‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ನಡೆಯಿತೊಂದು ಭೀಕರ ಕೊಲೆ!!!

0
42

ಇಂಧೋರ್‌:

      ದೃಶ್ಯಂ ಸಿನಿಮಾದಿಂದ ಪ್ರೇರಣೆ ಪಡೆದು 2 ವರ್ಷಗಳ 22 ರ ಹರೆಯದ ಯುವತಿಯನ್ನು ಕೊಲೆಗೈದ ಆರೋಪದಲ್ಲಿ ಬಿಜೆಪಿ ನಾಯಕ, ಆತನ ಮೂವರು ಪುತ್ರರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

     ಬಿಜೆಪಿ ಮುಖಂಡ ಜಗದೀಶ್‌ ಕರೋತಿಯ ಅಲಿಯಾಸ್‌ ಕಲ್ಲು ಪಹಲ್ವಾನ್‌(65), ಆತನ ಮಕ್ಕಳಾದ ಅಜಯ್‌(36), ವಿಜಯ್‌(38), ವಿನಯ್‌(31) ಹಾಗೂ ಅವರ ಸಹಚರ ನೀಲೇಶ್‌ ಕಶ್ಯಪ್‌(28)–ಈ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ಇಂದೋರ್‌ ಡಿಐಜಿ ಹರಿನಾರಾಯಣಚಾರಿ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣ:

      ಬಾನ್‌ಗಂಗಾ ಪ್ರದೇಶದ 22 ರ ಹರೆಯದ ಟ್ವಿಂಕಲ್‌ ಡಾಗ್ರೆ ಎಂಬಾಕೆ ಜಗದೀಶ್‌ ಕರೋಟಿಯಾನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದೇ ವಿಚಾರದಲ್ಲಿ ಆಕೆ ಕರೋಟಿಯೂನೊಂದಿಗೆ ವಾಸಿಸಲು  ಹಠ ಹಿಡಿದಿದ್ದಳು. ಇದಕ್ಕೆ ಮನೆಯಲ್ಲಿ ವಿರೋಧ ಉಂಟಾದಾಗ ಕರೋಟಿಯಾ ಮತ್ತು ಆತನ ಪುತ್ರರು ಟ್ವಿಂಕಲ್‌ ಡಾಗ್ರೆಯನ್ನು ಅಕ್ಟೋಬರ್‌ 12,2016 ರಂದು ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆಯ ದೇಹವನ್ನು ಸುಟ್ಟು ಹಾಕಿದ್ದಾರೆ. 

      ಕೊಲೆಗೆ ಯೋಜನೆ ರೂಪಿಸುವುದಕ್ಕೂ ಮುನ್ನ 2015ರಲ್ಲಿ ತೆರೆಕಂಡ ಅಜಯ್‌ ದೇವಗನ್‌ ಅಭಿನಯದ ‘ದೃಶ್ಯಂ’ ಚಿತ್ರವನ್ನು ಆರೋಪಿಗಳು ನೋಡಿದ್ದಾರೆ. ಅದೇ ಚಿತ್ರದ ದೃಶ್ಯಗಳಿಂದ ಪ್ರೇರಣೆ ಪಡೆದು ನಾಯಿಯ ದೇಹವನ್ನು ಒಂದು ಸ್ಥಳದಲ್ಲಿ ಹೂತು ಹಾಕಿದ್ದಾರೆ ಹಾಗೂ ಮಾನವ ದೇಹವನ್ನು ಯಾರೋ ಗುಂಡಿಯಲ್ಲಿ ಹೂತಿದ್ದಾರೆ ಎಂದು ಅವರೇ ಸುದ್ದಿ ಹಬ್ಬಿಸಿದ್ದರು. ಪೊಲೀಸರು ಗುಂಡಿ ತೋಡಿದಾಗ ನಾಯಿಯ ದೇಹದ ಕೊಳೆತ ಭಾಗ ಕಂಡು ಬಂದಿತ್ತು. ಇದು ಪೊಲೀಸರ ತನಿಖೆಯ ಹಾದಿ ತಪ್ಪಿಸಿತ್ತು.’ ಎಂದು ವಿವರಿಸಿದ್ದಾರೆ. 

      ಪ್ರಕರಣದ ತನಿಖೆಗಿಳಿದ ಪೊಲೀಸರು ಕಟೋರಿಯಾ ಮತ್ತು ಮೂವರು ಪುತ್ರರಿಗೆ ಬ್ರೇನ್‌ ಇಲೆಕ್ಟ್ರಿಕಲ್‌ ಆಸ್ಕಿಲೇಶನ್‌ ಸಿಗ್ನೇಚರ್‌ ಪರೀಕ್ಷೆಯನ್ನೂ ನಡೆಸಿದ್ದಾರೆ. ಇಂಧೋರ್‌ನಲ್ಲಿ ಕ್ರಿಮಿನಲ್‌ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಈ ಪರೀಕ್ಷೆ ಮಾಡಲಾಗಿದೆ.

      ತನಿಖೆಯ ವೇಳೆ ಮೃತದೇಹ ಸುಟ್ಟಿದ್ದ ಜಾಗದಲ್ಲಿ ಟ್ವಿಂಕಲ್ ಗೆ ಸೇರಿದ್ದ ಬ್ರೇಸ್‍ಲೈಟ್ ಮತ್ತು ಇತರ ಆಭರಣಗಳು ಸಿಕ್ಕಿದೆ. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ, ಮೊದಲು ನಾಯಿಯ ಮೃತದೇಹ ಸುಡಲಾಗಿದೆ ಎಂಬುದು ಗೊತ್ತಾಗಿದೆ.  ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿದ್ದಾರೆ. 

       ಕಟೋರಿಯಾ, ಮಾಜಿ ಬಿಜೆಪಿ ಶಾಸಕರ ಮನವಿ ಮೇಲೆ ಪೊಲೀಸ್‌ ಬೆಂಬಲ ಪಡೆದಿದ್ದಾರೆ ಎಂದು ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

 

LEAVE A REPLY

Please enter your comment!
Please enter your name here