ನಮ್ಮ ವೃತ್ತಿಯೇ ನಮ್ಮ ದೈವ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವೀರಪ್

0
26

ಹುಳಿಯಾರು

   ನಮ್ಮ ವೃತ್ತಿಯೇ ನಮ್ಮ ದೈವವಾಗಿದ್ದು, ಆತ್ಮವಂಚನೆ ಇಲ್ಲದೆ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಮನುಷ್ಯ ಉನ್ನತಿ ಹೊಂದುತ್ತಾನೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವೀರಪ್ಪನವರು ತಿಳಿಸಿದರು.
ಹುಳಿಯಾರು ಸಮೀಪದ ಬೋರನಕಣಿವೆಯ ಸೇವಾಚೇತನದ ಶ್ರೀ ಸಾಯಿ ಮಂದಿರದಲ್ಲಿ ಸಾಯಿಬಾಬಾರವರ ಸಮಾಧಿ ಶತಮಾನೋತ್ಸವ ಅಂಗವಾಗಿ ನಡೆದ ಗುರುನಮನ ಮತ್ತು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರು ಇಚ್ಛೆ ಇದ್ದಲ್ಲಿ ಎಲ್ಲ ಕಾರ್ಯವೂ ಸಲೀಸಾಗಿ ಸಾಗುತ್ತದೆ. ಭಕ್ತಿಗೆ ಯಾವುದೇ ಜಾತಿ ಇಲ್ಲ. ಭಕ್ತಿ ಇದ್ದಲ್ಲಿ ಎಲ್ಲರಿಗೂ ದೇವರು ಒಲಿಯುತ್ತಾನೆ. ಭಕ್ತಿಯೇ ನಮ್ಮ ಗುರು ನಮನ ಎಂದರು.

   ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಅವತಾರ ಪುರುಷರಾಗಿದ್ದ ಸಾಯಿಬಾಬಾರವರು ಗುರು ಹಾಗೂ ಪರಮಾತ್ಮನ ಸ್ವರೂಪಿಯಾಗಿದ್ದು ಬಾಬಾರ ದರ್ಶನಕ್ಕೆ ಶಿರಡಿಗೆ ಹೋಗಬೇಕಾಗಿದ್ದು, ಇಂತಹ ಸಂದರ್ಭದಲ್ಲಿ ಬೋರನಕಣಿವೆಯಲ್ಲಿ ದೇವಾಲಯವನ್ನು ನಿರ್ಮಿಸಿ ಬಾಬಾರವರನ್ನು ಇಲ್ಲಿ ನೆಲೆ ನಿಲ್ಲುವಂತೆ ಮಾಡಿ ಎಲ್ಲರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಶಿರಡಿ ಸಾಯಿಬಾಬಾ ಟ್ರಸ್ಟಿನ ವಿಠ್ಠಲ್ ಅವರ ಕೆಲಸ ಶ್ಲಾಘನೀಯ ಎಂದರು.

  ನಿವೃತ್ತ ಕೆಎಎಸ್ ಅಧಿಕಾರಿ ರುದ್ರಪ್ಪ ಹನಗವಾಡಿ ಮಾತನಾಡಿ ಗುರುವಿನಿಂದ ಉಪಕೃತರಾದವರಿಗೆ ಕೃತಜ್ಞತೆ ಇರಬೇಕು. ಆದರೆ ಕೃತಜ್ಞನಾಗುವ ವಾತಾವರಣ ಎಲ್ಲೆಡೆ ತುಂಬಿದೆ. ನಮ್ಮಲ್ಲಿ ಮಠ ಸಂಸ್ಕೃತಿ ಎಲ್ಲಡೆ ತುಂಬಿ ತುಳುಕುತ್ತಿದ್ದು ಎಲ್ಲ ಜಾತಿಯವರು ಒಂದೆಡೆ ಸೇರುವುದು ಕಷ್ಟವಾಗಿದೆ. ಮಠ ಸಂಸ್ಕೃತಿಯಿಂದಾಗಿ ಎಲ್ಲರೂ ಅವರವರ ಜಾತಿಯದ್ದೇ ಒಂದೊಂದು ಮಠ ಕಟ್ಟಿಕೊಂಡಿದ್ದಾರೆ. ಮಠ ಕಟ್ಟಿಕೊಂಡು ಎಲ್ಲರೂ ಹಾಳಾಗಿದ್ದಾರೆ. ಇಂತಹ ಸಂಸ್ಕೃತಿಯನ್ನು ಮೀರಿ ಸಾಯಿ ಮಂದಿರ ಎಲ್ಲ ಜಾತಿಯವರನ್ನು ಒಗ್ಗೂಡಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಂಕರ್ ರೆಡ್ಡಿ, ಕಾವೇರಿ ಕಾಲೇಜಿನ ಅಧ್ಯಕ್ಷರಾದ ದೇವರಾಜಪ್ಪ, ನರಸಪ್ಪ, ಡಾ.ಮಿಥುನ್, ಶಿರಡಿ ಸಾಯಿ ಫೌಂಡೇಶನ್ ಕಾರ್ಯದರ್ಶಿ ವಿಠ್ಠಲ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here