ಪತ್ತಿನ ಸಹಕಾರ ಸಂಘ : 80 ಲಕ್ಷ ರೂ. ನಿವ್ವಳ ಲಾಭ

0
38

ಚೇಳೂರು.

    ಗ್ರಾಮೀಣ ಮಟ್ಟದ ಈ ಪತ್ತಿನ ಸಹಕಾರ ಸಂಘ ಕೇವಲ 15 ವರ್ಷದಲ್ಲಿಯೇ ತನ್ನ ಸಂಘದ ಜೊತೆಗೆ ಹಂತ ಹಂತವಾಗಿ ಇನ್ನೂ 3 ಶಾಖೆಗಳನ್ನು ಆರಂಭ ಮಾಡಿಕೊಂಡು ಪ್ರಸ್ತುತ ವರ್ಷಕ್ಕೆ 101 ಕೋಟಿ 18 ಲಕ್ಷದ 73 ಸಾವಿರದ 729 ರೂ ಗಳ ವ್ಯವಹಾರವನ್ನು ಮಾಡಿದೆ. ಇಷ್ಟು ದೊಡ್ಡ ಮೊತ್ತದ ವ್ಯವಹಾರ ಎ¯್ಲರ ಸಹಕಾರದಿಂದಾಗಿದೆ ಎಂದು ಚೇಳೂರಿನ ಧಾನ್ಯ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜಯ್ಯ ಹೇಳಿದರು.

    ಇವರು ಚೇಳೂರಿನ ಸಿ.ಆರ್.ಟಿ.ಸಮುದಾಯದಲ್ಲಿ ಶನಿವಾರ ನಡೆದ 16 ನೇ ವರ್ಷದ ಧಾನ್ಯ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಬೆಳೆವಣಿಗೆಗೆ ಎಲ್ಲರೂ ಶ್ರಮ ವಹಿಸಿ ಜವಾಬ್ದಾರಿಯಿಂದ ವ್ಯವಹಾರ ಮಾಡಿರುವುದರಿಂದ ಈ ಸಂಘವು ಒಳ್ಳೆಯ ಸಾಧನೆ ಮಾಡಲು ಸಹಾಯವಾಗಿದೆ. ಜೊತೆಗೆ ಸಂಘದಲ್ಲಿ ವ್ಯವಹಾರವನ್ನು ಮಾಡುವವರು ಕಾಲಕ್ಕೆ ಸರಿಯಾಗಿ ಮರು ಪಾವತಿಯನ್ನು ಮಾಡುವುದರಿಂದ ತಾವು ಸಹ ಆರ್ಥಿಕವಾಗಿ ಮುಂದೆ ಬಂದು ಸಂಘದ ಜೊತೆಗೆ ಬೇರೆ ಸದಸ್ಯರಿಗೂ ಅನುಕೂಲವಾಗುತ್ತದೆ. ಈಗ ಎ¯್ಲರ ಸಹಕಾರದಿಂದ ಈ ನಿಮ್ಮ ಪತ್ತಿನ ಸಹಕಾರ ಸಂಘವು 2017-18 ನೇ ಸಾಲಿಗೆ ರೂ. 79,88,710.89 ನಿವ್ವಳಲಾಭ ಬಂದಿದೆ ಎಂದರು.

    ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ., 80 ರ ಮೇಲೆ ಅಂಕವನ್ನು ಪಡೆದವರನ್ನು ಪುರಸ್ಕರಿಸಲಾಯಿತು. ಸಂಘದ ನಿರ್ದೇಶಕರಾದ ಸಿ.ಬಿ.ಚಿಕ್ಕೇಗೌಡ, ಜಗದೀಶ್ವರಯ್ಯ, ಎನ್.ಎ.ಹಯಾತ್‍ಸಾಬ್, ಎನ್.ಎಚ್.ಜಯಣ್ಣ, ಎಸ್.ಆರ್.ಗಂಗಾಧರಯ್ಯ, ಕೆ.ಎಂ.ಶಿವಣ್ಣ, ಕೆ.ಎಂ.ಈಶ್ವರಯ್ಯ, ಆರ್.ಚಂದ್ರಶೇಖರಪ್ಪ, ಲಕ್ಷ್ಮೀಬಾಯಿ, ರಾಜಮ್ಮ, ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್, ಸಿಬ್ಬಂದಿ ವರ್ಗ, ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here