ನೈತಿಕತೆಯ ಅರಿವು ಮೂಡಿಸುವ ಶಿಕ್ಷಣದ ಅಗತ್ಯವಿದೆ : ಕಣ್ಣನ್

ತುರುವೇಕೆರೆ

       ಪ್ರಾಮಾಣಿಕತೆ, ಸರಳತೆ ಮತ್ತು ಋಣಸಂದಾಯದ ಕೃತಕೃತ್ಯತೆಯ ಭಾವನೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಭದ್ರತೆಯ ಭವಿಷ್ಯ ಕಟ್ಟಿಕೊಡುವ ಶಿಕ್ಷಣಕ್ಕಿಂತ ನೈತಿಕತೆಯ ಅರಿವು ಕಟ್ಟಿಕೊಡುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಸಂಸ್ಕತಿ ಚಿಂತಕ ಮತ್ತು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.

       ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಸುರಭಿ ಸಂಗಮ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ತಾಲ್ಲೂಕು ಕಸಾಪ ವಿವಿಧ ಸಂಘಟನೆಗಳು ಭಾನುವಾರ ಏರ್ಪಡಿಸಿದ್ದ ಶಿಕ್ಷಣ ತಜ್ಞ ದಿ.ಟಿ.ಎಲ್.ನಾಗರಾಜ್ ಅವರ ಜೀವನ ಕಥನ ‘ಅಪ್ಪನೊಳಗೊಬ್ಬ ಗಾಂಧಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದಿ.ಟಿ.ಎಲ್.ನಾಗರಾಜ್ ಕೇವಲ ಶಿಕ್ಷಣ ತಜ್ಞರಲ್ಲದೆ ಸಾಂಸ್ಕøತಿಕ ಕ್ಷೇತ್ರದ ರಾಯಭಾರಿ ಎನಿಸಿದ್ದರು. ಆತ್ಮಸಾಕ್ಷಿಗೆ ಪೂರಕವಾದ ಆಲೋಚನೆ ಮತ್ತು ನಡವಳಿಕೆಗಳಿಂದ ಕೂಡಿದ ಅವರ ಸಮಾಜಮುಖಿ ವ್ಯಕ್ತಿತ್ವ ಸರ್ವಕಾಲಕ್ಕೂ ಆದರ್ಶಪ್ರಾಯವಾದುದು ಎಂದರು.

        ನಿವೃತ್ತ ಪ್ರಾಂಶುಪಾಲ ಎಂ.ಎನ್.ತಮ್ಮಣ್ಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧೀಜಿಯವರು ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ ಮಹತ್ತರವಾದ ಕಾರ್ಯ ಮಾಡಿದರು. ಆದರೆ ಆ ಸ್ವಾತಂತ್ರ್ಯದ ಸವಿಯನ್ನು ಈ ದೇಶದ ಕೋಟ್ಯಂತರ ಜನರು ಸವಿಯಲಾಗಲೇ ಇಲ್ಲ. ಟಿ.ಎಲ್.ಎನ್ ನಂತಹವರು ಆಂತರಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸರ್ವೋದಯದ ಮಹತ್ವದ ಬಗ್ಗೆ ತಾವೇ ಗಾಂಧಿಮಾರ್ಗದಲ್ಲಿ ನಡೆದು ಆದರ್ಶದ ಮಾದರಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಅಪ್ಪನೊಳಗೊಬ್ಬ ಗಾಂಧಿ ಮಹತ್ವದ ಕೃತಿಯಾಗಿದ್ದು ಪ್ರತಿಯೊಬ್ಬ ಮಗನೂ ತನ್ನಪ್ಪನಲ್ಲಿ ಒಬ್ಬ ಗಾಂಧಿಯನ್ನು ಕಂಡಾಗ ಈ ದೇಶ ನಿಜಕ್ಕೂ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕಾಣುತ್ತದೆ ಎಂದರು.

         ಶಾಸಕ ಎ.ಎಸ್.ಜಯರಾಮ್ ಮಾತನಾಡಿ, ಸ್ಥಳೀಯ ಕಲೆ ಮತ್ತು ಸಂಸ್ಕತಿಗಳನ್ನು ಆಯಾ ಪ್ರದೇಶದ ಜನರೆ ಕಾಯ್ದಿಟ್ಟು ದಾಖಲೆಗಳನ್ನಾಗಿ ನಿರ್ಮಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಈ ನಿಟ್ಟಿನಲ್ಲಿ ಜನಜೀವನದ ದಾಖಲೆ ಕೂಡ ಮುಖ್ಯವಾಗುತ್ತದೆ. ಸಾಂಸ್ಕತಿಕ ರಾಯಭಾರಿ ಎನಿಸಿದ್ದ ಟಿಎಲ್‍ಎನ್ ಅವರ ಜೀವನ ಕಥನ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

         ಈ ಸಂದರ್ಭದಲ್ಲಿ ಟಿ.ಪಿ.ಶರದಿ ಅವರಿಂದ ಭರತನಾಟ್ಯ ರಂಗಪ್ರವೇಶವೂ ನಡೆಯಿತು. ಸಮಾರಂಭದಲ್ಲಿ ಕೃತಿಯ ಲೇಖಕ ತುರುವೇಕೆರೆ ಪ್ರಸಾದ್ ದಂಪತಿಯನ್ನು ಸಂಸ್ಕಾರ ಭಾರತಿ ಮತ್ತು ಅಳಸಿಂಗ ಪೆರುಮಾಳ್ ವೇದಿಕೆಯಿಂದ ಸನ್ಮಾನಿಸಲಾಯಿತು. ತಿಪಟೂರು ಶಾಸಕ ಬಿ.ಸಿ.ನಾಗೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿದರು.

          ಕಾರ್ಯಕ್ರಮದಲ್ಲಿ ಸತ್ಯಗಣಪತಿ ಸಮಾಜದ ಅಧ್ಯಕ್ಷ ಟಿ.ಆರ್.ಮಲ್ಲಿಕಾರ್ಜುನ್, ಯುವ ಮುಖಂಡ ಕೊಂಡಜ್ಜಿ ವಿಶ್ವನಾಥ್, ವಕೀಲ ಧನಪಾಲ್, ವೈದ್ಯ ಡಾ.ನಾಗರಾಜ್ , ತಿಪಟೂರು ಸಂಸ್ಕಾರ ಭಾರತಿಯ ರಾಜೀವಲೋಚನ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ರಾಘವೇಂದ್ರ, ದಿವಾಕರ, ಉಷಾ ಶ್ರೀನಿವಾಸ್, ಹಂಸರೇಖಾ ಹರಟೆ ಗೋಷ್ಠಿಯನ್ನು ನಡೆಸಿಕೊಟ್ಟರು. ಲಯನ್ ಎಸ್.ಎಂ.ಕುಮಾರಸ್ವಾಮಿ ಸ್ವಾಗತಿಸಿದರು, ಪ್ರಸಾದ್ ವಂದಿಸಿದರು, ಹಂಸರೇಖಾ ನಿರೂಪಿಸಿದರ

Recent Articles

spot_img

Related Stories

Share via
Copy link
Powered by Social Snap