ನಾಗರೀಕರಿಗೆ ಹಲವು ರೀತಿಯ ತೊಂದರೆ

0
33

ಹರಿಹರ;

         ನಗರದ ಜನ ವಸತಿ ಪ್ರದೇಶಗಳಲ್ಲಿರುವ ವಿವಿಧ ವ್ಯಾಪಾರಿ, ಉದ್ಯಮಿಗಳ ಗೋದಾಮುಗಳಿಂದ ನಾಗರೀಕರಿಗೆ ಹಲವು ರೀತಿಯ ತೊಂದರೆಯಾಗುತ್ತಿದೆ.
            ಹೋಲ್‍ಸೇಲ್ ಕಿರಾಣಿ, ಔಷಧಿ, ಸಿಮೆಂಟ್, ಹಾರ್ಡ್‍ವೇರ್, ಹಣ್ಣು, ಹಂಪಲು ಸೇರಿದಂತೆ ವಿವಿಧ ವ್ಯಾಪಾರಿ, ಉದ್ದಿಮೆಯವರು ನಗರದ ಜನವಸತಿ ಪ್ರದೇಶಗಳಲ್ಲಿ ತಮ್ಮ ಗೋದಾಮುಗಳನ್ನು ಹೊಂದಿದ್ದಾರೆ.
            ಇಲಿ ಹೆಗ್ಗಣ, ವಿಷ ಜಂತು;ಮೊದಲನೆಯದಾಗಿ ಆಹಾರ ಪದಾರ್ಥಗಳ ಗೋದಾಮುಗಳಿದ್ದರೆ ಇಲಿ, ಹೆಗ್ಗಣಗಳ ಕಾಟ ಇರುತ್ತದೆ. ಆ ಇಲಿ, ಹೆಗ್ಗಣಗಳು ಗೋದಾಮಿನಲ್ಲಷ್ಟೆ ಅಲ್ಲದೆ ಸುತ್ತಲಿನ ಮನೆಗಳಿಗೂ ಹೊಕ್ಕು ಮನೆಯರಿಗೆ ಕಿರಿ, ಕಿರಿ ಉಂಟು ಮಾಡುತ್ತವೆ. ಈ ಇಲಿ, ಹೆಗ್ಗಣಗಳನ್ನು ಹುಡುಕಿಕೊಂಡು ವಿಷ ಜಂತುಗಳೂ ಆಗಾಗ ಇಲ್ಲಿಗೆ ಭೇಟಿ ನೀಡುತ್ತವೆ. ಅದರಿಂದ ಜನರ ಪ್ರಾಣಕ್ಕೆ ತೊಂದರೆಯಾಗುವ ಅಪಾಯವೂ ಇದೆ.
          ಧೂಳು, ದುಮ್ಮಾನ;ಗೋದಾಮುಗಳೆಂದರೆ ಅವುಗಳಲ್ಲಿ ಸ್ವಚ್ಚತೆ ಇರುವುದಿಲ್ಲ. ಧೂಳು, ದುಮ್ಮಾನಗಳಿಂದ ಕೂಡಿರುತ್ತವೆ. ಅಲ್ಲಿರುವ ಪದಾರ್ಥಗಳಿಂದಾಗಿ ದುರ್ವಾಸನೆಯೂ ಬೀರುತ್ತದೆ. ಇದು ಸುತ್ತಲಿನ ವಾತಾವರಣದ ಮೇಲೂ ಪ್ರಭಾವ ಬೀರುತ್ತದೆ.
ಟ್ರಾಫಿಕ್ ಜಾಮ್;ಗೋದಾಮುಗಳಲ್ಲಿನ ದಾಸ್ತಾನು ಇಳಿಸಲು ಅಥವಾ ಹೇರಿಕೊಂಡು ಹೋಗಲು ಲಾರಿಗಳು ನಿತ್ಯ ಗಂಟೆ, ಗಟ್ಟಲೆ ನಿಲ್ಲುತ್ತವೆ. ಕೆಲವೊಮ್ಮೆ ಹಮಾಲರು ಸಿಗಲಿಲ್ಲವೆಂದು ಐದಾರು ಗಂಟೆಗಳ ಕಾಲ ಲಾರಿಗಳು ನಿಲ್ಲುತ್ತವೆ. ಆಗ ಆ ಬಡಾವಣೆಯ ಆ ರಸ್ತೆಯು ಇತರೆ ಸಂಚಾರಿಗಳಿಗೆ ಬಂದ್ ಆದಂತೆಯೆ.
