ಪಂಜಾಬ್ ವಿರುದ್ಧ ಮುಂಬೈಗೆ 3 ರನ್‍ಗಳ ಗೆಲುವು

0
11

ಮುಂಬೈ:

ಐಪಿಎಲ್ ಕ್ರಿಕೆಟ್‍ನ 50ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 3 ರನ್‍ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 186 ರನ್‍ಗಳನ್ನು ಗಳಿಸಿತು. ಪೊಲಾರ್ಡ್ 50, ಕೃನಾಲ್ ಪಾಂಡ್ಯ 32, ಸೂರ್ಯಕುಮಾರ್ ಯಾದವ್ 27, ಇಶಾನ್ 20, ಮಿಚೆಲ್ 11 ರನ್‍ಗಳನ್ನು ಗಳಿಸಿದರು.
ಪಂಜಾಬ್ ಪರ ಆಂಡ್ರ್ಯೂ 4, ಅಶ್ವಿನ್ 2, ಮಾರ್ಕಸ್ 1, ಅಂಕಿತ್ 1 ವಿಕೆಟ್‍ಗಳನ್ನು ಗಳಿಸಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭಿಕ ಆಟಗಾರ ರಾಹುಲ್‍ರ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಹೋರಾಟ ನಡೆಸಿದರೂ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು 183 ರನ್‍ಗಳನ್ನು ಗಳಿಸಿ 3 ರನ್‍ಗಳಿಂದ ಸೋಲೊಪ್ಪಿಕೊಂಡಿತು. ಕೆ.ಎಲ್.ರಾಹುಲ್ 94, ಫಿಂಚ್ 46, ಗೇಲ್ 18, ಪಟೇಲ್ ಅಜೇಯ 10 ರನ್‍ಗಳನ್ನು ಗಳಿಸಿದರು.ಮುಂಬೈ ಪರ ಬೂಮ್ರಾ 3, ಮಿಚೆಲ್ 2 ವಿಕೆಟ್‍ಗಳನ್ನು ಗಳಿಸಿದರು.

ಸ್ಕೋರ್ ವಿವರ:
ಮುಂಬೈ : 186/8 (20)
ಪಂಜಾಬ್: 183/5 (20)

LEAVE A REPLY

Please enter your comment!
Please enter your name here