ನಿಮ್ಮ ವೈಯಕ್ತಿಕ ಹಣಕಾಸು ವಹಿವಾಟನ್ನು ಸುಸ್ಥಿತಿಯಲ್ಲಿಡಲು ನಿರ್ಲಕ್ಷಿಸಬೇಕಾದ ಐದು ಮಿಥ್ಯೆಗಳು

 -  -  57


1.ಹೆಚ್ಚು ಸಂಖ್ಯೆಯ ಕ್ರೆಡಿಟ್ ಕಾರ್ಡ್ಗಳಿಂದ ಹೊರೆ ಹೆಚ್ಚುತ್ತದೆ.

ಹೆಚ್ಚು ಮಂದಿ ಅಧಿಕ ಸಂಖ್ಯೆಯ ಕ್ರೆಡಿಟ್  ಕಾರ್ಡ್ಗಳು ಸಾಲದ ಹೊರೆಯನ್ನು ಹೆಚ್ಚು ಮಾಡುತ್ತದೆ ಎಂದುಕೊಂಡಿದ್ದಾರೆ.

. ಆದರೆ, ಇದು ಎಲ್ಲ ಸಂದರ್ಭದಲ್ಲೂ ನಿಜವಲ್ಲ. ಕ್ರೆಡಿಟ್ ಕಾರ್ಡ್ನ ಮೊತ್ತವನ್ನು ಅವಧಿಗೆ ಮುನ್ನವೇ ಪಾವತಿಸಿದರೆ, ನೀವು ಸಾಲದ ಹೊರೆಯಲ್ಲಿ ಸಿಲುಕಿಕೊಳ್ಳುವುದಿಲ್ಲ. ಜತೆಗೆ, ನಿಮ್ಮ ಸಾಲದ ಬಳಕೆಯ ಅನುಪಾತವೂ ಕಡಿಮೆ ಆಗುತ್ತದೆ. ನೀವು ನಿಮ್ಮ ಸಾಲ ಬಳಕೆ ಅನುಪಾತವನ್ನು ಶೇ 25 ರಿಂದ 30ರೊಳಗೆ ಇರಿಸಿಕೊಳ್ಳುವುದು ಉತ್ತಮ. ಬೇರೆ ಬೇರೆ ಕಾರ್ಡ್ಗಳನ್ನು ಬಳಸಿಕೊಂಡು, ವೆಚ್ಚವನ್ನು ಹಂಚಿದರೆ, ಇದನ್ನು ಸೂಕ್ತವಾಗಿ ನಿರ್ವಹಿಸಬಹುದು. ನಾನಾ ರಿವಾರ್ಡ್ ಅಂಕಗಳನ್ನು ನೀಡುವ ಹಲವು ಕಾರ್ಡ್ಗಳನ್ನು ಬಳಸಿಕೊಂಡು, ಹೋಟೆಲ್ ಮತ್ತು ಟಿಕೆಟ್ ಕಾಯ್ದಿರಿಸಲು, ಶಾಪಿಂಗ್, ಇಂಧನ ಖರೀದಿ ಇನ್ನಿತರ ವಹಿವಾಟಿನಲ್ಲಿ ದೊರೆಯುವ ನಗದು ವಾಪಸು ಸೌಲಭ್ಯವನ್ನು ನೀವು ಬಳಸಿಕೊಳ್ಳಬಹುದು. ಕಾರ್ಡ್ಗಳನ್ನು ಶಿಸ್ತಿನಿಂದ ಬಳಸಿದರೆ, ಅವು ನಿಮ್ಮ ಹಣಕಾಸು ವ್ಯವಹಾರಕ್ಕೆ ಸೂಕ್ತವಾಗಿರಲಿವೆ.

2. ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಹಣ ಬೇಕು

ಹೊಸದಾಗಿ ಕೆಲಸಕ್ಕೆ ಸೇರುವ ಹೆಚ್ಚಿನ ಯುವಜನರು ತಮ್ಮ ವೇತನದಲ್ಲಿ ಹೂಡಿಕೆ ಎಂದು ಸ್ವಲ್ಪ ಹಣವನ್ನು ಎತ್ತಿಡಲು ಮುಂದಾಗುವುದಿಲ್ಲ. ಆದರೆ, ಮ್ಯೂಚುಯಲ್ ಫಂಡ್ಗಳು ಪ್ರತಿ ತಿಂಗಳು ಕನಿಷ್ಠ ಹೂಡಿಕೆ(500 ರೂ.) ಮಾಡಲು ಅವಕಾಶ ನೀಡುತ್ತವೆ.

ಒಮ್ಮೆಲೇ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬಹುದು ಇಲ್ಲವೇ ಎಸ್ಐಪಿ(ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಮೂಲಕ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡಬಹುದು. ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ, ನಿಮಗೆ ಅಗತ್ಯವಿದ್ದಾಗ ವಾಪಸ್ ತೆಗೆದುಕೊಳ್ಳಬಹುದು.

3. ಸಾಲ ಯಾವಾಗಲೂ ಕೆಟ್ಟದ್ದು

ವೈಯಕ್ತಿಕ ಸಾಲ ಕೆಟ್ಟದ್ದು ಎಂಬುದು ಜನಪ್ರಿಯ ನಂಬಿಕೆ. ಆದರೆ, ಆಸ್ತಿ ಖರೀದಿಯಂಥ ವಿಷಯಕ್ಕೆ ಬಂದಾಗ ಅವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆಸ್ತಿಯಿಂದ ಬರುವ ಆದಾಯವು ನೀವು ಸಾಲಕ್ಕೆ ಕಟ್ಟಬೇಕಾದ ಬಡ್ಡಿಗಿಂತ ಹೆಚ್ಚು ಇದ್ದರೆ, ಕಡಿಮೆ ಆರ್ಥಿಕ ಸಾಮಥ್ರ್ಯದಲ್ಲೇ ನಿಮಗೆ ಲಾಭ ತಂದುಕೊಡಲಿದೆ. ಆಸ್ತಿಯನ್ನು ಖರೀದಿಸಲು ನೀವು ಹಣ ಜೋಡಿಸು ವಷ್ಟರಲ್ಲಿ ಸಾಕಷ್ಟು ಕಾಲ ಕಳೆದು, ಆಸ್ತಿ ದುಬಾರಿ ಆಗಿ ಬಿಡಬಹುದು. ಆಗ ಆಸ್ತಿ ಖರೀದಿ ಸಾಧ್ಯವಾಗುವುದಿಲ್ಲ. ಆದರೆ, ನೀವು ತೆಗೆದುಕೊಳ್ಳುವ ಸಾಲವು ನಿಮ್ಮ ವಾಪಸ್ ಮಾಡುವ ಸಾಮಥ್ರ್ಯ ವನ್ನು ಮೀರಬಾರದು. ಸಾಲ ಮರುಪಾವತಿಗೆ ಯೋಜನೆಯನ್ನು ರೂಪಿಸಿಕೊಂಡಿರಬೇಕು, ತಡ ಇಲ್ಲವೇ ಕಂತು ಪಾವತಿಯಲ್ಲಿ ವ್ಯತ್ಯಯವು ನಿಮ್ಮ ಹಣಕಾಸು ಪರಿಸ್ಥಿತಿಯನ್ನು ಬುಡಮೇಲು ಮಾಡಿಬಿಡುತ್ತದೆ.

