ನಂಬಿ ನಾರಾಯಣ್ ಬಿಡುಗಡೆ

0
67

ನವದೆಹಲಿ:

             ಇಸ್ರೋ ವಿಜ್ಞಾನಿಯ ಗೂಢಚಾರಿಕೆ ಪ್ರಕರಣದ ತೀರ್ಪು ಹೊರಬಂದಿದೆ. ಸುಪ್ರೀಂ ಕೋರ್ಟ್ ಸುಳ್ಳು ಆರೋಪದಡಿಯಲ್ಲಿ  ಇಸ್ರೋದ ವಿಜ್ಞಾನಿಯಾಗಿದ್ದ  ನಂಬಿ ನಾರಾಯಣ್ ಅವರಿಗೆ ರೂ. 50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದೆ. ಮತ್ತು ಅವರ ಬಂಧನ “ಅನಗತ್ಯ” ಆಗಿತ್ತು ಎಂದು ಅಭಿಪ್ರಾಯಪಟ್ಟಿದೆ.ಇಸ್ರೋ ಗೂಢಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರೆಂದು ವಿಜ್ಞಾನಿ  ನಂಬಿ ನಾರಾಯಣ್ ವಿರುದ್ಧ ಕಥೆ ಕಟ್ಟಿದ್ದ ಕೇರಳ ಪೋಲೀಸರು  ಅವರನ್ನು 24 ವರ್ಷಗಳ ಕಾಲ ಬಂಧಿಸಿದ್ದರು.

              ನಂಬಿ ನಾರಾಯಣ್ ಪೋಲೀಸರಿಂದ “ಅನಗತ್ಯ ಬಂಧನಕ್ಕೊಳಗಾಗಿ ಕಿರುಕುಳ ಅನುಭವಿಸಿದ್ದಾರೆ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ಕೆ.ಜೈನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಂಡಿದ್ದಿತು.ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ,  ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಈ ಮುನ್ನ ಜುಲೈ ನಲ್ಲಿ ಪ್ರಕರಣದ ವಿಚಾರಣೆ ನಡೆಸಿತ್ತು.ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಿಬಿಐ ಸಿದ್ದವಿದೆ ಎಂದು ತನಿಖಾ ಸಂಸ್ಥೆ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು.ಇಸ್ರೋ ವಿಜ್ಞಾನಿ, ನಾರಾಯಣ್ ಅವರನ್ನು ಬೇಹುಗಾರಿಕೆ ಆರೋಪದಡಿ  ನವೆಂಬರ್ 30, 1994 ರಂದು ಬಂಧಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here