ದಸರ ವೈಭವ

0
49

 

  ಹಿಂದೆ ಆರಂಭವಾಯಿತು ದಸರ ಹಬ್ಬ
ವಿಜಯನಗರ ಅರಸರಿಂದ
ಅಂದು ಪ್ರಾರಂಭವಾಯಿತು ದಸರ ಹಬ್ಬ
ಹಂಪಿಯ ಮಹಾನವಮಿ ದಿಬ್ಬದಿಂದ 
ಇಂದಿಗು ಮೈಸೂರು ದಸರ ಹಬ್ಬ
ಮೈಸೂರು ರಾಜರ ಹೆಮ್ಮೆಯ ನಾಡ ಹಬ್ಬ

ಬಂತು, ಬಂತು ನಾಡ ಹಬ್ಬ
ನಮ್ಮೂರ ದಸರ ಊರ ಹಬ್ಬ
ದೇವರುಗಳ ಮೆರವಣಿಗೆ ಬೀದಿ ತುಂಬ
ವೇಷ ಭೂಷಣಗಳ ಕುಣಿತ ಊರ ತುಂಬ
ನೋಡಬೇಕು ಹಳ್ಳಿಯ ದಸರ ಹಬ್ಬ ಕಣ್ಣತುಂಬ

ದೀಪಾಲಂಕೃತ ಮೈಸೂರು ಅರಮನೆ ನೋಡಲು ಅಂದ
ಬಣ್ಣ,ಬಣ್ಣದ ದೀಪಾಲಂಕಾರದ ಊರು ಏನು ಚಂದ
ದೇಶ,ವಿದೇಶಿಯರ ಜನ ಪ್ರಳಯ ಊರ ತುಂಬ ಮುದದಿಂದ
ಹಗಲು,ರಾತ್ರಿಗಳು ಸಾಂಸ್ಕತಿಯ ರಸದೌತಣ ದಿಗ್ಗಜರಿಂದ
ಅಲಂಕೃತ ನವ ವದುವೆನಂತೆ ಕಣ್ಮನ ತಣಿಸುವ
ಮೈಸೂರು ಸ್ವರ್ಗದಂತೆ

ಆನೆಯ ಮೇಲೊಂದು ಚಿನ್ನದ ಅಂಬಾರಿ
ಆಗ ಅದರಲ್ಲಿ ಮಹಾರಾಜರು ಕುಳಿತು ಸವಾರಿ
ಈಗ ನಾಡ ದೇವಿಯ ಚಿತ್ರಪಠವೇ ಸರಿ
ಸಾಗುತ್ತಿವೆ ಸಂಸ್ಕತಿಗಳ ಸ್ತಬ್ದ ಚಿತ್ರಗಳ ದಾರಿ
ಗತ ವೈಭವಗಳ ನೆನಪಿಸುವ ವೇಷ ಭೂಷಣಗಳು ಬಾರಿ
ಲಕ್ಷಾಂತರ ಜನರ ನಡುವೆ ಸಾಗುತ್ತಿದೆ ಜಂಬೂ ಸವಾರಿ
ಬಂದು ಸೇರಿ ಅಂತ್ಯವಾಯಿತು ಬನ್ನಿ ಮಂಟಪಕ್ಕೆ ಸವಾರಿ

ಬನ್ನಿಮಂಟಪವಿಂದು ಹೊನಲು ಬೆಳಕಿನ ಮೈದಾನ
ವಿವಿದ ಕಸರತ್ತುಗಳ ಚಮತ್ಕಾರ ನೋಡಬೇಕು ಈದಿನ
ಲೇಸರ್ ಲೈಟಗಳ ಬಾನಂಗಳದ ಬೆಳಕಿನಾಟದ ಸುದಿನ
ಸಿಡಿ ಮದ್ದುಗಳ ಅರ್ಭಟ ಆಕಾಶದಲ್ಲಿ ಬಣ್ಣ ಬಣ್ಣಗಳ
ಸುಂದರ ನೋಟದೊಂದಿಗೆ…..ಶುಭ ರಾತ್ರಿಯ ನಮನ.
ಇದೇ.. ದಸರ ಹಬ್ಬದ ವೈಭವ………

ಬರೆದವರು : ಕೆ.ವಿ.ರಾಜಣ್ಣ,
ಸರಸ್ವತಿಪುರಂ, ತುಮಕೂರು

LEAVE A REPLY

Please enter your comment!
Please enter your name here