ಪಟ್ಟಣದ ಪುರಸಭೆ ಖುರ್ಚಿಗಳು ಖಾಲಿ ಖಾಲಿ

0
20

ಮಧುಗಿರಿ:

           ಎಸಿಬಿ ಅಧಿಕಾರಿಗಳು ಪಟ್ಟಣದ ಪುರಸಭೆಗೆ ಮಧ್ಯಾಹ್ನ ಧೀಡರನೆ ಭೇಟಿ ನೀಡಿದಾಗ ಕಛೇರಿಯು ಯಾವೊಬ್ಬ ಅಧಿಕಾರಿಗಳು ಇಲ್ಲದೆ ಸಂಪೂರ್ಣವಾಗಿ ಖುರ್ಚಿಗಳು ಖಾಲಿ ಖಾಲಿಯಾಗಿ ಇಡೀ ಕಛೇರಿಯೇ ಬಿಕೋ ಎನ್ನುವುದನ್ನು ಕಂಡು ಖುದ್ದು ಎಸಿಬಿ ಅಧಿಕಾರಿಗಳೇ ಸಾರ್ವಜನಿಕರಿಂದ ದೂರವಾಣಿ ಸಂಖ್ಯೆಗಳನ್ನು ಪಡೆದು ಪುರಸಭೆಯ ಸಿಬ್ಬಂದಿವರ್ಗದವರಿಗೆ ದೂರವಾಣಿ ಕರೆ ಮಾಡಿದಾಗ ಹೊರಗೆ ಹೋಗಿದ್ದವರೆಲ್ಲಾ ಒಬ್ಬಬ್ಬರಾಗಿ ಒಟ್ಟು 7 ಜನ ಸಿಬ್ಬಂದಿಗಳು ಡಿವೈಎಸ್‍ಪಿ ಮೋಹನ್ ರವರ ಮುಂದೆ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಪುರಸಭೆಯ ಕಛೇರಿಯಲ್ಲಿ ಸರಿಯಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ ಮತ್ತು ಸಿಬ್ಬಂದಿ ವರ್ಗದವರು ವಿನಾಕಾರಣ ಕರ್ತವ್ಯದ ವೇಳೆಯಲ್ಲಿ ಕಛೇರಿಯಿಂದ ಹೋಗುತ್ತಿದ್ದಾರೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದ್ದರೆಂದು ಹಾಗೂ ಪ್ರತಿಯೊಂದು ಕೆಲಸಕ್ಕೂ ಮಧ್ಯ ವರ್ತಿಗಳ ಹಾವಳಿ ಇದೆ ಎಂದು ಸಾರ್ವಜನಿಕರ ದೂರಿದ್ದರು ಎಂದು ಹೇಳಲಾಗುತ್ತಿದೆ.
            ನಾಗರೀಕರ ದೂರಿನ್ವಯ ಎಸಿಬಿ ಡಿವೈಎಸ್‍ಪಿ ಮೋಹನ್ ಮತ್ತು ಸಿಬ್ಬಂದಿ ವರ್ಗದವರು ಬುಧವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಪುರಸಭೆಗೆ ಭೇಟಿ ನೀಡಿದಾಗ ಕಛೇರಿಯಲ್ಲಿ ಯಾರೊಬ್ಬರು ಕಂಡು ಬಂದಿಲ್ಲ ನಂತರ ಸಿವಿಲ್ ಇಂಜಿನಿಯರ್ ಶ್ರೀರಂಗ. ಪ್ರಭಾರ ಆರ್ ಐ ಅನ್ಸರ್ ಪಾಷ, ಕಿರಿಯ ಆರೋಗ್ಯ ನೀರೀಕ್ಷಕ ಉಮೇಶ್, ಲೆಕ್ಕಾಶೋಧಕಿ ಸಲ್ಮಾ ಕೌಸರ್ ಹಾಗೂ ಸಿಬ್ಬಂದಿಗಳಾದ ನಾಗಲಕ್ಷ್ಮಮ್ಮ ಭಾಗ್ಯಮ್ಮ, ಶ್ರೀನಿವಾಸ ಶೆಟ್ಟಿ, ಕಛೇರಿಯಲ್ಲಿ ಕಂಡು ಬಂದರು ಪ್ರಭಾರ ಮುಖ್ಯಾಧಿಕಾರಿ ಮಾತ್ರ ಎಸಿಬಿ ಅಧಿಕಾರಿಗಳ ಕಣ್ಣಿಗೆ ಕಂಡಿಲ್ಲ.
ಗೌರಿ ಹಬ್ಬದ ಪ್ರಯುಕ್ತ ಮಹಿಳಾ ಸಿಬ್ಭಂದಿಗಳು ಮಧ್ಯಾಹ್ನವೇ ಕಛೇರಿಯಿಂದ ನಿರ್ಗಮಿಸಿದ್ದು ಆರ್ ಓ ಸಂತೋಷ್ ಮತ್ತು ಕೃಷ್ಣ ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಲಯಕ್ಕೆ ಕೆಲಸದ ನಿಮಿತ್ತ ಹೋಗಿದ್ದರೆಂದು ಹಾಗೂ ಹಿರಿಯ ಆರೋಗ್ಯ ನೀರೀಕ್ಷಕ ಬಾಲಾಜಿ ಗಣಪತಿ ಪ್ರತಿಷ್ಟಾಪನೆಯ ಅರ್ಜಿಗಳ ಸ್ಥಳ ಪರೀಶೀಲನೆ ಮತ್ತು ಕುಡಿಯುವ ನೀರಿನ ಕೊಳಾಯಿಗಳ ಹೊಡೆದು ಹೋಗಿದ್ದು ಸರಿಪಡಿಸುವ ಕಾರ್ಯದಲ್ಲಿದ್ದರೆಂದು ಪ್ರಥಮ ದರ್ಜೆ ಸಹಾಯ ಗುರುಪ್ರಸಾದ್ ಮಾತ್ರ ರಜಾ ಪತ್ರ ನೀಡಿದ್ದಾರೆ ಇನ್ನೂ ಕೆಲ ಸಿಬ್ಬಂದಿ ವರ್ಗದವರು ಯಾರಿಗೂ ಮಾಹಿತಿ ನೀಡದೆ ಕಛೇರಿಯಿಂದ ಹೋಗಿದ್ದು ಯಾರು ಯಾರು ಅಮಾನತ್ತಾಗುರೊ ಗೊತ್ತಿಲ್ಲ ..? ಎಂಬ ಗುಮ್ಮಾ ಅಧಿಕಾರಿಗಳಲ್ಲಿ ಕಾಡ ತೊಡಗಿದೆ.
            ಪ್ರಥಮ ದರ್ಜೆ ಸಹಾಯಾಕ ಶಿವಶಂಕರ್ ಎಂಬುವವರನ್ನು ಬಂಧಿಸಲು ಬಂದಿದ್ದಾರೆಂಬುದರ ಜತೆಗೆ ಸಂಜೆ ಹೊತ್ತಿಗೆ ತುಮಕೂರಿನಲ್ಲಿ ಆರೋಪಿ ಶಿವಶಂಕರ್ ರವರನ್ನು ತುಮಕೂರಿನ ಕೋತಿ ತೋಪಿನಲ್ಲಿರುವ ಮನೆಯ ಮುಂದೆಯೇ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂಬ ಮಾತುಗಳು ಪಟ್ಟಣದಾದ್ಯಂತಹ ಚರ್ಚಾ ವಿಷಯಗಳಾಗಿ ಹರಿದಾಡಿತು.

LEAVE A REPLY

Please enter your comment!
Please enter your name here