ದಬ್ಬಗುಂಟೆಯಲ್ಲಿ ಸರಣಿ ಕಳ್ಳತನ

0
23

ಹುಳಿಯಾರು:

 ಹುಳಿಯಾರು ಹೋಬಳಿ ದಸೂಡಿ ಗ್ರಾಪಂ ವ್ಯಾಪ್ತಿಯ ದಬ್ಬಗುಂಟೆಯಲ್ಲಿ ಶನಿವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು ಕಳ್ಳರು ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ.ಗ್ರಾಮದ ರಶೀದ್ ಸಾಬ್, ಶಾರದಮ್ಮ, ಕರಿಯಮ್ಮ ಅವರ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಕಳ್ಳರು ಮನೆ ಬಾಗಿಲು ಒಡೆದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ. ಇನ್ನು ಮುದ್ದರಂಗಪ್ಪ ಹಾಗೂ ಕವಿತಾ ಅವರ ಮನೆಗೆ ನುಗ್ಗುವ ವಿಫಲ ಪ್ರಯತ್ನವನ್ನು ಕಳ್ಳರು ಮಾಡಿದ್ದಾರೆ.

   ರಶೀದ್ ಸಾಬ್ ಅವರ ಮನೆಗೆ ನುಗ್ಗಿದ ಕಳ್ಳರು ಮನೆಗೆ ಬೀರುವಿನ ಬೀಗ ಹೊಡೆದು ಎರಡು ಜೊತೆ ಕಿವಿ ಸೆಟ್, ಒಂದು ಕಾಸಿನ ಸರ, ಒಂದು ನೆಕ್ಲೇಸ್, ಕಾಲು ಚೈನ್, 5 ಉಂಗುರಗಳನ್ನು ದೋಚಿ ಪರಾರಿಯಾಗಿದ್ದಾರೆ. ಶಾರದಮ್ಮ ಅವರ ಮನೆಯಲ್ಲಿ 50 ಸಾವಿರ ರೂ. ನಗದು, 2 ಜೊತೆ ಓಲೆ ಕದ್ದಿದ್ದಾರೆ.

    ಕರಿಯಮ್ಮ ಅವರ ಮನೆಯ ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು ಮನೆಯಲ್ಲಿನ ಪಾತ್ರೆ, ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆದರೆ ಮನೆಯವರೆಲ್ಲರೂ ಬೆಂಗಳೂರಿಗೆ ತೆರಳಿರುವುದರಿಂದ ಅವರು ಬಂದ ನಂತರವಷ್ಟೆ ಕಳವು ಆಗಿರುವ ವಸ್ತುಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.
   ಇನ್ನು ಮುದ್ದರಂಗಣ್ಣ ಮತ್ತು ಕವಿತಾ ಅವರುಗಳ ಮನೆಗೆ ಪ್ರತ್ಯೇಕ ಎರಡು ತಂಡ ನುಗ್ಗುವ ವಿಫಲ ಪ್ರಯತ್ನವನ್ನು ಮಾಡಿದ್ದು ಈ ಎರಡೂ ಮನೆಯವರು ಎಚ್ಚರಗೊಂಡು ಗಲಾಟೆ ಮಾಡಲಾಗಿ ಕಾರಿನಲ್ಲಿ ಪರಾರಿಯಾಗಿದ್ದಾರೆ. ಒಟ್ಟು 6 ಮಂದಿ ಕಳ್ಳತನಕ್ಕೆ ಬಂದಿದ್ದರೆಂದು ಹೇಳಲಾಗಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ.

LEAVE A REPLY

Please enter your comment!
Please enter your name here