ಇಂದು ತೆರೆಗೆ ‘ಅಮ್ಮ ಐ ಲವ್ ಯು’

0
37

`ಅಮ್ಮ ಐ ಲವ್ ಯು’

ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಬಂಗಲೆ ಅವರು ನಿರ್ಮಿಸಿರುವ `ಅಮ್ಮ ಐ ಲವ್ ಯು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮಾರ್ಕೆಸ್ ಕ್ಸೇವಿಯರ್ ಈ ಚಿತ್ರದ ಸಹ ನಿರ್ಮಾಪಕರು.
ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರಕ್ಕೆ ಸಸಿ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್, ಗೌಸ್‍ಪೀರ್ ಗೀತರಚನೆ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ, ವಿಶ್ವ ಸಂಕಲನ, ರವಿವರ್ಮ, ಗಣೇಶ್, ವಿಕ್ರಂ ಸಾಹಸ ನಿರ್ದೇಶನ ಹಾಗೂ ರಾಜು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ನಿಶ್ವಿಕ, ಪ್ರಕಾಶ್ ಬೆಳವಾಡಿ, ಸಿತಾರ, ಚಿಕ್ಕಣ್ಣ, ರವಿಕಾಳೆ ಬಿರಾದಾರ್, ತರಂಗ ವಿಶ್ವ, ಗಿರಿ ದ್ವಾರಕೀಶ್, ಅವಿನಾಶ್ ಮುಂತಾದವರಿದ್ದಾರೆ. ಭೀಮೇಶ್ ಬಾಬು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

LEAVE A REPLY

Please enter your comment!
Please enter your name here