ನಾಳೆ ಬೆಳಗಾವಿ ಸುವರ್ಣಸೌಧದೆದುರು ಪ್ರತ್ಯೇಕ ರಾಜ್ಯ ಧ್ವಜಾರೋಹಣ

0
18

ಬೆಳಗಾವಿ:

      ನಾಳೆ(ಜು.31) ಬೆಳಗಾವಿ ಸುವರ್ಣಸೌಧದ ಎದುರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ವಿವಿಧ ಮಠಾಧೀಶರು ಮುಂದಾಗಿದ್ದಾರೆ.

      ಸಿಎಂ ಕುಮಾರಸ್ವಾಮಿಯವರು ಈಗಾಗಲೇ ಪ್ರತ್ಯೇಕ ರಾಜ್ಯದ ಹೋರಾಟ ಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಕೂಡ ಪ್ರತ್ಯೇಕತೆಯ ಹೋರಾಟಗಾರರ ಧ್ವನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ. ಈಗಾಗಲೇ ಉತ್ತರ ಕರ್ನಾಟಕದ ಹಲವಾರು ಸಂಘಟನೆಗಳು ಆ.2ರಂದು ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಈ ಬಂದ್‍ಗೆ ಬೆಂಬಲ ನೀಡಬಾರದು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

LEAVE A REPLY

Please enter your comment!
Please enter your name here