ನಾಣಿಕೇರಿ ವೈಭವವನ್ನು ಮರುಕಳಿಸಿದ ಮಾರುತಿ ಸ್ಪೋಟ್ಸ್ ಕ್ಲಬ್

0
19

ಹಗರಿಬೊಮ್ಮನಹಳ್ಳಿ:
                  ನಾಣಿಕೇರಿ ರಂಗೋತ್ಸವ ಆಯೋಜಿಸುವ ಮೂಲಕ ಮುಳುಗಡೆಯಾಗಿದ್ದ ನಾಣಿಕೇರಿಯ ಸಾಂಸ್ಕøತಿಕ ಚಟುವಟಿಕೆಗಳನ್ನು ಮತ್ತೊಮ್ಮೆ ಮರು ಪ್ರತಿಷ್ಠಾಪಿಸಿದಂತಾಗಿದೆ ಇಂತಹ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಮಾರುತಿ ಸ್ಪೋಟ್ಸ್‍ಕ್ಲಬ್ ನಿಜಕ್ಕೂ ಶ್ಲಾಘನೀಯ ಎಂದು ಬಿಜೆಪಿ ಮುಖಂಡ ಪಿ.ರಾಜಲಿಂಗಪ್ಪ ಹೇಳಿದರು.
                  ಪಟ್ಟಣದ ಗುರುಭವನದಲ್ಲಿ 29ನೇ ವರ್ಷದ ಶ್ರೀ ವಿನಾಯಕ ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ಯ ಮಾರುತಿ ಸ್ಪೋಟ್ಲಸ್ ಕ್ಲಬ್ ಆಯೋಜಿಸಿದ್ದ 2ನೇ ನಾಣಿಕೇರಿ ರಂಗೋತ್ಸವ 2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಟಿಬಿ ಡ್ಯಾಮ್ ಕಟ್ಟುವ ಸಂದರ್ಭದಲ್ಲಿ ತುಂಗಭದ್ರನದಿಯಲ್ಲಿ ಮುಳುಗಡೆಯಾಗಿದ್ದ ನಾಣಿಕೇರಿ ಗ್ರಾಮವು ಸಾಂಸ್ಕøತಿಕ ಕಲೆಗಳ ತವರೂರಾಗಿತ್ತು. ಸಾಂಸ್ಕøತಿಕ ನೆಲೆಗಟ್ಟಿನ ಮೇಲೆ ಸಂಪದ್ಬರಿತವಾಗಿದ್ದ ನಾಣಿಕೇರಿಯು ವಿಜಯನಗರ ಸಾಮ್ರಾಜ್ಯ ಕಾಲದಲ್ಲೇ ಹೆಸರುವಾಸಿಯಾಗಿತ್ತು. ನಂತರ ಹರಪನಹಳ್ಳಿ ಪಾಳೇಗಾರರ ಆಳ್ವಿಕೆಯಲ್ಲೂ ಹೆಸರಾಂತ ಕುಸ್ತಿಪಟುಗಳಿಂದ ನಾಡಿನ ಉದ್ದಗಲಕ್ಕೂ ಮನೆಮಾತಾಗಿತ್ತು. ಪ್ರತಿಯೊಂದು ಹಬ್ಬ ಹರಿದಿನಗಳಲ್ಲೂ ರಂಗಭೂಮಿ ಚಟುವಟಿಕೆಗಳು ನಾಣಿಕೇರಿಯಲ್ಲಿ ಸಂಭ್ರಮ ಸಡಗರದಿಂದ ನಡೆಯುತ್ತಿದ್ದವು. ಇಂದು ಈ ಮಾರುತಿ ಸ್ಪೋಟ್ಸ್ ಕ್ಲಬ್‍ನವರು ನಾಣಿಕೇರಿ ರಂಗೋತ್ಸವವನ್ನು ಮಾಡುವ ಮೂಲಕ ನಾಣಿಕೇರಿಯ ಗತಕಾಲದ ನೆನಪುಗಳನ್ನು ಮರುಕಳಿಸಿ ತಂದಂತಾಗಿದೆ ಎಂದರು.
                   ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಕೊಟ್ರೇಶ್ ಮಾತನಾಡಿ ಸತತ 29 ವರ್ಷಗಳಿಂದ ಮಾರುತಿ ಸ್ಪೋಟ್ಸ್‍ಕ್ಲಬ್ ಗಣೇಶೋತ್ಸವವನ್ನು ಆಚರಿಸುತ್ತಾಬಂದಿದೆ. ಈ ಹಿಂದೆ ಪಟ್ಟಣದಲ್ಲಿ ಜೋತಿವೃಂದ ಬಿಟ್ಟರೆ ಮಾರುತಿ ಸ್ಪೋಟ್ಸ್‍ಕ್ಲಬ್ ಮಾತ್ರ ಗಣೇಶನನ್ನು ಕೂಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಓಣಿಯಲ್ಲಿ ಐದಾರು ಸಂಘಗಳು ಉಟ್ಟಿಕೊಂಡು ಗಣಪತಿ ಹಬ್ಬವನ್ನು ಆಚರಿಸುತ್ತಿದ್ದಾರೆ ಆದರೂಸಹ ಮಾರುತಿ ಸ್ಪೋಟ್ಸ್‍ಕ್ಲಬ್ ಮಾತ್ರ ರಂಗೋತ್ಸವದಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾಂಸ್ಕøತಿಕ ರಾಯಬಾರಿಯಾಗಿದ್ದಾರೆ. ಎಲ್ಲರ ಸಹಕಾರ ಸೌಹಾರ್ಧತೆಯಿಂದ ಉಳಿದ ಸಂಘಗಳಿಗೆ ಮಾರುತಿ ಸ್ಪೋಟ್ಸ್‍ಕ್ಲಬ್ ಮಾದರಿಯಾಗಿದೆ ಆದ್ದರಿಂದ ಮುಂದಿನ ಗಣೇಶೋತ್ಸವದ ಹೊತ್ತಿಗೆ ಮಾರುತಿ ಸ್ಪೋಟ್ಸ್‍ಕ್ಲಬ್‍ಗೆ ಶಾಶ್ವತ ಪಂಚಲೋಹದ ಗಣಪತಿ ವಿಗ್ರಹವನ್ನು ನನ್ನ ಸ್ವಂತ ಹಣದಿಂದ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
                 ಇದೇವೇಳೆ ಶಿವಾರ್ಜುನ ಯುದ್ದವೆಂಬ ಪೌರಾಣಿಕ ನಾಟಕವನ್ನು ಕರ್ನಾಟಕ ನಾಟಕ ಅಕ್ಯಾಡಮಿ ಸದಸ್ಯೆ ಬಿ.ಶಿವಕುಮಾರಿ ತಂಡ ಅದ್ಬುತವಾಗಿ ಅಭಿನಯಿಸಿತು. ಹೆಸರಾಂತ ನಟಿ ವೀಣಾ ಆದ್ವಾನಿ ಅರ್ಜುನನ ಪಾತ್ರದಲ್ಲಿ, ಸುನಿತಾ ಶೆಟ್ಟಿ ಭೀಮಸೇನನ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದರು.
                  ಹುಳ್ಳಿ ಪ್ರಕಾಶ್, ಕೆ.ಮೈಲಾರಪ್ಪ, ಕೋಗಳಿ ಪಂಪಣ್ಣ, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಬಾಬುವಲಿ, ಸದಸ್ಯ ಹುಳ್ಳಿ ಮಂಜುನಾಥ, ಕರ್ನಾಟಕ ನಾಟಕ ಅಕ್ಯಾಡಮಿ ಸದಸ್ಯೆ ಬಿ.ಶಿವಕುಮಾರಿ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಾರುತಿ ಸ್ಪೋಟ್ಸ್‍ಕ್ಲಬ್‍ನ ಉಪಾಧ್ಯಕ್ಷ ಹುಲುಗಪ್ಪ, ಚಂದ್ರು, ಮಾರುತಿ, ಹರ್ಷಾ, ಪಕೀರಪ್ಪ, ಶಿವಕುಮಾರ್ ಶೆಟ್ಟಿ, ಜಿ.ಎಂ.ಶಂಕರ್, ಸಂದೀಪ್, ಶಿವು, ಸತೀಶ, ಬಡಿಗೇರ್ ಬಸವರಾಜ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕ್ಲಬ್‍ನ ಅಧ್ಯಕ್ಷ ಶಿವಶಂಕರಗೌಡ ಸ್ವಾಗತಿಸಿದರು. ಬಾರಿಕರ ಗಂಗಾಧರ ವಂದಿಸಿದರು.

LEAVE A REPLY

Please enter your comment!
Please enter your name here