ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳತನ

0
33

ಬೆಂಗಳೂರು:

      ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪುತ್ರನ ಮನೆ ದರೋಡೆ ಮಾಡಿ ಕಳ್ಳರು ಲ್ಯಾಪ್‍ಟಾಪ್ ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದೊಯ್ದಿದ್ದಾರೆ.

      ಸದಾಶಿವನಗರದಲ್ಲಿ ವಾಸವಿರುವ ಆರ್.ವಿ.ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ, ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮನೆಯ ಓದುವ ಕೊಠಡಿಯಲ್ಲಿಟ್ಟಿದ್ದ ಲ್ಯಾಪ್‍ಟಾಪ್, ಸುಮಾರು ಅರ್ಧ ಕೆಜಿ ತೂಕದ ದೇವರ ಬೆಳ್ಳಿಯ ವಿಗ್ರಹ ಹಾಗೂ 2 ಮೊಬೈಲ್ ಫೋನ್‍ ಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.

      ಮನೆಯಲ್ಲಿ  3 ನಾಯಿಗಳನ್ನು ಸಾಕಲಾಗಿದ್ದು, ಭದ್ರತೆಗಾಗಿ ಓರ್ವ ಸೆಕ್ಯುರಿಟಿ ಗಾರ್ಡ್ ಕೂಡ ಇದ್ದಾರೆ. ಆದರೆ ಹಿಂಭಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಿರಿದಾದ ಜಾಗವಿದ್ದ ಕಾರಣ ಕಳ್ಳರ ಪ್ರವೇಶದ ಸುಳಿವು ಗೊತ್ತಾಗಿಲ್ಲ. ಆದಾಗ್ಯೂ ಮನೆಯಲ್ಲಿ ಎಲ್ಲರೂ ಇರುವಾಗಲೇ ಕಳ್ಳತನವಾಗಿರುವುದು ವಿಪರ್ಯಾಸವಾಗಿದೆ. ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here