ದಂಡಿನ ಮಾರಮ್ಮ ಹೊರತು ಪಡಿಸಿ ಮಿಕ್ಕ ದೇವಾಲಯಗಳು ಬಂದ್..!

0
30

ಮಧುಗಿರಿ:

      ರಕ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ದೇವಾಲಯಗಳ ಬಾಗಿಲುಗಳಿಗೆ ಬೀಗ ಹಾಕಲಾಗಿದ್ದರಿಂದ ಭಕ್ತರಿಗೆ ಶುಕ್ರವಾರ ಮಧ್ಯಾಹ್ನದಿಂದ ದೇವರ ದರ್ಶನ ಇಲ್ಲವಾಗಿತ್ತು.

      ಶುಕ್ರವಾರ ಮಧ್ಯೆ ರಾತ್ರಿಯಿಂದ ಶನಿವಾರ ನಸುಕಿನ ಜಾವದವರೆವಿಗೂ ಚಂದ್ರ ಗ್ರಹಣ ಇರುವುದರಿಂದ ತಾಲ್ಲೂಕಿನ ಪ್ರಮುಖ ದೇವಾಲಯಗಳಾದ ಶ್ರೀ ವೆಂಕಟರಮಣ, ಮಲ್ಲೇಶ್ವರ, ಕಲ್ಯಾಣ ಆಂಜನೇಯ, ವೀರಾಂಜನೇಯ ಹಾಗೂ ಮತ್ತಿತರರ ದೇವಾಲಯಗಳಿಗೆ ಶುಕ್ರವಾರ ಮಧ್ಯಾಹ್ನ ದೇವಾಲಯದ ದ್ವಾರಗಳಿಗೆ ಬೀಗ ಹಾಕಲಾಗಿತ್ತು.

      ಭಕಾದಿಗಳು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರ ನಸುಕಿನ ಜಾವದಿಂದಲೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಾಲಯದ ಮುಂದೆ ಕೈ ಮುಗಿದು, ಕರ್ಪೂರ ದೀಪ ಹಚ್ಚಿ ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

      ವಿಶೇಷವೆಂದರೆ ಆಷಾಢ ಶುಕ್ರವಾರವಾದ್ದರಿಂದ ಮಧುಗಿರಿ ಗ್ರಾಮದ ಶಕ್ತಿ ದೇವತೆ ಶ್ರೀ ದಂಡಿನ ಮಾರಮ್ಮನ ದೇವಸ್ಥಾನವು ಎಂದಿನಂತೆ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಗೆ ನಿಂಬೆ ಮತ್ತು ಕರ್ಪೂರದ ದೀಪ ಬೆಳಗಿಸಿ ದೇವಿಯ ಕೃಪೆಗೆ ಪಾತ್ರರಾದರು.

      ದೇವಿಯ ಆರ್ಚಕರಾದ ಮುರಳಿಆಚಾರ್ ಮಾತನಾಡಿ, ಇಂತಹ ವಿಶೇಷ ದಿನಗಳಲ್ಲಿ ಕೆಲವು ನಿಯಮಗಳಿಂದ ಶಕ್ತಿ ದೇವರುಗಳಿಗೆ ಪೂಜೆ ಸಲ್ಲಿಸಿದಾಗ ಹೆಚ್ಚಿನ ಶಕ್ತಿ ದೇವಿಗೆ ಸಿಗುವ ಜತೆಗೆ ಪೂಜೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಹೆಚ್ಚಿನ ಆಶೀರ್ವಾದ ದೊರಕಲಿದೆ ಮತ್ತು ಶನಿವಾರ ದೇವಸ್ಥಾನದ ಶುಚಿತ್ವದ ನಂತರ ವಿಶೇಷ ಪೂಜೆ ಸಲ್ಲಿಸಲಾಗುವುದು. ಆದರೆ ಭಕ್ತಾದಿಗಳಿಗೆ ಎಂದಿನಂತೆ ದೇವರ ದರ್ಶನವಿರುವುದಿಲ್ಲ.

LEAVE A REPLY

Please enter your comment!
Please enter your name here