ನಾಳೆ ಬುಲುಸು ಸಾಂಬಮೂರ್ತಿ ಸ್ಮಾರಕ ಉದ್ಘಾಟನೆ

0
41

 ಬಳ್ಳಾರಿ:

      ನಗರದ ಗಾಂಧಿ ಭವನದ ಎದುರಿನ ತ್ಯಾಗಮಯಿ ಮಹರ್ಷಿ ಬುಲುಸು ಸಾಂಬಮೂರ್ತಿ ಮೈದಾನವನ್ನು ಪುನಃ ನಾಮಕರಣ ಮಾಡಿದ್ದು, ಈ ಸ್ಥಳದಲ್ಲಿ ಆ.9ರಂದು ಸ್ವಾತಂತ್ರ್ಯ ಸ್ಮಾರಕ ನಿರ್ಮಿಸಲಾಗುವುದು ಎಂದು ಮಲ್ಲಸಜ್ಜನ ವ್ಯಾಯಾಮ ಶಾಲೆ ಗಾಂಧಿ ಭವನದ ಅಧ್ಯಕ್ಷ ಟಿ.ಜೆ.ವಿಠಲ್ ಅವರು ಹೇಳಿದರು.

      ನಗರದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕ್ವಿಟ್ ಇಂಡಿಯಾ ಚಳುವಳಿಯ ಅಮೃತಮಹೋತ್ಸವದ ನಿಮಿತ್ತ ಭಾರತ ಸೇವಾ ದಳ ಹಾಗೂ ಗೃಹರಕ್ಷಕ ದಳ ಆಶ್ರಯದಲ್ಲಿ ಆ.9ರಂದು ಸ್ಮಾರಕವನ್ನು ಉದ್ಘಾಟನೆ ಹಾಗೂ ಪ್ರಭಾತ್ ಫೇರಿಯನ್ನು ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ಒಂದೇ, ನಾವೇಲ್ಲರೂ ಭಾರತೀಯರು ಎನ್ನುವ ಘೋಷಣೆಯಡಿಯಲ್ಲಿ ಪ್ರಭಾತ್ ಫೇರಿಯಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಖಾದಿ ಕಾಯಕಯೋಗಿ ಗಂಗಪ್ಪ ಮುದ್ದಪ್ಪ ಮಾಳಗಿ ಎನ್ನುವ 97ವರ್ಷದ ಹಿರೀಯ ಚೇತನ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಇಂದಿನ ಪೀಳಿಗೆಗೆ ಪ್ರತ್ಯಕ್ಷ ಪ್ರದರ್ಶನ ನೀಡಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಇತರೇ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

      ಪ್ರಸ್ತುತ ನಗರದ ಗಾಂಧಿ ಭವನದ ಎದುರು ಇರುವ ಖಾಲಿ ಸ್ಥಳ ಈ ಹಿಂದೆ ಬುಲುಸು ಸಾಂಬಮೂರ್ತಿ ಮೈದಾನವೆಂದು ಕರೆಯಲಾಗುತ್ತಿತ್ತು. ಈ ಸ್ಥಳವು ಸ್ವಾತಂತ್ರ್ಯ ಹೋರಾಟಗಾರರು ಮೊಟ್ಟ ಮೊದಲು ಮದ್ರಾಸ್ ಅಸೆಂಬ್ಲಿಯ ಅಧ್ಯಕ್ಷ ಹಾಗೂ ಬಳ್ಳಾರಿ ಕಾರಾಗೃಹದಲ್ಲಿ ವಾಸಿಸಿದ್ದರು. 1931ರಲ್ಲಿ ಬಳ್ಳಾರಿ ಕಾರಾಗೃಹದಿಂದ ಬಿಡುಗಡೆಯಾಗಿ ನಾಗರಿಕರನ್ನು ಉದ್ದೇಶಿಸಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಬೇಕು ಎಂದು ಪ್ರಚೋದನೆ ಮಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಈ ಸ್ಥಳವನ್ನು ಆ ಚಟುವಟಿಕೆಗಳಿಗೆ ಮೀಸಡಿಲಾಗಿತ್ತು. ಇದು 1948ರಿಂದ ಈ ಸ್ಥಳವನ್ನು ಬುಲುಸು ಸಾಂಬಮೂರ್ತಿ ಮೈದಾನವೆಂದು ಹೆಸರು ಪಡೆದಿತ್ತು. ಈ ದೇ ಸ್ಥಳದಲ್ಲೇ ರಾಷ್ಟ್ರ ನಾಯಕರು ಹಾಗೂ ರಾಜ್ಯ ನಾಯಕರು ಸೇರಿದಂತೆ ನಾನಾ ಗಣ್ಯರು, ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದೊಂದು ಬಳ್ಳಾರಿ ನಾಗರಿಕರ ಒಂದು ಸುದೈವವಾಗಿದೆ. ಈ ಸ್ಥಳವನ್ನು ತ್ಯಾಗಮಯಿ ಮಹರ್ಷಿ ಬುಲುಸು ಸಾಂಬಮೂರ್ತಿ ಮೈದಾನ ಎಂದು ಪುನಃ ನಾಮಕರಣ ಮಾಡಿ ಇದೇ ಸ್ಥಳದಲ್ಲಿ ಸ್ವಾತಂತ್ರ್ಯ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

       ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಗಣ್ಯರ ಅಭಿಪ್ರಾಯದೊಂದಿಗೆ, ಸಹಕಾರದೊಂದಿಗೆ ಈ ವ್ಯಾಯಾಮ ಶಾಲೆಯನ್ನು ಸ್ವಂತ ಖರ್ಚಿನಿಂದ ಸುಮಾರು 9ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ. ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು. ಈ ಸಂದರ್ಭದಲ್ಲಿ ಕೆ.ಬಸಪ್ಪ, ಗಣೇಶ್, ರವೀಂದ್ರ ಎನ್.ಕೆ., ಲಕ್ಷ್ಮೀ ನರಸಿಂಹ ಇದ್ದರು.

LEAVE A REPLY

Please enter your comment!
Please enter your name here