4. ವೈಯಕ್ತಿಕ ಹಣಕಾಸು ಯೋಜನೆ ಶ್ರೀಮಂತರಿಗೆ ಮಾತ್ರ

ವೈಯಕ್ತಿಕ ಹಣಕಾಸು ಯೋಜನೆ ಎನ್ನುವುದು  ಎಲ್ಲರಿಗೂ ಅಗತ್ಯ. ನಿಮ್ಮಲ್ಲಿರುವ ಹಣ ಹಾಗೂ ದುಡಿಮೆಯನ್ನು ಸೂಕ್ತವಾದ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಮತ್ತು ಖರ್ಚು ಕಡಿಮೆ ಮಾಡುವುದು ಅದರ ಉದ್ದೇಶ. ನೀವು ಎಷ್ಟು ದುಡಿಯುತ್ತೀರಿ ಎನ್ನುವುದು ಮುಖ್ಯವಲ್ಲ, ಎಷ್ಟು ಉಳಿತಾಯ ಮಾಡುತ್ತೀರಿ ಎನ್ನುವುದು ಮುಖ್ಯ. ನೀವು ಆದಷ್ಟು ಬೇಗ ಹೂಡಿಕೆಯನ್ನು ಆರಂಭಿಸಿದರೆ, ನೀವು ಉಳಿಸುವ ಮೊತ್ತ ಎಷ್ಟೇ ಕಡಿಮೆ ಇರಲಿ, ದೀರ್ಘ ಕಾಲದಲ್ಲಿ ಅದು ದೊಡ್ಡ ಮೊತ್ತ ಆಗಲಿದೆ. ಬಜೆಟ್ ಮೀರಿ ಯಾವತ್ತೂ ಖರ್ಚು ಮಾಡಬಾರದು. ಇದು ಚಿನ್ನದಂಥ ನಿಯಮ.

5. ಮೊದಲು ಖರ್ಚು ಮಾಡು,ಬಳಿಕ ಉಳಿಸು

ಮೊದಲು ಖರ್ಚು ಮಾಡಿ ಬಳಿಕ ಉಳಿಸುವ ಮನಸ್ಥಿತಿಯಿಂದ ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬರಲಿದ್ದು, ಅದು ನೀವು ಉಳಿಸುವ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ದುಡಿಯುವವರೂ ಕೂಡ ಖರ್ಚನ್ನು ನಿಯಂತ್ರಣದಲ್ಲಿ ಇಡದೆ ಇರುವುದರಿಂದ, ಏನನ್ನೂ ಉಳಿಸಲಾಗದೆ ಹೋಗುತ್ತಾರೆ. ಸಾಕಷ್ಟು ದೊಡ್ಡ ಮೊತ್ತವನ್ನು ಉಳಿಸುವುದು ನಿಮ್ಮ ಗುರಿಯಾಗಿದ್ದರೆ, ತಿಂಗಳಿನ ಆರಂಭದಲ್ಲೇ ಉಳಿತಾಯ ಮಾಡಬೇಕಾದ ಮೊತ್ತವನ್ನು ಬದಿಗೆ ತೆಗೆದಿರಿಸಬೇಕು. ನಿಮ್ಮ ಸಂಬಳದ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಉಳಿತಾಯ ಖಾತೆಗೆ ವರ್ಗಾಯಿಸಬೇಕೆಂದು ಬ್ಯಾಂಕ್ಗೆ ಮೊದಲೇ ಸೂಚನೆ ಕೊಡುವುದು ಸೂಕ್ತ.

ಒಂದು ವೇಳೆ ನೀವು ಮೇಲಿನ ಐದು ಮಿಥ್ಯೆಗಳನ್ನು ನಂಬುವವರಾಗಿದ್ದರೆ, ಅದನ್ನು ತ್ಯಜಿಸುವುದು ಸೂಕ್ತ. ಇದರಿಂದ ನಿಮ್ಮ ಹಣಕಾಸು ಪರಿಸ್ಥಿತಿ ಸುಗಮಗೊಳ್ಳಲಿದೆ.

ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್’ಬಜಾರ್

(ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ)

57 recommended
comments icon 0 comments
0 notes
579 views
bookmark icon

Write a comment...

Your email address will not be published. Required fields are marked *