ನಕಲಿ ಬಂಗಾರ ನೀಡಿ ವಂಚನೆ ಪ್ರಕರಣ: ಬಂಧನ

0
37

ದಾವಣಗೆರೆ:

ಇತ್ತೀಚೆಗೆ ನಕಲಿ ಬಂಗಾರ ನೀಡಿ ಸಾರ್ವಜನಿಕರಿಂದ ಹಣಕಿತ್ತುಕೊಂಡು, ವಂಚಿಸುತ್ತಿದ್ದ ವಂಚಕರ ತಂಡವನ್ನು ಭೇದಿಸಿರುವ ಹರಿಹರ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.
ಆಂದ್ರಪ್ರದೇಶದ ಅನಂತಪುರ ಉರವಕೊಂಡ ತಾಲೂಕಿನ ಮಾವಿನಮರದಹಳ್ಳಿ ಗ್ರಾಮದ ನಿವಾಸಿ ರಮೇಶ ಎಸ್ (30 ವರ್ಷ) ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ.ಗಜಾಪುರ ಗ್ರಾಮದ ಸಂತೋಷ (27ವರ್ಷ) ಬಂಧಿತರಾಗಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ಬಂಗಾರ ನೀಡಿ ವಂಚಿಸುಚ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಎಸ್ಪಿ ಚೇತನ್ ಮಾರ್ಗದರ್ಶನದಲ್ಲಿ ರಚಿಸಿದ್ದ ಪೊಲೀಸರ ತಂಡ ಹರಿಹರ ಸಮೀಪದ ಅಮರಾವತಿ ಬಳಿಯಲ್ಲಿರುವ ಸೆಂಟ್ ಅಲೋಷಿಯಸ್ ಶಾಲೆ ಬಳಿ ರಮೇಶ್ ಮತ್ತು ಸಂತೋಷ್ ಅವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.

  ಕಾರ್ಯಾಚರಣೆಯಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್‍ಪಿ ಎಂ.ಕೆ.ಗಂಗಲ್, ಹರಿಹರ ಸಿಪಿಐ ಎಸ್ ಲಕ್ಷ್ಮಣನಾಯ್ಕ, ಹರಿಹರ ಗ್ರಾಮಾಂತರ ಪಿಎಸ್‍ಐ ಸಿದ್ದೇಗೌಡ ಹೆಚ್ ಎಂ, ಸಿಬ್ಬಂದಿಗಳಾದ ಮಜೀದ್, ರಾಘವೇಂದ್ರ, ರಮೇಶ್ ನಾಯ್ಕ, ಸೈಯದ್ ಗಫಾರ್, ಶಾಂತರಾಜ್, ಕೃಷ್ಣ ಭಾಗವಹಿಸಿದ್ದರು. ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಚೇತನ್ ಆರ್ ಪ್ರಶಂಸಿಸಿದ್ದಾರೆ.

LEAVE A REPLY

Please enter your comment!
Please enter your name here