ನಾವು ಬೆಳೆದು ಬಂದ ಸಂಸ್ಕೃತಿ ಯಾವತ್ತೂ ಮರೆಯಬಾರದು.

0
14

ಹೊಸಪೇಟೆ :

             ನಾವು ಬೆಳೆದು ಬಂದ ಸಂಸ್ಕøತಿಯನ್ನು ಯಾವತ್ತೂ ಮರೆಯಬಾರದು ಎಂದು ಶಾಸಕ ಆನಂದಸಿಂಗ್ ಹೇಳಿದರು.
ಇಲ್ಲಿನ ವಡಕರಾಯ ದೇವಸ್ಥಾನದಲ್ಲಿ ಪ್ರಸನ್ನ ಯುವ ಮಂಡಳಿ ಆಯೋಜಿಸಿದ್ದ 30ನೇ ವರ್ಷದ ಸಹಸ್ರ ಮೋದಕ ಗಣಹೋಮದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕಾರ್ಯ ನಿರಂತರವಾಗಿ ಯೋಜನಾ ಬದ್ದವಾಗಿ ಸಾಗುತ್ತಿದ್ದರೆ, ಅದಕ್ಕೆ ನಮ್ಮ ಪ್ರಾಮಾಣಿಕತೆ ಹಾಗೂ ತನ್ಮಯತೆ ಮುಖ್ಯವಾಗುತ್ತದೆ. ಇದಕ್ಕೆ ಪ್ರಸನ್ನ ಯುವ ಮಂಡಳಿಯೇ ತಾಜಾ ಉದಾಹರಣೆ ಎಂದರು.
              ಪ್ರಸನ್ನ ಯುವ ಮಂಡಳಿಯು ತನ್ನ ಪರಿಶ್ರಮ ಹಾಗು ತಾಳ್ಮೆಯಿಂದ ಸತತ 30 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಾ ಬಂದಿದೆ. ಸಾರ್ವಜನಿಕ ಜೀವನದಲ್ಲಿ ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕುವುದಷ್ಠೇ ಮುಖ್ಯವಲ್ಲ. ಅವುಗಳ ಅಸ್ತಿತ್ವವನ್ನು ಕಾಪಾಡಿಕೊಂಡು ಹೋಗುವುದು ಮುಖ್ಯ ಎಂದು ತಿಳಿಸಿದರು.
              ಇದೇ ವೇಳೆ ಪ್ರಸನ್ನ ಯುವ ಮಂಡಳಿಗೆ ನೀಡಿದ ನಿವೇಶನದಲ್ಲಿ ಕಲ್ಯಾಣ ಮಂಟಪ ಹಾಗು 10 ಫಲಾನುಭವಿಗಳಿಗೆ ಆಶ್ರಯ ಮನೆ ನೀಡುವಂತೆ ಪ್ರಸನ್ನ ಸೌಹಾರ್ಧ ಸಹಕಾರಿ ನಿ.ಅಧ್ಯಕ್ಷ ಅನಿಲ್ ಜೋಶಿ ಹಾಗು ಗೌಳಿ ನಟರಾಜ ಶಾಸಕ ಆನಂದಸಿಂಗ್‍ಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಆನಂದಸಿಂಗ್ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
                ಈ ಸಂಧರ್ಭದಲ್ಲಿ ಮುಖಂಡರಾದ ಅಶೋಕ್ ಜೀರೆ, ಗುದ್ಲಿ ಪರಶುರಾಮ್, ಅನಂತ ಪದ್ಮನಾಭ, ಧರ್ಮೇಂದ್ರ ಸಿಂಗ್, ಸಂಜಯ್, ಸತೀಷಾ ದಿಕ್ಷೀತ್, ಶ್ರೀನಿವಾಸ್ ರಾಯಸಂ, ಚಿರಂಜೀವಿ, ಶೇಷ, ಸತ್ಯನಾರಾಯಣ ಶೆಟ್ಟಿ, ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್, ಶಂಕರ್ ಮಲಪನಗುಡಿ ಗುಜ್ಜಲ್ ಹನುಮೇಶ್ ಇದ್ದರು.
ಅನ್ನ ಸಂತರ್ಪಣೆ :

ಗಣೇಶ ಉತ್ಸವದ ಅಂಗವಾಗಿ ಇಲ್ಲಿನ ವಡಕರಾಯ ದೇವಸ್ಥಾನದಲ್ಲಿ ಶನಿವಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಚೈತನ್ಯ ಲೇಥ್‍ನ ಮಾಲೀಕ ವೆಂಕಟೇಶ್ ಹಾಗು ಗುದ್ಲಿ ಪರಶುರಾಮ ಅವರು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸನ್ನ ಯುವ ಮಂಡಳಿಯು ಕಳೆದ 30 ವರ್ಷಗಳಿಂದ ನಿರಂತರವಾಗಿ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮುಖಂಡರಾದ ಅನಿಲ್ ಜೋಶಿ, ಶ್ರೀನಿವಾಸ ರಾಯಸಂ, ಗುಜ್ಜಲ ಹನುಮೇಶ, ಮಂಜುನಾಥ, ನಾಗರಾಜ, ವಿಜಯಕುಮಾರ, ಸುರೇಶ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here