ದಲಿತರು ದೇಶದ ಆಸ್ತಿ; ಕಾಂಗ್ರೆಸ್‍ನವರಿಗೆ ದತ್ತು.

0
12

ಬೆಂಗಳೂರು:

   ದಲಿತರು ದೇಶದ ಆಸ್ತಿ ಆದರೆ, ಕಾಂಗ್ರೆಸ್ ಪಕ್ಷವು ದಲಿತರನ್ನು ದತ್ತು ತೆಗೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದ ಅವರು, ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ, ಹಳೇ ಸಾಲ ಚುಕ್ತಾ ಆಗದೆ, ಹೊಸ ಸಾಲ ಕೊಡೋದಿಕ್ಕೆ ಹೇಗೆ ಸಾಧ್ಯ ಎಂದು ಬ್ಯಾಂಕ್‍ಗಳು ಹೇಳುತ್ತಿವೆ.

   ಈ ಸಾಲ ಮನ್ನಾ ಅನ್ನೋದು ಇನ್ನೂ ಗೊಂದಲದಲ್ಲಿಯೇ ಇದೆ ಎಂದು ಸರ್ಕಾರದ ಕ್ರಮಕ್ಕೆ ಕಿಡಿಕಾರಿದರು.ರಾಜ್ಯದಲ್ಲಿ ಭ್ರಷ್ಠಾಚಾರ ಎಂಬುದು ತಾಂಡವವಾಡುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here