ನಗರದ ಪುಟ್‍ಬಾತ್ ವ್ಯಾಪಾರಸ್ಥರ ನೋವಿನ ಧ್ವನಿಗೆ ನಗರಸಭೆ ಸಕರಾತ್ಮಕ ಸ್ಪಂದನ

0
26

  ಚಳ್ಳಕೆರೆ:

      ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ನಗರಗಳು ಉತ್ತಮ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡುತ್ತಿದ್ದು, ಚಳ್ಳಕೆರೆ ನಗರವೂ ಸಹ ರಾಜ್ಯದಲ್ಲೇ ಅತಿಹೆಚ್ಚಿನ ಅಭಿವೃದ್ಧಿ ಭಾಗ್ಯವನ್ನು ಕಾಣುವ ನಗರವಾಗಿದೆ. ಈಗಾಗಲೇ ನೂರಾರು ಕೋಟಿ ವೆಚ್ಚದಲ್ಲಿ ಚಳ್ಳಕೆರೆ ನಗರಕ್ಕೆ ಆಧುನಿಕ ಸ್ಪರ್ಶವನ್ನು ನೀಡಲಾಗಿದೆ. ಆದರೆ, ಪುಟ್‍ಬಾತ್ ವ್ಯಾಪಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಗರಸಭೆ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.

      ಅವರು, ಮಂಗಳವಾರ ನಗರದ ಪುಟ್‍ಬಾತ್ ವ್ಯಾಪಾರಿಗಳು ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ನೀಡಿದ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು. ನಗರದಲ್ಲಿ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪುಟ್‍ಬಾತ್ ವ್ಯಾಪಾರಿಗಳು ಕಳೆದ ಹಲವಾರು ವರ್ಷಗಳಿಂದ ತಮ್ಮ ಬದುಕನ್ನು ಕಂಡುಕೊಂಡಿದ್ಧಾರೆ. ಪುಟ್‍ಬಾತ್ ವ್ಯಾಪಾರಿಗಳ ಮೇಲೆ ಮತ್ತು ಅವರ ಪಡುವ ಕಷ್ಟಗಳ ಬಗ್ಗೆ ನಗರಸಭೆಗೆ ಅನುಕಂಪವಿದೆ. ಆದರೆ, ನಗರದ ಅಭಿವೃದ್ಧಿಯಾದಲ್ಲಿ ಇಡೀ ರಾಜ್ಯವೇ ಚಳ್ಳಕೆರೆ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಲಿದೆ.

      ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ನಗರಕ್ಕೆ ಬಂದು ಹೋಗುತ್ತಿರುವ ವಾಹನ ಮತ್ತು ಪ್ರಯಾಣಿಕರ ಹಿತದೃಷ್ಠಿಯಿಂದ ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪುಟ್‍ಬಾತ್ ವ್ಯಾಪಾರಿಗಳು ಸಹಕಾರ ನೀಡುವಂತೆ ತಹಶೀಲ್ದಾರ್‍ರವರ ನೇತೃತ್ವದಲ್ಲಿ ಎಲ್ಲರಿಗೂ ಮಾಹಿತಿ ನೀಡಿದ್ದು, ತೊಂದರೆಗೆ ಒಳಗಾಗುವ ಪುಟ್‍ಬಾತ್ ವ್ಯಾಪಾರಿಗಳಿಗೆ ಬದಲಿ ಜಾಗವನ್ನು ಸೂಚಿಸುವಂತೆ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪನವರಿಗೆ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿ.ವೈ.ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಿ.ಹನುಮಂತರಾಯ ಮುಂತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here