ದಲಿತ ಪದ ಬಳಕೆಯಾಗುವಂತೆ ಆಗ್ರಹಿಸಿ ಡಿಎಸ್4 ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಮನವಿ

0
22

ಹಾವೇರಿ :

              ಪರಿಶಿಷ್ಠ ಜಾತಿ / ಪರಿಶಿಷ್ಟ ಪಂಗಡಗಳು ಒಟ್ಟಾರೆ ಸಮುದಾಯಕ್ಕೆ ದಲಿತ ಪದ ಬಳಕೆಯಾಗುವಂತೆ ಆಗ್ರಹಿಸಿ ಡಿಎಸ್4 ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಾದ ಡಾ|| ಎಂ ವ್ಹಿ ವೆಂಕಟೇಶ್‍ರವರ ಮುಖಾಂತರ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದರು. ಬಾಂಬೆ ಹೈಕೋರ್ಟ ಸೂಚನೆಯ ಮೇರೆಗೆ ದಲಿತ ಪದ ಬಳಸದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಧ್ಯಮಗಳಿಗೆ ಸೂಚಿಸಿರುವುದು ಖಂಡಿಸಿ.ಈ ಪದವನ್ನುತೆಗೆಯುವುದರಿಂದ ದಲಿತರಲ್ಲಿ ಬರುವ ಸಾವಿರಾರು ಜಾತಿ ಉಪಜಾತಿಗಳಿಗೆ ಗೊಂದಲವಾಗುತ್ತದೆ.ಅಲ್ಲದೇ 1956 ರಿಂದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳಲ್ಲಿ ಬರುವ ಜಾತಿಗಳನ್ನು ದಲಿತಶೋಷಿತ ಸಮುದಾಯಗಳೆಲ್ಲ ದಲಿತ ಎಂಬ ಪದ ಬಳಕೆಯಿಂದ ದೇಶ 20 ಕೋಟಿಜನರುಒಪ್ಪಿಕೊಂಡಿದ್ದಾರೆ.

               ಅಲ್ಲದೇ ಬಾಬಾ ಸಾಹೇಬ ಅಂಬೇಡ್ಕರ ಸೇರಿದಂತೆದಾದಾಸಾಹೇಬ ಕಾನ್ಸಿರಾಂ, ಕೆ.ಆರ್.ನಾರಾಯಣ, ಬಂಗಾರು ಲಕ್ಷ್ಮಣ, ಕೆ.ಜಿ. ಬಾಲಕೃಷ್ಣ, ನಿವೃತ್ತ ಸುಪ್ರಿಕೋರ್ಟ ನ್ಯಾಯಮೂರ್ತಿ ರಾಷ್ಟ್ರಪತಿಗಳು, ಆದಿಯಾಗಿ ರಾಷ್ಟ್ರದ ಮಹಾನ್ ನಾಯಕರುಗಳು ದಲಿತ ಎಂಬ ಪದ ಬಳಕೆ ಪರವಾಗಿ ದೇಶಾಧ್ಯಾಂತ ಅಂದೋಲನ ಮಾಡುವ ಮೂಲಕ ನವ ಪೀಳಿಗೆಗಳಿಗೆ ಮಾದರಿಯಾಗಿಸುವುದು.ದೇಶದಲ್ಲಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದವರು ದಲಿತ ಪದವನ್ನು ಉಪಯೋಗಿಸಿಕೊಳ್ಳುತ್ತಾ ಬರುತ್ತಿದ್ದಾರೆ.ದೀಡಿರನೇ ದಲಿತ ಪದವನ್ನುತೆಗೆಯಬೇಕೆಂದು ಷಡ್ಯಂತ್ರ ರೂಪಿಸುತ್ತಿರುವುದು ಸಮಗ್ರ ದಲಿತರಒಗ್ಗಟ್ಟನ್ನುಒಡೆಯುವ ಹುನ್ನಾರವಾಗಿದೆ.ದಲಿತ ಪದವು ದೇಶ ವ್ಯಾಪ್ತಿಗೆ ಶೋಷಿತರಲ್ಲಿ ನರನಾಡಿಗಳೆಲ್ಲಾ ಭಾವನಾತ್ಮಕ ಬೆಳೆದಿದ್ದ ಮತ್ತುಎರಡು ಮೂರು ದಶಕಗಳ ಹೋರಾಟದ ಫಲವಾಗಿ ದಲಿತ ಪದರಾಜಕೀಯ, ಅರ್ಥಿಕ, ಸಾಮಾಜಿಕ, ಶೈಕ್ಷಣಿಕಕ್ಷೇತ್ರದಲ್ಲಿದಲಿತ ಪದ ಪ್ರಚಾರಕ್ಕೆ ಬಂದಿದೆ ಮತ್ತುಅತ್ಯಂತಗೌರವದಿಂದ ಈ ತಳಸಮುದಾಯಗಳ ಗ್ರಾಮೀಣ ಮತ್ತು ನಗರಪ್ರದೇಶಗಳು ವಾಸಿಸುತ್ತಿದ್ದಾರೆ. ದಲಿತ ಪದವು ಅವಮಾನಕರವಾಗಿರುವುದಿಲ್ಲ.

            ಬದಲಿಗೆ ಒಗ್ಗಟ್ಟು ಪ್ರದರ್ಶಿಸುವ ಪದವಾಗಿರುತ್ತದೆ. ದಯಮಾಡಿ ಕೇಂದ್ರ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿರುವ ನಿರ್ದೇಶನವನ್ನು ಕೂಡಲೇ ಹಿಂಪಡೆಯಬೇಕು.ದೇಶಾಧ್ಯಾಂತ ಮತದಾನ ಮಾಡಿರುವ ದಲಿತ ಜನಾಂಗದವರು ಆಯಾ ಭಾಗ ಸಂಸದ ಸದಸ್ಯರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ನೀಡುವಂತೆ ಮುಂದಿನ ಹೋರಾಟ ರೂಪರೇಷಗಳನ್ನು ಡಿಎಸ್4 ಹಮ್ಮಿಕೊಳ್ಳಲಿದೆ ಎಂದು ಡಿಎಸ್4 ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ಎಮ್. ಗಾಳೆಮ್ಮನವರ ಆಗ್ರಹಿಸಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿಎಸ್4 ಸಂಘಟನೆಯ ಮುಖಂಡರಾದ ವಿರುಪಾಕ್ಷಪ್ಪ ಹರಿಜನ, ಸತೀಶ ಸುರೇಶ ಚಲವಾದಿ, ಲೋಹಿತಪ್ಪ , ಮಲ್ಲಪ್ಪ ಪೂಜಾರ, ಎಂ. ಪಿ. ಕರ್ಜಗಿ, ಅಶಫಾಕ್ ನದಾಫ ಹಾಗೂ ಫಕ್ಕೀರಪ್ಪ ಕಾಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here