            ನಾಲ್ಕು ದಿನಗಳ ಹಿಂದೆ;15 ರಿಂದ 25 ಟನ್‍ವರೆಗೂ ಲೋಡ್ ಇರುವ ಲಾರಿಯೊಂದು ನಾಲ್ಕು ದಿನಗಳ ಹಿಂದೆ ಜಲಸಿರಿಗಾಗಿ ತೆರೆದ ಗುಂಡಿಯಲ್ಲಿ ಸಿಕ್ಕಿಕೊಂಡಿತ್ತು. ಗುಂಡಿಯಲ್ಲಿ ಗಾಲಿ ಸಿಲುಕಿದ ಪರಿಣಾಮ ಆ ಲಾರಿಯು ಪಕ್ಕದ ಕಟ್ಟಡಕ್ಕೆ ವಾಲಿಕೊಂಡಿತ್ತು. ಇನ್ನಷ್ಟು ವಾಲಿದ್ದರೆ ಆ ಕಟ್ಟಡಕ್ಕೆ ಹಾನಿ ಉಂಟು ಮಾಡುತ್ತಿತ್ತು. ಆಗ ಶಿವಮೊಗ್ಗ ವೃತ್ತದ ಶೋಭಾ ಟಾಕೀಸ್ ರಸ್ತೆ ಹಾಗೂ ಬಾಹರ್ ಮಕಾನ್ ಬಡಾವಣೆಯ ವಾಹನ ಸಂಚಾರ ಹಲವು ಗಂಟೆಗಳ ವರೆಗೆ ಸ್ಥಗಿತಗೊಂಡಿತ್ತು. ಟ್ರಾಫಿಕ್ ನಿರ್ವಹಣೆಗೆ ಪೊಲೀಸರು ಪರದಾಡಿದರು. ಹಮಾಲರು ಬಂದು ಲಾರಿಯಲ್ಲಿನ ದಾಸ್ತಾನನ್ನು ಖಾಲಿ ಮಾಡಿ ಲಾರಿ ಹೊರಗೆ ತೆಗೆಯಲಾಯಿತು.
            ಆಟೋ, ಕಾರುಗಳು ಮಾತ್ರ ಸಂಚರಿಸಬಹುದಾದ ರಸ್ತೆಗಳಲ್ಲಿ 25 ಟನ್ ದಾಸ್ತಾನು ಇರುವ ಭಾರಿ ಲಾರಿಗಳು ಬಂದರೆ ಏನು ಅನಾಹುತ ಆಗುತ್ತದೆಯೋ ಅಂತಹವುಗಳು ಸಂಭವಿಸುತ್ತವೆ. ಅದೃಷ್ಟಕ್ಕೆ ಲಾರಿ ವಾಲುವಾಗ ಅಲ್ಲಿ ಯಾರೂ ಇರಲಿಲ್ಲ. ಇಲ್ಲದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು.
             ಇವರು ಪ್ರಭಾವಿಗಳು;ನಗರದೊಳಗೆ ದೊಡ್ಡ ಗೋದಾಮುಗಳನ್ನು ಹೊಂದಿರುವವರಲ್ಲಿ ಬಹಳಷ್ಟು ಜನರು ಪ್ರಭಾವಿಗಳಾಗಿದ್ದಾರೆ. ಹಾಲಿ, ಮಾಜಿ ನಗರಸಭೆ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಲ್ಲಿ ನೇತಾರರಾಗಿದ್ದಾರೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ಎದುರಾದರು ಇವರು ಪೊಲೀಸರು, ನಗರಸಭೆಯವರು ಕಿಮಿಕ್ ಎನ್ನದಂತೆ ಸಂಭಾಳಿಸಿದ್ದಾರೆ. ಬೇರೆಯವರಿಗೆ ಹೇಳುವವರಾಗಿ ಇವರೆ ಜನರ ಜೊತೆಗೆ ಚೆಲ್ಲಾಟ ಆಡುತ್ತಿರುವುದು ವಿಪರ್ಯಾಸವಾಗಿದೆ.
           ಇವರು ಬಡವರಲ್ಲ;ನಗರದೊಳಗೆ ಗೋದಾಮುಗಳನ್ನು ಹೊಂದಿರುವವರು ಕೋಟ್ಯಾಧೀಶರಾಗಿದ್ದಾರೆ. ಒಂದು ದಿನಕ್ಕೆ ಅವರು 20-30 ಲಕ್ಷ ರೂ.ಗಳ ವಹಿವಾಟು ನಡೆಸುತ್ತಾರೆ. ತಾಲೂಕಿನ ಇತರೆ ವ್ಯಾಪಾರಸ್ಥರಿಗೆ ಮಾಲು ಸರಬರಾಜು ಮಾಡುವ ಹೋಲ್ ಸೇಲರ್ಸ್ ಆಗಿದ್ದಾರೆ.
            ಎಪಿಎಂಸಿಗೆ ಹೋಗಿ;ನಗರದಲ್ಲಿ 80 ಎಕರೆ ವಿಶಾಲ ಪ್ರದೇಶದ ಎಪಿಎಂಸಿ ಮಾರುಕಟ್ಟೆ ಇದೆ. ಅಲ್ಲಿ ಹಲವು ಕೋಟಿ ರೂ.ಗಳ ವೆಚ್ಚದಲ್ಲಿ ಇಂತಹ ವ್ಯಾಪಾರಿಗಳಿಗೆ ಅನುಕೂಲಕರವಾಗಲಿ ಎಂದೆ ದೊಡ್ಡ ಗಾತ್ರದ ಗೋದಾಮುಗಳನ್ನು ಸರಕಾರದಿಂದ ನಿರ್ಮಿಸಲಾಗಿದೆ. ಎಪಿಎಂಸಿ ಮಾರುಕಟ್ಟೆಗೆ ಇವರೆಲ್ಲರ ಗೋದಾಮುಗಳನ್ನು ಸ್ಥಳಾಂತರಿಸಬೇಕಾಗಿದೆ.
            ಜಂಟಿ ಕಾರ್ಯಚರಣೆ ಮಾಡಿರಿ;ಜನರಿಗೆ ಕಿರಿ, ಕಿರಿ ಉಂಟು ಮಾಡುವ ಈ ಉದ್ಯಮಿಗಳ ಗೋದಾಮುಗಳನ್ನು ಎಪಿಎಂಸಿಗೆ ಸ್ಥಳಾಂತರಿಸಲು ನಗರಸಭೆ, ಪೊಲೀಸ್ ಹಾಗೂ ಎಪಿಎಂಸಿಯ ಅಧಿಕಾರಿಗಳು ಜಂಟಿ ಕಾರ್ಯಚರಣೆ ಮಾಡಬೇಕಿದೆ. ಪ್ರಭಾವಿಗಳ ಪ್ರಭಾವವನ್ನು ಮೆಟ್ಟಿ ನಿಂತು ಈ ಸಮಸ್ಯೆಗೆ ಪರಿಹಾರ ದೊರಕಿಸಲು

LEAVE A REPLY

Please enter your comment!
Please enter your name here