ನಾಮಫಲಕದಲ್ಲಿ ಕನ್ನಡ ಬಳಕೆಗೆ ಕ್ರಮ ಅಗತ್ಯ

0
22

 

ಬೆಂಗಳೂರು:

   ಅಂಗಡಿ-ಮುಗ್ಗಟ್ಟುಗಳಲ್ಲಿ ಅಳವಡಿಸಲಾಗಿರುವ ನಾಮಫಲಕಗಳಲ್ಲಿ ಇಂಗ್ಲೀಷ್ ಭಾಷೆಯನ್ನೇ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅಂಗಡಿ-ಮುಗ್ಗಟ್ಟುಗಳಲ್ಲಿ ಹೆಚ್ಚಿನದಾಗಿ ಕನ್ನಡವನ್ನೇ ಬಳಸುವಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಶಿವರಾಜು ಅವರು ತೀಳಿಸಿದರು.

   ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಬೆಂಗಳೂರು ನಗರದಲ್ಲಿ ಹೆಚ್ಚು ಫ್ಲೆಕ್ಸ್-ಬ್ಯಾನರ್‍ಗಳಲ್ಲಿ ಇಂಗ್ಲೀಷನ್ನೇ ಬಳಸಲಾಗುತ್ತಿದೆ,ಇದರಿಂದಾಗಿ ಕನ್ನಡವನ್ನೇ ಬಳಸುವುದಿಲ್ಲ, ಈ ಹಿನ್ನೆಲೆಯಿಂದಾಗಿ ಶೇ.60ರಷ್ಟು ಭಾಗ ಕನ್ನಡವನ್ನು ಬಳಸುವಂತೆ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಲು ನಿರ್ಧರಿಸಲಾಗುವುದು.

   ಬೆಂಗಳೂರಿನಲ್ಲಿ ಫ್ಲೆಕ್ಸ್-ಬ್ಯಾನರ್‍ಗಳ ವಿರುದ್ದ ಕಿಡಿಕಾರಿ ತರಾಟೆ ತೆಗೆದು ಕೊಂಡ ಹೈಕೋರ್ಟ್, ಕೂಡಲೇ ಇವುಗಳನ್ನು ತೆರವು   ಗೊಳಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ ಹಿನ್ನಲೆ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆಯು ಕಳೆದ ಎರಡು ದಿನಗಳಲ್ಲಿ 1900 ಕೆ.ಜಿ. ಫ್ಲೆಕ್ಸ್ ಅನ್ನು ತೆರವುಗೊಳಿಸಿರುವುದಾಗಿ ತಿಳಿಸಿದರು.

    ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಅವರು ಮಾತನಾಡಿ, ಬೆಂಗಳೂರು ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ನಿಷೇಧಿಸಿದರೆ ಉತ್ತಮ. ಅನಧಿಕೃತ ಜಾಹೀರಾತಿಗೆ ಹೊಸ ನಿಯಮ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದರ ಜತೆಗೆ ನಿಷೇಧ ಹೇರುವಂತೆ ಒತ್ತಾಯಿಸಲಾಗುವುದು ಎಂದ ಅವರು, ಕಳೆದ 8 ವರ್ಷಗಳಿಂದ ಈ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಜಾಹೀರಾತು ವಿಭಾಗಕ್ಕೆ 150 ಕೋಟಿ ರೂ.ಗಳ ಲಾಭ ಬಂದಿದೆ. ಈ ವಿಭಾಗವನ್ನು ಕೂಡಲೇ ತೆಗೆದು ಹಾಕುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here