ.ಇಡೀ ಸಿನಿಮಾದಲ್ಲಿ ಎಲ್ಲಿಯೂ ಅಶ್ಲೀಲ ಸಂಭಾಷಣೆ ಇಲ್ಲ ಎಂದರು.
ಈ ವೇಳೆ ಆರೋಹಣ ಚಲನಚಿತ್ರದ ಮತ್ತೋರ್ವ ನಾಯಕ ಹಾಗೂ ನಿರ್ಮಾಪಕ ಸುಶೀಲಕುಮಾರ್ ಹಾಗೂ ತಂತ್ರಜ್ಞರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here