ನಿರೂಪಕ ಚಂದನ್ ಪತ್ನಿ ಆತ್ಮಹತ್ಯೆಗೆ ಯತ್ನ

0
38

ಬೆಂಗಳೂರು: ನಿರೂಪಕ ಹಾಗೂ ರುತೆರೆ ನಟ  ಚಂದನ್ ಸಾವಿನಿಂದಾಗಿ ಮನನೊಂದ ಪತ್ನಿ ಮೀನಾ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.

           ನಟ ಚಂದನ್ ಮೇ 24ರಂದು ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದ ನೊಂದ ಪತ್ನಿ ಮೀನಾ ಮಗ ತುಷಾರ್ (13) ಕತ್ತು ಸೀಳಿ ಕೊಂಡು ನಂತರ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

         ಪತಿ ಚಂದನ್ ದೂರವಾದ ಬೇಸರದಲ್ಲಿ ಇಂದು ಬೆಳಗ್ಗೆ ಪತ್ನಿ ಮೀನಾ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾಲದಕ್ಕೆ ಮನೆಯಲ್ಲಿದ್ದ ಚಾಕು ಬಳಸಿ ತಮ್ಮ 13 ವರ್ಷದ ಪುತ್ರ, ಎಂಟನೇ ತರಗತಿಯಲ್ಲಿ ಓದುತ್ತಿದ್ದ ತುಷಾರ್  ಕತ್ತು ಸೀಳಿ ರಕ್ತಸ್ರಾವ ಹೆಚ್ಚಾದ ಪರಿಣಾಮ, ಮನೆಯಲ್ಲಿಯೇ ತುಷಾರ್ ಮೃತಪಟ್ಟಿದ್ದಾನೆ. 


ತಾಯಿ ಮೀನಾ. ಜೊತೆಗೆ ಬಾತ್ ರೂಮ್ ನಲ್ಲಿ ಟೈಲ್ಸ್ ತೊಳೆಯಲು ಇದ್ದ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅವರ ಸ್ಥಿತಿ ಗಂಭೀರವಾಗಿದ್ದು, ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

           ಚಂದನ್ ಸಾವಿನಿಂದ  ತೀವ್ರ ನೊಂದ  ಪತ್ನಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಂಬಂಧಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here