ನನ್ನ ವಿರುದ್ಧದ ಆರೋಪಗಳು ಆಧಾರರಹಿತ : ಚೋಕ್ಸಿ

0
49

ನವದೆಹಲಿ:

                     ಪಿ.ಎನ್.ಬಿ ಸಾಲದ ದೋಖಾ ಪ್ರಕರಣದಲ್ಲಿ ಬಂದಿತರಾಗಿದ್ದ ಮೆಹುಲ್ ಚೋಕ್ಸಿ ಅವರು ದೇಶವನ್ನು ತ್ಯಜಿಸಿದ್ದರು.   “ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತವಾದದ್ದು” ಎಂದು ದೇಶದಿಂದ ಪರಾರಿ ಆಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಹೇಳಿಕೊಂಡಿದ್ದು, ಪಿ.ಎನ್.ಬಿ ಗೆ  13 ಸಾವಿರ ಕೋಟಿ ರುಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ವಾಂಟೆಡ್ ಆಗಿರುವ ಬಗ್ಗೆ ಕ್ಯಾಮೆರಾ ಮುಂದೆ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಜಾರಿ ನಿರ್ದೇಶನಾಲಯದಿಂದ ನನ್ನ ಎಲ್ಲ ಆಸ್ತಿಯನ್ನೂ ಕಾನೂನುಬಾಹಿರವಾಗಿ ಯಾವುದೇ ಆಧಾರವಿಲ್ಲದೆ ಜಪ್ತಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಮಾಡಿದ್ದು, ಸುದ್ದಿ ಸಂಸ್ಥೆ ಎಎನ್ ಐಗೆ ನೀಡಿದ ಸಂದರ್ಶನದಲ್ಲಿ ಮೆಹುಲ್ ಚೋಕ್ಸಿ ಹೇಳಿದ ಮಾತುಗಳಿವು. ಈ ಪ್ರಶ್ನೆಗಳನ್ನು ಆಂಟಿಗುವಾದಲ್ಲಿ ಚೋಕ್ಸಿ ವಕೀಲರ ಮೂಲಕ ಕೇಳಲಾಗಿದೆ. ಚೋಕ್ಸಿ ವಿರುದ್ಧ ಯಾವ ಆರೋಪವೂ ಇಲ್ಲ ಎಂದಿದ್ದ ಭಾರತ ಈ ವರ್ಷ ಜನವರಿಯಲ್ಲಿ ಮೆಹುಲ್ ಚೋಕ್ಸಿ ಹಾಗೂ ಆತನ ಸಂಬಂಧಿ ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. “ನನ್ನ ಪಾಸ್ ಪೋರ್ಟ್ ಸರೆಂಡರ್ ಮಾಡುವ ಪ್ರಶ್ನೆಯೇ ಇಲ್ಲ. ನನ್ನಿಂದ ಭಾರತಕ್ಕೆ ಇರುವ ಸುರಕ್ಷತೆ ಧಕ್ಕೆ ಏನು ಅನ್ನೋದನ್ನು ವಿವರಿಸದ ಹೊರತು ಅದು ಸಾಧ್ಯವೇ ಇಲ್ಲ” ಎಂದು ಚೋಕ್ಸಿ ಕೇಳಿದ್ದಾರೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here