ಪಂಜಾಬ್ ವಿರುದ್ಧ ಕೆಕೆಆರ್ ಗೆ 31 ರನ್‍ಗಳ ಗೆಲುವು

 -  - 


ಇಂದೋರ್:

ಐಪಿಎಲ್ ಕ್ರಿಕೆಟ್‍ನ 44ನೇ ಪಂದ್ಯದಲ್ಲಿ ಕೆಕೆಆರ್ ತಂಡವು ಪಂಜಾಬ್ ತಂಡವನ್ನು 31 ರನ್‍ಗಳಿಂದ ಸೋಲಿಸಿತು. ಟಾಸ್ ಗೆದ್ದ ಪಂಜಾಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ತಂಡ ಸುನಿಲ್ ನರೈನ್ ಹಾಗೂ ದಿನೇಶ್ ಕಾರ್ತಿಕ್‍ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 245 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತು. ಸುನಿಲ್ ನರೈನ್ 75, ಕಾರ್ತಿಕ್ 50, ರಸೆಲ್ 31, ಲಿನ್ 27, ಉತ್ತಪ್ಪ 24, ಗಿಲ್ ಅಜೇಯ 16, ನಿತಿಶ್ 11 ರನ್‍ಗಳನ್ನು ಗಳಿಸಿದರು.

ಪಂಜಾಬ್ ಪರ ಆಂಡ್ರ್ಯೂ 4, ಶರ್ಮಾ 1, ಬರಿಂದರ್ 1 ವಿಕೆಟ್ ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ರಾಹುಲ್ ಹಾಗೂ ನಾಯಕ ಅಶ್ವಿನ್‍ರ ಹೋರಾಟದ ಬ್ಯಾಟಿಂಗ್‍ನ ನಡುವೆಯೂ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್‍ಗಳನ್ನು ಕಳೆದುಕೊಂಡು 214 ರನ್‍ಗಳನ್ನು ಗಳಿಸಿ 31 ರನ್‍ಗಳಿಂದ ಸೋಲೊಪ್ಪಿಕೊಂಡಿತು. ರಾಹುಲ್ 66, ಅಶ್ವಿನ್ 45, ಫಿಂಚ್ 34, ಗೇಲ್ 21, ಪಟೇಲ್ 19, ಆಂಡ್ರ್ಯೂ 14 ರನ್‍ಗಳನ್ನು ಗಳಿಸಿದರು.

ಕೆಕೆಆರ್ ಪರ ರಸೆಲ್ 3, ಕೃಷ್ಣ 2, ನರೈನ್ 1, ಜವೊನ್ 1, ಯಾದವ್ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ:
ಕೆಕೆಆರ್: 245/6 (20)
ಪಂಜಾಬ್: 214/8 (20)

comments icon 0 comments
0 notes
1 view
bookmark icon

Write a comment...

Your email address will not be published. Required fields are marked *