ನಾನು ಚೆಕ್ ತೆಗೆದುಕೊಂಡಿಲ್ಲ – ಬಿ.ಎಸ್.ವೈ ಗೆ ಡಿಕೆಶಿ ತಿರುಗೇಟು

0
18

ಬೆಂಗಳೂರು:

ಜಲ ಸಂಪನ್ಮೂಲ ಇಲಾಖೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಕಮೀಷನ್ ದಂಧೆ ಆರಂಭಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

      ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಡಿ.ಕೆ. ಶಿವಕುಮಾರ್, ನಾನೇನು ನಿಮ್ಮಂತೆ ಚೆಕ್ ತೆಗೆದುಕೊಂಡಿಲ್ಲ. ನಿಮ್ಮ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಬೇಕಿದ್ದರೆ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

      ಇಂದು ಬೆಳಗ್ಗೆ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ವಿರುದ್ಧ ಯಡಿಯೂರಪ್ಪ ಭ್ರಷ್ಟಾಚಾರದ ನೇರ ಆರೋಪ ಮಾಡಿದರು. ಹಿಂದಿನ ಸರ್ಕಾರದಲ್ಲಿ ನೀಡಿದ್ದ ಕಮೀಷನ್ ಬೇರೆ. ಈಗ ಹೊಸದಾಗಿ ಕಮೀಷನ್ ಕೊಡಿ ಎಂದು ಜಲಸಂಪನ್ಮೂಲ ಸಚಿವರು ಗುತ್ತಿಗೆದಾರರನ್ನು ಕೇಳುತ್ತಿದ್ದಾರೆ. ಗುತ್ತಿಗೆದಾರರ ಸುಮಾರು 10 ಸಾವಿರ ಕೋಟಿ ಬಿಲ್ ಬಾಕಿಯಿದೆ ಎಂದು ನೇರಾ ನೇರ ಆರೋಪಿಸಿದ್ದರು.

      ಇದಕ್ಕೆ ಪ್ರತಿಕ್ರಯಿಸಿದ ಶಿವಕುಮಾರ್, ಯಡಿಯೂರಪ್ಪ ಅವರ ಬಳಿ ಪುರಾವೆ ಇದ್ದರೆ ಅವರು ಬೇಕಾದರೆ ದೂರು ನೀಡಲಿ. ನಂತರ ಅದನ್ನ ಬೇಕಾದರೆ ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಗೂ ಕೊಡಲಿ. ಯಾವುದೇ ತನಿಖೆಗೆ ತಾವು ಸಿದ್ಧ ಎಂದು ಸವಾಲು ಹಾಕಿದರು.

      ನಾನು ಇಲಾಖೆಯಲ್ಲಿ ಇನ್ನೂ ಕಣ್ಣೇ ಬಿಟ್ಟಿಲ್ಲ. ಗುತ್ತಿಗೆದಾರರಿಗೆ ಎಷ್ಟು ಬಾಕಿ ಇದೆ ಎಂಬುದು ಗೊತ್ತಿಲ್ಲ. ಬಾಕಿ ಬಿಡುಗಡೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆಗಲೇ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಕನಸು ಬೀಳುತ್ತಿದೆ. ಅವರು ಬೇಕಾದರೆ ಎಸಿಬಿಗೆ ದೂರು ಕೊಡಲಿ. ಇಲ್ಲವಾದಲ್ಲಿ ವಿಧಾನಸೌಧದಲ್ಲಿ ನೇರವಾಗಿ ಚರ್ಚೆಗೆ ಬರಲಿ. ನನ್ನ ಮೇಲೆ ಬಿಜೆಪಿಯವರು ಇನ್ನು ಏನೇನು ಚಿತ್ರಹಿಂಸೆ ಕೊಡಬೇಕೋ ಕೊಡಲಿ ಎಂದು ಹೇಳಿದರು.

LEAVE A REPLY

Please enter your comment!
Please enter your name here